More

    ಕೇಂದ್ರ ಸರ್ಕಾರದಿಂದ ರಂಗೋಲಿ, ದೇಶಭಕ್ತಿ ಗೀತೆ, ಲೋರಿ ಸ್ಪರ್ಧೆ: ಭಾಗವಹಿಸುವ ಸಂಪೂರ್ಣ ವಿವರ

    ನವದೆಹಲಿ:‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಣೆಯ ಭಾಗವಾಗಿ, ಕೇಂದ್ರ ಸರ್ಕಾರವು ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ ರಚನೆ ಮತ್ತು ಲೋರಿ ಬರವಣಿಗೆ ಸ್ಪರ್ಧೆಗಳನ್ನು ಏರ್ಪಡಿಸಿದೆ.

    ತಾಲೂಕಿನಿಂದ ರಾಷ್ಟ್ರಮಟ್ಟದವರೆಗೆ ಈ ಸ್ಪರ್ಧೆಗಳು ನಡೆಯಲಿವೆ. ಈ ಕುರಿತು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಇದಾಗಲೇ ನೋಂದಣಿ ಆರಂಭವಾಗಿದೆ. ಎಲ್ಲ ಸ್ಪರ್ಧೆಗಳು ಮೊದಲು ಜಿಲ್ಲಾಮಟ್ಟದಲ್ಲಿ, ನಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಹಂತಗಳಲ್ಲಿ ನಡೆಯಲಿವೆ.

    ‘ರಂಗೋಲಿ ಮೇಕಿಂಗ್’ ಸ್ಪರ್ಧೆ:
    16-45 ವರ್ಷದೊಳಗಿನವರು ಇದರಲ್ಲಿ ಭಾಗವಹಿಸಬಹುದು. ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ರಂಗೋಲಿ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ, ಭಾರತದ ಸ್ವಾತಂತ್ರ್ಯ ಚಳವಳಿಯ ಘಟನೆಯನ್ನು ಬಣ್ಣಗಳಿಂದ ರಚಿಸಬಹುದು.
    75 ಮಂದಿಯನ್ನು ರಾಷ್ಟ್ರಮಟ್ಟದ ವಿಜೇತರಾಗಿ ಆಯ್ಕೆ ಮಾಡಲಾಗುವುದು. ಈ 75 ರಂಗೋಲಿಗಳನ್ನು ಬಸಂತ್ ಪಂಚಮಿಯಂದು ಹೊಸ ದೆಹಲಿಯ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಬಹುಮಾನ ನೀಡಲಾಗುತ್ತದೆ. ರಾಷ್ಟ್ರೀಯ ಮಟ್ಟದ ಫೈನಲ್ 2022ರ ಏಪ್ರಿಲ್ 13 ಬೈಸಾಕಿ ಹಬ್ಬದ ಸಂದರ್ಭದಲ್ಲಿ ನಡೆಯಲಿದೆ.

    ದೇಶಭಕ್ತಿ ಗೀತೆ ರಚನೆ ಸ್ಪರ್ಧೆ:
    16-45 ವಯಸ್ಸಿನವರು ಭಾಗವಹಿಸಬಹುದು. ಯಾವುದೇ ಮಾತೃಭಾಷೆಯಲ್ಲಿ, ರಾಷ್ಟ್ರಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲೂ ಬರೆಯಬಹುದು. ಈ ಸ್ಪರ್ಧೆ ನಾಲ್ಕು ಹಂತಗಳಲ್ಲಿ ನಡೆಯಲಿದೆ. ರಾಷ್ಟ್ರೀಯ ಮಟ್ಟದ ಫೈನಲ್ 2022ರ ಏಪ್ರಿಲ್ 13 ಬೈಸಾಕಿ ಹಬ್ಬದ ಸಂದರ್ಭದಲ್ಲಿ ನಡೆಯಲಿದೆ.

    ‘ಲೋರಿ’ ಸ್ಪರ್ಧೆ
    ಪ್ರತಿಯೊಬ್ಬ ಭಾರತೀಯರು ಭಾಗವಹಿಸಬಹುದು. 2022ರ ಮಾರ್ಚ್‌ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರೀಯ ಮಟ್ಟದ ಫೈನಲ್ ನಡೆಯಲಿದೆ. ಭಾಗವಹಿಸುವವರು ತಮ್ಮ ಮಾತೃಭಾಷೆಯಲ್ಲಿ ದೇಶಭಕ್ತಿ, ಕವಿತೆಗಳು ಮತ್ತು ಹಾಡುಗಳಿಗೆ ಸಂಬಂಧಿಸಿದ ಲಾಲಿಗಳನ್ನು ಸಲ್ಲಿಸಬಹುದು.

    ಹೇಗೆ ಸ್ಪರ್ಧಿಸುವುದು
    1. http://www.amritmahotsav.nic.in  ಗೆ ಭೇಟಿ ನೀಡಿ.

    2. ‘ಸ್ಪರ್ಧೆಗಳು’ ವಿಭಾಗದ ಮೇಲೆ .

    3. ಭಾಗವಹಿಸಲು ಬಯಸುವ ಸ್ಪರ್ಧೆಯನ್ನು ಆಯ್ಕೆಮಾಡಿ.

    4. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ನಿಮ್ಮ ಪ್ರವೇಶ ಫೈಲ್ ಸೇರಿದಂತೆ ಇತರ ವಿವರಗಳನ್ನು ಒದಗಿಸಿ.

    5. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಭಾಗವಹಿಸಲು ‘submit’  ಮೇಲೆ ಕ್ಲಿಕ್ಕಿಸಿ.

    ಭಾಗವಹಿಸಲು ವಿವರವಾದ ಮಾರ್ಗಸೂಚಿಗಳು http://www.amritmahotsav.nic.in ನಲ್ಲಿ ಲಭ್ಯವಿದೆ.

    ಕನ್ನಡ ರಾಜ್ಯೋತ್ಸವದಂದೇ ಇಹಲೋಕ ತ್ಯಜಿಸಿದ ವಿದ್ವಾಂಸ ಜ್ಯೋತಿ ಹೊಸೂರ: ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    VIDEO: ಇನ್‌ಸ್ಟಾಗ್ರಾಂ ಪೋಸ್ಟ್‌ ನಿಜವಾಗೋಯ್ತಲ್ಲಾ! ಅಪಘಾತದಲ್ಲಿ ಸಾಯೋ ಮುನ್ನ ನಟಿಯ ಸಂದೇಶ ಓದಿ ಕಣ್ಣೀರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts