More

    ಇದೇ 24ರಂದು ಕಾಣಿಸಲಿದೆ ‘ಸ್ಟ್ರಾಬೆರಿ ಮೂನ್’ – ಇದ್ಯಾಕೆ ಈ ಹೆಸರು? ವಿಜ್ಞಾನಿಗಳು ಹೇಳಿದ್ದು ಹೀಗಿದೆ…

    ನವದೆಹಲಿ: ಇದಾಗಲೇ ಸೂಪರ್‌ಮೂನ್‌ಗಳ ಬಗ್ಗೆ ನೀವೆಲ್ಲಾ ಕೇಳಿದ್ದೀರಿ. ಇದೀಗ ಇದೇ 24ರಂದು ಸ್ಟ್ರಾಬೆರಿ ಮೂನ್‌ ಕಾಣಿಸಿಕೊಳ್ಳಲಿದೆ. ಇದು ಈ ವರ್ಷದ ಕೊನೆಯ ಸೂಪರ್ ಮೂನ್ ಆಗಿದ್ದು, ಇದರ ಹೆಸರು ಸ್ಟ್ರಾಬೆರಿ.

    ಅಂದು (ಗುರುವಾರ) ಚಂದ್ರ ಭೂಮಿ ಹತ್ತಿರವಾದಾಗ ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. ಭೂಮಿಗೆ ಪರಿಪೂರ್ಣ ಒಂದು ಸುತ್ತು ಬರಲು ಸುಮಾರು 29.5 ದಿನಗಳು ಕಾಲಾವಕಾಶ ತೆಗೆದುಕೊಳ್ಳುವ ಚಂದ್ರನು ಅಂದು ವಿವಿಧ ಆಕಾರ, ಗಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಇದನ್ನು ಭೂಮಿಯ ಮೇಲಿನಿಂದಲೂ ಗಮನಿಸಬಹುದಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

    ಇದಕ್ಕೆ ಸ್ಟ್ರಾಬೆರಿ ಎಂದು ಹೆಸರು ಬರಲು ಕಾರಣವೇನು ಎಂಬುದು ಕೂಡ ಕುತೂಹಲವೇ. ಈ ಹೆಸರು ಇದ್ದ ಮಾತ್ರಕ್ಕೆ ಅಂದು ಚಂದ್ರನೇನೂ ಸ್ಟ್ರಾಬೆರಿ ಹಣ್ಣಿನ ರೀತಿಯಲ್ಲಿ ಕಾಣಿಸುವುದಿಲ್ಲ. ಬದಲಿಗೆ ಅಮೆರಿಕದ ಉತ್ತರ ಭಾಗದಲ್ಲಿ ಜೂನ್ ತಿಂಗಳ ಅವಧಿಯಲ್ಲಿ ಸ್ಟ್ರಾಬೆರಿ ಹಣ್ಣು ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಇದೇ ಸಮಯದಲ್ಲಿ ಈ ಚಂದ್ರ ಸೂಪರ್‌ಮೂನ್‌ ಆಗಿ ಕಾಣಿಸಿಕೊಳ್ಳಲಿರುವ ಕಾರಣ, ಸ್ಟ್ರಾಬೆರಿ ಮೂನ್ ಎಂದು ಕರೆಲಾಗುತ್ತದೆ ಎಂದಿದ್ದಾರೆ ವಿಜ್ಞಾನಿಗಳು.

    ಅಂದಹಾಗೆ ಭಾರತೀಯರಿಗೆ ಈ ಸ್ಟ್ರಾಬೆರಿ ಮೂನ್‌ ಕಣ್ತುಂಬಿಸಿಕೊಳ್ಳುವ ಅವಕಾಶವಿಲ್ಲ. ಏಕೆಂದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ.

    ಈ ನಾಣ್ಯಗಳು ನಿಮ್ಮಲ್ಲಿದ್ದರೆ 10 ಲಕ್ಷ ರೂ. ಗೆಲ್ಲಬಹುದು- ಅದೃಷ್ಟ ಪರೀಕ್ಷಿಸಿಕೊಳ್ಳುವ ಸಮಯವಿದು…

    ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ: ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಿ- ವಿವಾದ ಸೃಷ್ಟಿಸಿದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts