More

    ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ: ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಿ- ವಿವಾದ ಸೃಷ್ಟಿಸಿದ ಸಚಿವ

    ಮಿಜೋರಾಂ: ಜನಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಗಂಡಾಗಲಿ, ಹೆಣ್ಣಾಗಲೀ ಒಂದೇ ಮಗುವಿರಲಿ ಎಂದು ಕೆಲ ದೇಶಗಳು ಹೇಳುತ್ತಿದ್ದರೆ, ಇಲ್ಲೊಬ್ಬ ಸಚಿವ ಹೆಚ್ಚು ಮಕ್ಕಳನ್ನು ಹೇರಿ. ಹೀಗೆ ಮಾಡಿದರೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿ ಇದೀಗ ಭಾರಿ ವಿವಾದಕ್ಕೆ ಈಡಾಗಿದ್ದಾರೆ.

    ಈಶಾನ್ಯ ರಾಜ್ಯ ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ಈ ಮಾತನ್ನು ಹೇಳಿದ್ದಾರೆ. ಎಷ್ಟು ಮಕ್ಕಳನ್ನು ಹೇರಬೇಕು ಎಂದು ಸಚಿವರು ಹೇಳಲಿಲ್ಲ. ಆದರೆ ಜನಸಂಖ್ಯೆ ನಿಯಂತ್ರಣಕ್ಕೆ ದೇಶಗಳು ಯೋಜನೆ ರೂಪಿಸುತ್ತಿರುವ ಈ ಸಮಯದಲ್ಲಿ ಇಂಥದ್ದೊಂದು ಹೇಳಿಕೆ ಬಂದಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಇದೇನು ವಿವಾದಕ್ಕೆ ಕಾರಣವಾಗುವ ಅಂಶವಲ್ಲ. ನಾನು ಹೇಳಿರುವುದು ನಮ್ಮ ದೇಶದ ಒಳಿತಿಗೆ ಎಂದಿದ್ದಾರೆ ಸಚಿವರು. ಏಕೆಂದರೆ ಮಿಜೋ ಸಮುದಾಯಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಇದನ್ನು ಹೆಚ್ಚಿಸುವ ಕಾರಣದಿಂದ ಹೇಳಿಕೆ ನೀಡಿದ್ದೇನೆ. ಮಿಜೋ ಬುಡಕಟ್ಟು ಪಂಗಡದ ಉಳಿವು ಮತ್ತು ಅಭಿವೃದ್ಧಿಗೆ ಜನಸಂಖ್ಯೆ ಹೆಚ್ಚಿಸುವ ಅಗತ್ಯವಿದೆ. ನಾನು ಈಗಲೂ ಹೇಳಿಕೆಗೆ ಬದ್ಧನಾಗಿದ್ದು, ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಒಂದು ಲಕ್ಷ ನೀಡಲಾಗುವುದು. ಮಾತ್ರವಲ್ಲದೇ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದಿದ್ದಾರೆ.

    ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

    ಇಲ್ಲಿ ಅನಿಲ, ಅಲ್ಲಿ ಸುನೀಲ- ಎರಡೆರಡು ಸರ್ಕಾರಿ ಸಂಬಳ ಪಡೀತಿದ್ದೋನ ಇಂಟರೆಸ್ಟಿಂಗ್‌ ಸ್ಟೋರಿ ಇದು…

    ಬೆಡ್‌ರೂಮ್‌ಗೆ ಬಂದ ಏಲಿಯನ್‌: ಪುರುಷನಿಗಿಂತಲೂ ಇವೇ ಬೆಸ್ಟ್‌- ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts