More

    ನಿತ್ಯಾನಂದ ದಿಢೀರ್‌ ಪ್ರತ್ಯಕ್ಷ- ಶಾಕಿಂಗ್‌ ಹೇಳಿಕೆ ಕೊಟ್ಟು ಮಠಾಧಿಪತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ‘ಕೈಲಾಸವಾಸಿ’

    ಬೆಂಗಳೂರು: ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ನಡುವೆಯೇ ಏಕಾಏಕಿ ಕಣ್ಮರೆಯಾಗಿ ಕೈಲಾಸದಲ್ಲಿ ನೆಲೆಸಿರುವುದಾಗಿ ಘೋಷಣೆ ಮಾಡಿದ್ದ ನಿತ್ಯಾನಂದ ಸ್ವಾಮಿ, ಇದೀಗ ಮತ್ತೆ ದಿಢೀರ್‌ ಪ್ರತ್ಯಕ್ಷರಾಗಿದ್ದಾರೆ.

    ಇದೀಗ ಅವರು ನೀಡಿರುವ ಹೇಳಿಕೆಯಿಂದ ಮಧುರೈ ಆಧೀನಂನ ಮಠಾಧೀಶರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣ ನಿತ್ಯಾನಂದ ತಾನೇ ಈ ಮಠದ ಮಠಾಧೀಶ ಎಂದು ಘೋಷಣೆ ಮಾಡಿದ್ದಾರೆ! ಮಧುರೈ ಆಧೀನಂನ 293ನೇ ಮಠಾಧೀಶನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.

    ನಾಲ್ಕು ದಶಕಗಳ ಕಾಲ ಮಧುರೈ ಆಧೀನಂನ ಪೀಠಾಧಿಪತಿಯಾಗಿದ್ದ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು ಆಗಸ್ಟ್ 13 ರಂದು ಉಸಿರಾಟದ ಸಮಸ್ಯೆಯಿಂದ ಮಧುರೈನ ನಿಧನರಾಗಿದ್ದರು.2019ರಲ್ಲಿ ಅರುಣಗಿರಿನಾಥ ಸ್ವಾಮಿಗಳು ಕಿರಿಯ ಧರ್ಮಗುರುಗಳಾಗಿ ಹೆಸರಿಸಲ್ಪಟ್ಟ ಹರಿಹರ ದೇಶಿಕ ಜ್ಞಾನಸಂಬಂತ ಪರಮಾಚಾರ್ಯ ಅವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಲಾಗಿದ್ದು, ಅವರಿಗೆ ಪೀಠಾಧಿಪತಿಯಾಗಿ ಪಟ್ಟಕಟ್ಟಲಾಗುವುದು ಎಂದು ಮಠದ ಅಧಿಕಾರಿಗಳು ಘೋಷಿಸಿದ್ದಾರೆ. ಆದರೆ ಈ ನಡುವೆಯೇ ನಿತ್ಯಾನಂದ ಹೇಳಿಕೆ ನೀಡಿದ್ದು, ಇದಾಗಲೇ ನಾನು ಈ ಸ್ಥಾನದ ಮಠಾಧೀಶನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದಿದ್ದಾರೆ.

    ‘ಎಲ್ಲಾ ಆಧ್ಯಾತ್ಮಿಕ, ಧಾರ್ಮಿಕ, ಸಾಂಪ್ರದಾಯಿಕ ಆಚರಣೆಗಳ ಪ್ರಕಾರ ಕೈಲಾಸದ ವಿಶ್ವ ನಿಯಮಗಳು ಮತ್ತು ಮಧುರೈ ಆಧೀನಂನ ಅಧಿಕೃತ ಉತ್ತರಾಧಿಕಾರದ ವಿಧಿ ವಿಧಾನಗಳ ಮೂಲಕ 293 ನೇ ಮಠಾಧೀಶನಾಗಿ ಅಧಿಕಾರ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡಿವೆ’ಎಂದು ಅವರು ಜಾಲತಾಣದಲ್ಲಿ ವಿವರಣೆ ನೀಡಿದ್ದಾರೆ.

    ಇದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿರುವ ನಿತ್ಯಾನಂದ, 2012ರ ಏಪ್ರಿಲ್‌ 27ರಂದು ಅರುಣಗಿರಿನಾಥ ಸ್ವಾಮಿಗಳವರು ನನ್ನನ್ನು ಕಿರಿಯ ಧರ್ಮಗುರುಗಳೆಂದು ಔಪಚಾರಿಕವಾಗಿ ಘೋಷಿಸಿದ್ದರು. ಅದೇ ವರ್ಷದ ಡಿಸೆಂಬರ್ 19ರಂದು ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ನಂತರ, ಅರುಣಗಿರಿನಾಥ ಸ್ವಾಮಿಗಳು ಇಬ್ಬರು ಕಿರಿಯ ಮಠಾಧೀಶರನ್ನು ನೇಮಕ ಮಾಡುವ ಮೂಲಕ ಕಾನೂನು ಸಂಘರ್ಷಕ್ಕೆ ಸಿಲುಕಿದ್ದರು. ಆದರೆ, ಈಗಲೂ ಮಠದ ಕಿರಿಯ ಸ್ವಾಮೀಜಿಯಾಗಿ ಮಠದ ಭಕ್ತರಿಗೆ ಆನ್‌ಲೈನ್‌ನಲ್ಲಿ ನಿತ್ಯವೂ ಆಶೀರ್ವಚನ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಆನ್‌ಲೈನ್‌ ಕ್ಲಾಸ್‌ಗೆ ಡಿಸ್ಟರ್ಬ್‌ ಮಾಡಬೇಡಮ್ಮಾ ಎಂದು ಆತ್ಮಹತ್ಯೆ ಮಾಡಿಕೊಂಡ ಕಲಬುರಗಿ ವಿದ್ಯಾರ್ಥಿ!

    ಇವಳ ಗಂಡನೂ ಅವನೇ, ಅವಳ ಗಂಡನೂ ಇವನೇ- ಅವಳಿ ಜವಳಿ ಕಥೆ ಕಟ್ಟಿ ಇಬ್ಬರನ್ನೂ ಒಲಿಸಿಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts