More

    ದಂಪತಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿ ಸ್ವಂತ ತಮ್ಮನ ಮಕ್ಕಳಿಗೆ ಹೋಗುತ್ತಾ? ಅದಕ್ಕಾಗಿ ಏನು ಮಾಡಬೇಕು?

    ದಂಪತಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿ ಸ್ವಂತ ತಮ್ಮನ ಮಕ್ಕಳಿಗೆ ಹೋಗುತ್ತಾ? ಅದಕ್ಕಾಗಿ ಏನು ಮಾಡಬೇಕು?ಪ್ರಶ್ನೆ: ನಮ್ಮ ದೊಡ್ಡಪ್ಪ ಅಂದರೆ ನಮ್ಮ ತಂದೆಯ ಖಾಸಾ ಅಣ್ಣನಿಗೆ ಸಂತತಿ ಇಲ್ಲ. ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ದೊಡ್ಡಪ್ಪ ಮತ್ತು ದೊಡ್ಡಮ್ಮನೇ ಸಾಕಿದ್ದಾರೆ.

    ಈಗ ನಮ್ಮ ಮುಂದೆ ಇರುವ ಪ್ರಶ್ನೆ ಎಂದರೆ ದಂಪತಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿ ಸ್ವಂತ ತಮ್ಮನ ಮಕ್ಕಳಿಗೆ ಹೋಗುತ್ತಾ? ಅಂದರೆ ನಮಗೆ ನಾಲ್ಕು ಎಕರೆ ಜಮೀನು ಇದೆ. ಅದನ್ನು ದೊಡ್ಡಪ್ಪ ನೋಂದಾಯಿಸಿ ಕೊಟ್ಟಿದ್ದಾರೆ. ದೊಡ್ಡಪ್ಪ ಮತ್ತು ದೊಡ್ಡಮ್ಮ ತೀರಿಕೊಂಡಾಗಿನಿಂದಲೂ ಆಸ್ತಿಯನ್ನು ನಾವೇ ಅನುಭವಿಸುತ್ತ ಬಂದಿದ್ದೇವೆ. ಈಗ ಅವರ ಎಲ್ಲ ಆಸ್ತಿಗಳಿಗೂ ನಾವೇ ಮಾಲೀಕತ್ವ ಪಡೆಯಲು ನಾವು ಏನು ಮಾಡಬೇಕು?

    ಉತ್ತರ: ನೀವು ನಿಮ್ಮ ದೊಡ್ಡಪ್ಪನಿಗೆ ಸೇರಿದ ಎಲ್ಲ ಆಸ್ತಿಗಳ ಖಾತೆ ಬದಲಾವಣೆ ನಿಮ್ಮ ಮತ್ತು ನಿಮ್ಮ ತಂಗಿಯ ಹೆಸರಿಗೆ ಆಗಬೇಕೆಂದು ರೆವಿನ್ಯೂ ಅಧಿಕಾರಿಗಳಿಗೆ ಅರ್ಜಿ ಕೊಡಿ. ಯಾರಾದರೂ ತಕರಾರು ಕೊಡುತ್ತಾರೆಯೇ ಎಂದು ಗಮನಿಸಿ. ಯಾರೂ ತಕರಾರು ಕೊಡದಿದ್ದರೆ ಖಾತೆ ಬದಲಾಯಿಸಿಕೊಂಡು ಕಂದಾಯ ಕಟ್ಟಿಕೊಂಡು ಅನುಭವಿಸುತ್ತ ಬನ್ನಿ. ಕೊಳ್ಳುವವರು ಮುಂದೆ ಬಂದರೆ ಮಾರಾಟವನ್ನೂ ಮಾಡಬಹುದು.

    ಒಂದುವೇಳೆ ಯಾರಾದರೂ ತಕರಾರು ಮಾಡಿದರೆ, ಆಗ ಅಂತಹ ವ್ಯಕ್ತಿಗಳ ವಿರುದ್ಧ ನೀವು ನ್ಯಾಯಾಲಯದಲ್ಲಿ ಹಕ್ಕು ಘೋಷಣೆಯ ದಾವೆಯನ್ನು ಹಾಕಬೇಕಾಗುತ್ತದೆ.

    ನೀವು ನಿಮ್ಮ ದೊಡ್ಡಪ್ಪನ ಎರಡನೇ ದರ್ಜೆಯ ವಾರಸುದಾರರಾದ್ದರಿಂದ ಅವರ ಆಸ್ತಿಗೆ ನೀವೇ ಮಾಲೀಕರು ಎಂದು ನಿಮ್ಮ ಹಕ್ಕನ್ನು ಘೋಷಿಸಿ ಎಂದು ನ್ಯಾಯಾಲಯವನ್ನು ಕೇಳಿಕೊಳ್ಳಬಹುದು. ಅಥವಾ ಸಕ್ಸೆಷನ್ ಸರ್ಟಿಫಿಕೇಟ್ ಪಡೆಯಲೂ ನೀವು ವಕೀಲರ ಸಹಾಯ ಪಡೆದು ಅರ್ಜಿ ಹಾಕಬಹುದು. ನಿಮ್ಮ ದೊಡ್ಡಪ್ಪನ ಮೊದಲನೇ ದರ್ಜೆಯ ವಾರಸುದಾರರು, ಅಂದರೆ, ನಿಮ್ಮ ದೊಡ್ಡಮ್ಮ, ಅವರ ಮಕ್ಕಳು ಮತ್ತು ನಿಮ್ಮ ದೊಡ್ಡಪ್ಪನ ತಾಯಿ ಇಲ್ಲದೇ ಇರುವುದರಿಂದ, ನಿಮ್ಮ ದೊಡ್ಡಪ್ಪನ ಎರಡನೇ ದರ್ಜೆಯ ವಾರಸುದಾರರಾಗಿ ಅವರ ತಮ್ಮನ ಮಕ್ಕಳಿಗೆ ಆಸ್ತಿಯ ಮಾಲೀಕತ್ವ ಬರುತ್ತದೆ.
    ನಿಮ್ಮ ದೊಡ್ಡಪ್ಪನಿಗೆ ಬೇರೆ ತಮ್ಮಂದಿರು ಇದ್ದು, ಅವರಿಗೂ ಮಕ್ಕಳಿದ್ದರೆ ಅವರಿಗೂ ಆಸ್ತಿಯಲ್ಲಿ ಭಾಗ ಬರುತ್ತದೆ.

    ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು

    ಪೋಷಕರು ಬದುಕಿರಲಿ, ಇಲ್ಲದಿರಲಿ… ಸಾಕು ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ- ಕಾನೂನು ಏನಿದೆ ನೋಡಿ…

    ಪ್ರಿಯತಮನ ಮೆಸೇಜ್‌ ಓದಿ ವಾಟ್ಸ್​ಆ್ಯಪ್‌ ಆಧಾರದ ಮೇಲೆ ಪತ್ನಿಗೆ ಡಿವೋರ್ಸ್‌ ಕೊಡಲಾಗದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts