More

    ಗುರುಗಳು ಗೌರವ ಕಾಪಾಡಿಕೊಂಡು ಸೇವೆ ಸಲ್ಲಿಸಲಿ

    ಹಾಸನ: ವಿದ್ಯೆ ಕಲಿಸುವ ಗುರುವಿಗೆ ಸಮಾಜದಲ್ಲಿ ಗೌರವವಿದ್ದು, ಇದನ್ನು ಗುರುಗಳಾದವರು ಕಾಪಾಡಿಕೊಂಡು ವೃತ್ತಿಸೇವೆ ಸಲ್ಲಿಸಬೇಕು ಎಂದು ಹುಲಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಮೀನಾಕ್ಷಿ ಹೇಳಿದರು.

    ಅರಕಲಗೂಡು ತಾಲೂಕಿನ ಹುಲಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


    ನನ್ನ ವೃತ್ತಿಜೀವನದಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಿದ್ದು ಅತ್ಯಮೂಲ್ಯ ಕ್ಷಣವಾಗಿದೆ. ಕಳೆದ 33 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಗಳಿಸಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಭಾವುಕರಾದರು.


    ನಿವೃತ್ತ ಶಿಕ್ಷಕ ನಾಗರಾಜು ಮಾತನಾಡಿ, ಬೇಸಿಗೆ ರಜೆ ಅವಧಿಯಲ್ಲಿ ನಿವೃತ್ತಿ ಹೊಂದುವ ಶಿಕ್ಷಕರಿಗೆ ತುಂಬಾ ಬೇಸರವಾಗುತ್ತದೆ. ಮಕ್ಕಳಿಗೆ ಬೋಧನೆ ಮಾಡಿದ ಶಿಕ್ಷಕರು, ಮಕ್ಕಳಿಲ್ಲದ ಅವಧಿಯಲ್ಲಿ ನಿವೃತ್ತಿ ಹೊಂದುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರಿ ಸೇವೆಗೆ ಸೇರಿದವರಿಗೆ ನಿವೃತ್ತಿ ಸಹಜ ಪ್ರಕ್ರಿಯೆ ಎಂದು ಹೇಳಿದರು.

    ಶಿಕ್ಷಕರಾದ ಜನಾರ್ದನ್, ಲೋಕೇಶ್, ಯೋಗರಾಜ್, ಸದಾಶಿವಪ್ಪ, ಕುಮಾರ್, ವಿಜಯ್‌ಕುಮಾರ್ ಮಾತನಾಡಿದರು. ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಟಿ. ಕಾಳಪ್ಪ, ಹಿರಿಯ ವಕೀಲ ಶಂಕರಯ್ಯ, ದೇವರಾಜ್, ರಾಜಶೇಖರ್, ಮಂಜೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts