More

    ಚೀನಾ ಕೈಗೊಂಬೆ ನೇಪಾಳದಿಂದ ಇದೆಂಥ ಉದ್ಧಟತನ: ಪಠ್ಯಪುಸ್ತಕ, ನಾಣ್ಯಗಳಲ್ಲಿ ಪ್ರಿಂಟ್​ ಮಾಡಿದ್ದೇನು?

    ನವದೆಹಲಿ: ಚೀನಿ ಕಮ್ಯುನಿಸ್ಟರ ವಶವಾಗಿ, ಅವರ ಕೈಗೊಂಬೆಯಾಗಿ ವರ್ತಿಸುತ್ತಿರುವ ನೇಪಾಳ ಇದೀಗ ಭಾರಿ ಉದ್ಧಟತನಕ್ಕೆ ಕೈಹಾಕಿದೆ.

    ಉತ್ತರಾಖಂಡದ ವಿವಾದಾತ್ಮಕ ಪ್ರದೇಶ ಕಾಲಾಪಾನಿ, ಉತ್ತರಾಖಂಡದ ಪಿಥೊರಾಗಢವು ತನಗೇ ಸೇರಿದ್ದು ಎಂದು ಘಂಟಾಘೋಷವಾಗಿ ಸಾರುತ್ತ ಬಂದಿದ್ದ ನೇಪಾಳ ಇದೀಗ ತನ್ನ ದೇಶದ ಶಾಲೆಯ ಪಠ್ಯಪುಸ್ತಕದಲ್ಲಿಯೂ ಇದನ್ನು ಪ್ರಿಂಟ್​ ಮಾಡಿದೆ!

    ಮಾತ್ರವಲ್ಲದೇ, ಹೊಸ ರಾಜಕೀಯ ನಕಾಶೆಯೊಂದಿಗಿನ ಒಂದು ರೂಪಾಯಿ ಮತ್ತು ಎರಡು ರೂಪಾಯಿ ಮುಖಬೆಲೆಯ ಹೊಸ ನಾಣ್ಯಗಳನ್ನು ಟಂಕಿಸಲು ನೇಪಾಳ ಬ್ಯಾಂಕ್​ಗೆ ಅನುಮತಿ ನೀಡಿದೆ. ಇದರ ಸಿದ್ಧತೆ ಇದಾಗಲೇ ನಡೆಯುತ್ತಿದೆ ಎಂದು ತಿಳಿದುಬಂದಿದೆ.

    ಭಾರತದ ಈ ಪ್ರದೇಶಗಳು ತನ್ನವೇ ಎಂದು ಪ್ರತಿಪಾದಿಸುತ್ತ ರಾಜಕೀಯ ಭೂಪಟವನ್ನು ಅಂಗೀಕರಿಸಿದ ಮೂರು ತಿಂಗಳ ಬಳಿಕ ನೇಪಾಳ ಇಂಥ ಕುಕೃತ್ಯಕ್ಕೆ ಕೈಹಾಕಿದೆ. ತನ್ನ ಶೈಕ್ಷಣಿಕ ಪಠ್ಯಕ್ರಮಗಳು ಹಾಗೂ ಕರೆನ್ಸಿಗಳಲ್ಲಿ ಬದಲಾವಣೆ ತಂದಿರುವುದಾಗಿ ನೇಪಾಳದ ಶಿಕ್ಷಣ ಸಚಿವ ಗಿರಿರಾಜ್ ಮಣಿ ಪೋಖರೆಲ್ ಕಚೇರಿ ತಿಳಿಸಿದೆ.

    ಇದನ್ನೂ ಓದಿ: ಜಗತ್ತಿನ ಯಾವ ಶಕ್ತಿಯೂ ಯೋಧರನ್ನು ಗಡಿಯಲ್ಲಿ ತಡೆಯಲು ಸಾಧ್ಯವಿಲ್ಲ- ರಾಜನಾಥ್​ ಸಿಂಗ್

    ನೇಪಾಳದ ಭೂಗೋಳಶಾಸ್ತ್ರ ಮತ್ತು ಪ್ರಾದೇಶಿಕ ಗಡಿ ಎಂಬ ಪಠ್ಯ ಪುಸ್ತಕವನ್ನು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿದೆ.

    ನೇಪಾಳವು 1,47,641.28 ಚದರ ಕಿ.ಮೀ. ಭೌಗೋಳಿಕ ಪ್ರದೇಶ ಹೊಂದಿದ್ದು, ಅದರಲ್ಲಿ 460 ಚದರ ಕಿ.ಮೀ. ಕಾಲಾಪಾನಿ ಪ್ರದೇಶವಿದೆ ಎಂದು ಅದರಲ್ಲಿ ನಮೂದಿಸಲಾಗಿದೆ.

    ನೇಪಾಳದಲ್ಲಿ ಪ್ರಮುಖ ಹಬ್ಬವಾಗಿ ದಸರಾ ಆಚರಣೆಯಾಗುತ್ತದೆ. ಈ ಸಂದರ್ಭದಲ್ಲಿ ಹೊಸ ನಾಣ್ಯಗಳು ಚಲಾವಣೆಗೆ ಬರಲಿವೆ.

    ಪಿಥೊರಾಗಡದಲ್ಲಿ ಕಳೆದ ನವೆಂಬರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಿಪುಲೇಖ್ ರಸ್ತೆಯನ್ನು ಉದ್ಘಾಟಿಸಿದ್ದರು. ಆಗ ಅದಕ್ಕೆ ನೇಪಾಳ ಪ್ರತಿಭಟನೆ ವ್ಯಕ್ತಪಡಿಸಿತ್ತು. ರಸ್ತೆಯ ಒಂದು ಭಾಗವು ತನ್ನ ಪ್ರದೇಶದೊಳಗೆ ಹಾದು ಹೋಗುತ್ತದೆ ಎಂದು ಆರೋಪಿಸಿತ್ತು.

    ಚೀನಾದಿಂದ 38 ಸಾವಿರ ಚ.ಕಿ.ಮೀ ಜಾಗ ಅತಿಕ್ರಮಣ: ರಾಜ್ಯಸಭೆಗೆ ಮಾಹಿತಿ

    ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!

    ಪ್ರಧಾನಿಗೆ ‘ನಿರುದ್ಯೋಗ ದಿನದ ಶುಭಾಶಯ’ ಹೇಳಿ ಟ್ರೋಲಾದ ದಿನೇಶ್​ ಗುಂಡೂರಾವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts