More

    ಕೂಡಿಟ್ಟ ಹಣವನ್ನು ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದ ಬಾಲಕನಿಗೆ ಸರ್ಪೈಸ್​ ಕೊಟ್ಟ ಸಿಎಂ

    ಮಧುರೈ: ಪೂರ್ತಿ ದೇಶ ಕರೊನಾ ಸೋಂಕಿನಿಂದಾಗಿ ನಲುಗಿದೆ. ಹೀಗಿರುವಾಗ ಅನೇಕರು ಅವರವರ ರಾಜ್ಯಗಳ ಕರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ. ಅದೇ ರೀತಿ ಇತ್ತೀಚೆಗೆ ತಮಿಳುನಾಡಿನ ಮಧುರೈನ ಏಳು ವರ್ಷದ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಹಣವನ್ನು ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದು, ಅಲ್ಲಿನ ನೂತನ ಸಿಎಂ ಎಂ.ಕೆ.ಸ್ಟಾಲಿನ್​ ಆತನಿಗೆ ಸರ್ಪೈಸ್​ ನೀಡಿದ್ದಾರೆ.

    ಮಧುರೈನ ಹರೀಶ್​ (7) ಹೆಸರಿನ ಬಾಲಕ ಸೈಕಲ್​ ತೆಗೆದುಕೊಳ್ಳಬೇಕೆಂದು ಹಣವನ್ನು ಕೂಡಿಟ್ಟಿದ್ದನಂತೆ. ಆದರೆ ಕರೊನಾ ಎರಡನೇ ಅಲೆಯಲ್ಲಿ ಜನರು ಸಾಯುತ್ತಿರುವುದನ್ನು ಕಂಡು ನೋವುಂಡ ಆತ, ತಾನು ಕೂಡಿಟ್ಟಿದ್ದ ಹಣವನ್ನು ರಾಜ್ಯದ ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದಾನೆ. ಅದರ ಜತೆ ಮುಖ್ಯಮಂತ್ರಿಗೆ ಒಂದು ಪತ್ರವನ್ನೂ ಬರೆದಿದ್ದಾನೆ. ನಾನು ಕೊಟ್ಟಿರುವ ಈ ಹಣದಲ್ಲಿ ಸೋಂಕಿತರಿಗೆ ಸಹಾಯ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾನೆ.

    ಬಾಲಕನ ಸೇವಾ ಮನೋಭಾವದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಅದರ ಬೆನ್ನಲ್ಲೇ ಸಿಎಂ ಎಂಕೆ ಸ್ಟಾಲಿನ್​ ಬಾಲಕನಿಗೆ ಸರ್ಪೈಸ್​ ಒಂದನ್ನು ನೀಡಿದ್ದಾರೆ. ಆತನ ಇಷ್ಟದ ಸೈಕಲ್​ ಅನ್ನು ಅಲ್ಲಿನ ಶಾಸಕರ ಮುಖಾಂತರ ಬಾಲಕನಿಗೆ ಕೊಡಿಸಿದ್ದಾರೆ. ಭಾನುವಾರ ಬೆಳಗ್ಗೆ ಏಳುತ್ತಿದ್ದಂತೆಯೇ ಮನೆ ಎದುರು ತನ್ನಿಷ್ಟದ ಸೈಕಲ್​ ನೋಡಿದ ಬಾಲಕ ಖುಷಿಯಿಂದ ಕುಣಿದಾಡಿದ್ದಾನೆ. ಸ್ಟಾಲಿನ್​ ಬಾಲಕನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದಾರೆ ಕೂಡ. (ಏಜೆನ್ಸೀಸ್)

    ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರ ಸಾವು! ಹೈ ಕೋರ್ಟ್​ ತನಿಖೆಗೆ ಒತ್ತಾಯಿಸಿದ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts