More

    ಹೀಗೊಂದು ಆತ್ಮೀಯ ಬೀಳ್ಕೊಡುಗೆ: ಪೊಲೀಸ್‌ ವ್ಯಾನ್‌ನ ಬಾನೆಟ್‌ ಮೇಲೆ ಕುಳ್ಳರಿಸಿ ಊರೆಲ್ಲಾ ನಡೆಯಿತು ಮೆರವಣಿಗೆ

    ಮುಂಬೈ: ಪೊಲೀಸ್‌ ಇಲಾಖೆಯಲ್ಲಿ ಪೊಲೀಸರಿಗೂ ತಿಳಿಯದ ಸಾಕ್ಷ್ಯಾಧಾರಗಳನ್ನು ಹುಡುಕಿ ಹೆಕ್ಕಿ ತೆಗೆದು ಎಷ್ಟೋ ಅಪರಾಧ ಕೃತ್ಯಗಳನ್ನು ಬಯಲಿಗೆಳೆಯುವಲ್ಲಿ ನಂ1 ಸ್ಥಾನದಲ್ಲಿ ಇರುವುದು ಶ್ವಾನದಳ. ನಿಗೂಢ ರಹಸ್ಯಗಳನ್ನು ಭೇದಿಸುವಲ್ಲಿ ಇದರ ಪಾತ್ರ ಬಹು ಅಮೂಲ್ಯವಾದದ್ದು.

    ಇದೇ ಕಾರಣಕ್ಕೆ ಹಲವಾರು ವರ್ಷ ಪೊಲೀಸ್‌ ಇಲಾಖೆಯಲ್ಲಿ ದುಡಿದ ನಾಯಿಗಳಿಗೆ ಆತ್ಮೀಯವಾಗಿ ಬೀಳ್ಕೊಡುವುದು ಉಂಟು. ಅನೇಕ ವರ್ಷಗಳವರೆಗೆ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಇಲಾಖೆಯ ಸಿಬ್ಬಂದಿಗೆ ನೀಡುವ ಹೃದಯಪೂರ್ವಕ ಬೀಳ್ಕೊಡುಗೆಯಂತೆಯೇ ಶ್ವಾನದಳದ ನಾಯಿಗಳಿಗೂ ನೀಡಲಾಗುತ್ತದೆ.
    ಅಂಥದ್ದೇ ಒಂದು ಆತ್ಮೀಯ ಬೀಳ್ಕೊಡುಗೆ ಪಡೆದುಕೊಂಡಿರುವ ನಾಯಿ ನಾಸಿಕ್ ಸಿಟಿ ಪೊಲೀಸ್ ಪಡೆ ಮತ್ತು ಬಾಂಬ್ ಪತ್ತೆದಳದಲ್ಲಿ 11 ವರ್ಷ ಕಾರ್ಯನಿರ್ವಹಿಸಿದ್ದ ಸ್ಪೈಕ್ ಹೆಸರಿನ ನಾಯಿ. 11 ವರ್ಷಗಳ ಸೇವೆಯ ನಂತರ ಈ ನಾಯಿಯನ್ನು ನಿವೃತ್ತಗೊಳಿಸಲಾಗಿದೆ.

    ಆದರೆ ಇಷ್ಟೂ ವರ್ಷಗಳವರೆಗೆ ಅದು ನಿಷ್ಠೆಯಿಂದ ಮಾಡಿದ ಕಾರ್ಯಕ್ಕೆ ಶ್ಲಾಘನೆ ಸೂಚಿಸುವ ಸಲುವಾಗಿ ಬೀಳ್ಕೊಡುಗೆ ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗಿದೆ.

    ಸ್ಪೈಕ್ ಅನ್ನು ಪೊಲೀಸ್ ವ್ಯಾನ್‍ನ ಬಾನೆಟ್‍ನಲ್ಲಿ ಕೂರಿಸಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ವಾಹನವನ್ನು ಬಲೂನ್ ಮತ್ತು ಹೂವಿನಿಂದ ಶೃಂಗಾರ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕವಾಗಿ ಅದನ್ನು ಬೀಳ್ಕೊಟ್ಟಿದ್ದಾರೆ. ಕಷ್ಟಪಟ್ಟು ನಿಯತ್ತಿನಿಂದ ಕೆಲಸ ಮಾಡಿರುವ ಶ್ವಾನದ ಕಾರ್ಯಕ್ಕೆ ಸಿಬ್ಬಂದಿ ಮೆಚ್ಚುಗೆಯ ಮಾತುಗಳನ್ನಾಡಿ ಕೇಕ್ ಕತ್ತರಿಸಿ ಬೀಳ್ಕೊಟ್ಟು ಸಂಭ್ರಮಿಸಿದ್ದಾರೆ.

    ಗೋಲ್ಡನ್ ಲ್ಯಾಬ್ರಡಾರ್ 2010 ರಲ್ಲಿ ನಾಸಿಕ್ ಬಾಂಬ್ ಡಿಟೆಕ್ಷನ್ ಡಾಗ್ ಸ್ಕ್ವಾಡ್‍ಗೆ ಸೇರಿತ್ತು. ಗುಪ್ತ ಪೆಟ್ರೋಲ್ ಬಾಂಬ್‍ಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನವು ಅತ್ಯಂತ ಪರಿಣತಿಯನ್ನು ಹೊಂದಿತ್ತು.

    ನಾಯಿಗೆ ತಿಳಿಯದ ವಿಷಯ ಯಾವುದೂ ಇಲ್ಲ. ಅದರಂತೆಯೇ ತನಗೆ ಆತ್ಮೀಯವಾಗಿ ಬೀಳ್ಕೊಡುವುದನ್ನು ಮನಗಂಡಿರುವ ಸ್ಪೈಕ್ ಶಾಂತವಾಗಿ ಕುಳಿತು ಮೆರವಣಿಗೆಯಲ್ಲಿ ಸಾಗಿದೆ. ಅದೇ ರೀತಿ ಹಲವು ವರ್ಷ ಒಂದೇ ಇಲಾಖೆಯಲ್ಲಿ ದುಡಿದು ನಿವೃತ್ತಿಯ ದಿನ ಎಷ್ಟೋ ಸಿಬ್ಬಂದಿ ಭಾವುಕರಾಗುವುದು ಉಂಟು. ಈ ನಾಯಿಯ ಮೊಗದಲ್ಲಿಯೂ ಅಂಥದ್ದೊಂದು ಭಾವುಕತೆ ಎದ್ದು ಕಾಣಿಸುತ್ತಿತ್ತು.

    ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್‌ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?

    ಶಾಕಿಂಗ್‌! ಶಾಲೆಗೆ ನುಗ್ಗಿದ ದುರ್ಷರ್ಮಿಗಳು- 317 ವಿದ್ಯಾರ್ಥಿನಿಯರನ್ನು ಅಪಹರಿಸಿ ಕರೆದೊಯ್ದರು…

    ಯೂನಿಫಾರ್ಮ್‌ನಲ್ಲಿಯೇ ಎಂಟ್ರಿ ಕೊಟ್ಟ- ಮಾಡಬಾರದ್ದು ಮಾಡಿ ಪರಾರಿಯಾಗುವಾಗ ಸಿಕ್ಕಿಬಿದ್ದ! ಸಿಸಿಟಿವಿಯಲ್ಲಿ ಪೊಲೀಸನ ಕಳ್ಳಾಟ

    ಜೈಲಾಧಿಕಾರಿ ಸೇರಿದಂತೆ ಎಂಟು ಮಂದಿಯ ಕೊಲೆ ಮಾಡಿ 100ಕ್ಕೂ ಅಧಿಕ ಕೈದಿಗಳು ಎಸ್ಕೇಪ್‌‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts