ಚಂಪಾವತ್ (ಉತ್ತರಾಖಂಡ): ಮ್ಯಾಕ್ಸಿಕ್ಯಾಬ್ ಒಂದು ಆಯತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮವಾಗಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿ ನಡದಿದೆ.
ಇವರೆಲ್ಲರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು. ಆಳವಾದ ಕಮರಿಗೆ ಬಿದ್ದ ಹಿನ್ನೆಲೆಯಲ್ಲಿ ಮ್ಯಾಕ್ಸಿಕ್ಯಾಬ್ನಲ್ಲಿ ಇದ್ದ ಬಹುತೇಕ ಮಂದಿ ಮೃತಪಟ್ಟಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂಪಾವತ್ ಜಿಲ್ಲೆಯಲ್ಲಿ ಸುಖಿಧಾಂಗ್-ದಂಡಮಿನಾರ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಮೃತರನ್ನು ಚಂಪಾವತ್ ಜಿಲ್ಲೆಯ ತನಕ್ಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ. ರಕ್ಷಣಾ ಪಡೆಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾಗ್ ಕದ್ದು ಓಡಿಹೋದ ಕಳ್ಳರ ಹಿಡಿಯಲು ಆಟೋದಿಂದ ಜಿಗಿದ ಮಹಿಳೆಯ ದುರಂತ ಸಾವು!