More

    ‘ನಕಲಿ ಜಾತಿ’ಯಿಂದ ಬಚಾವಾದ ಸಂಸದೆ- ಸುಪ್ರೀಂನಿಂದ ಸದ್ಯ ಖುರ್ಚಿ ಭದ್ರ…

    ನವದೆಹಲಿ: ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಂಸದೆಯಾಗಿ ಆಯ್ಕೆಯಾಗಿರುವ ನವನೀತ್ ಕೌರ್ ರಾಣಾ ಅವರ ಮೇಲೆ ಸದ್ಯ ನಕಲಿ ಜಾತಿ ಪ್ರಮಾಣದ ಪತ್ರದ ತೂಗುಗತ್ತಿ ತೇಲಾಡುತ್ತಿದೆ. ಬಾಂಬೆ ಹೈಕೋರ್ಟ್‌ನ ಆದೇಶದಿಂದಾಗಿ ಸಂಸದೆಯ ಪಟ್ಟವನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಇವರೀಗ ಸದ್ಯ ಸುಪ್ರೀಂಕೋರ್ಟ್‌ನ ಆದೇಶದಿಂದಾಗಿ ನಿರಾಳರಾಗಿದ್ದಾರೆ.

    ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನಕಲಿ ನೀಡಿರುವ ಬಗ್ಗೆ ಆರೋಪಗಳು ಇದ್ದ ಹಿನ್ನೆಲೆಯಲ್ಲಿ ಇವರ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅರ್ಜಿ ದಾಖಲಾಗಿತ್ತು. ಪ್ರಮಾಣ ಪತ್ರಗಳು ನಕಲಿಯಾಗಿದೆ ಎಂದಿದ್ದ ಹೈಕೋರ್ಟ್‌, ಅದನ್ನು ರದ್ದುಗೊಳಿಸಿತ್ತು. ಎರಡು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ನವನೀತ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಬಾಂಬೆ ಹೈಕೋರ್ಟ್‌ ಆದೇಶದಕ್ಕೆ ಕೋರ್ಟ್‌ ತಡೆ ನೀಡಿದೆ. ಇನ್ನು ಅಂತಿಮ ತೀರ್ಪು ಬರುವವರೆಗೆ ಸಂಸದೆ ನಿರಾಳರಾಗಿದ್ದಾರೆ.

    ಬಾಂಬೆ ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದ್ದರೆ ಸಂಸದೆ ಪಟ್ಟದಿಂದ ನವನೀತ್‌ ಕೆಳಕ್ಕೆ ಇಳಿಯಬೇಕಾಗಿತ್ತು. ಏಕೆಂದರೆ ಇವರು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಅಮರಾವತಿ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು.

    ಪ್ರೇಮ ಅಂದ್ಕೊಂಡು ಇಷ್ಟುವರ್ಷ ದೇಹ ಒಪ್ಪಿಸಿದ್ಯಾ? ಅದು ಕಾಮ ಅನ್ನೋದೂ ಗೊತ್ತಾಗಿಲ್ವಾ ನಿನಗೆ?

    ಇದೇ 24ರಂದು ಕಾಣಿಸಲಿದೆ ‘ಸ್ಟ್ರಾಬೆರಿ ಮೂನ್’ – ಇದ್ಯಾಕೆ ಈ ಹೆಸರು? ವಿಜ್ಞಾನಿಗಳು ಹೇಳಿದ್ದು ಹೀಗಿದೆ…

    ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ: ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಿ- ವಿವಾದ ಸೃಷ್ಟಿಸಿದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts