More

    ಕನ್ನಡ ರಾಜ್ಯೋತ್ಸವದಂದೇ ಇಹಲೋಕ ತ್ಯಜಿಸಿದ ವಿದ್ವಾಂಸ ಜ್ಯೋತಿ ಹೊಸೂರ: ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

    ಬೆಳಗಾವಿ: ಕನ್ನಡದ ಹಿರಿಯ ವಿದ್ವಾಂಸರು, ಖ್ಯಾತ ಸಾಹಿತಿ ಹಾಗೂ ಜಾನಪದ ತಜ್ಞರಾದ ಪ್ರೊ. ಜ್ಯೋತಿ ಹೊಸೂರ ಅವರು ಕನ್ನಡ ರಾಜ್ಯೋತ್ಸವದ ದಿನದಂದೇ ಇಹಲೋಹ ತ್ಯಜಿಸಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

    ಸಾವಿನಲ್ಲಿಯೂ ಸಾರ್ಥಕತೆ ಮೆರೆದಿರುವ ಇವರ ಇಚ್ಛೆಯಂತೆ ಇವರ ದೇಹವನ್ನು ಕೆಎಲ್‌ಇ ಸೊಸೈಟಿಗೆ ದಾನ ಮಾಡಿರುವುದಾಗಿ ತಿಳಿದುಬಂದಿದೆ.

    ಬೆಳಗಾವಿ ಜಿಲ್ಲೆಯ ಮೂಡಲಗಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಮೂರು ದಶಕಗಳ ಕಾಲ ಇವರು ಕಾರ್ಯನಿರ್ವಹಿಸಿದ್ದಾರೆ. ಪುಟ್ಟ ಹಳ್ಳಿ ರಾಯಭಾಗದಲ್ಲಿ ವಾಸವಾಗಿದ್ದ ಜ್ಯೋತಿ ಹೊಸೂರ ಅವರ ಸಂಶೋಧನೆಗಳು ಮಾತ್ರ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಅವರ ಸಂಶೋಧನೆಗಳಿಗೆ ಆ ಪರಿಯ ಶಕ್ತಿ ಇದೆ. ‌ಇವರು ಕನ್ನಡ ಸಾಹಿತ್ಯ, ಸಮಾಜ, ಸಂಸ್ಕೃತಿ, ಹಾಲುಮತ ಸಮುದಾಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹತ್ವದ ಗ್ರಂಥಗಳನ್ನು ರಚಿಸಿದ್ದು, ಈ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

    ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಕನಕದಾಸ, ವಚನ ಸಾಹಿತ್ಯದ ಕುರಿತು ಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕಾಲಗತಿ ಪ್ರಕಾಶನದ ಮೂಲಕ ಸಂಸ್ಕೃತಿ ಚಿಂತಕರಾದ ಡಾ.ಶಂಬಾ ಜೋಶಿ ಅವರಂಥ ಅನೇಕ ಸಂಶೋಧಕರ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಸಂಗೊಳ್ಳಿ ರಾಯಣ್ಣನ ಬಗ್ಗೆ ಅನೇಕ ಆಕರಗಳನ್ನು ಸಂಗ್ರಹಿಸಿ ಸಂಶೋಧನಾತ್ಮಕ ಕೃತಿಯನ್ನೂ ಹೊರತಂದಿದ್ದಾರೆ.

    ಹಾಲುಮತ ಸಾಂಸ್ಕೃತಿಕ ನಾಯಕರಾದ ಬೀರಪ್ಪ, ಇಟ್ಟಪ್ಪ, ಮಾಳಿಂಗರಾಯರ ಕುರಿತು ಚಾರಿತ್ರಿಕ ನೆಲೆಯಲ್ಲಿ ಅಧ್ಯಯನ ಮಾಡಿ ಗ್ರಂಥಗಳನ್ನು ಹೊರತಂದಿದ್ದಾರೆ. ಕನಕದಾಸರ ಜೀವನ ಮತ್ತು ಸಾಹಿತ್ಯದ ಬಗ್ಗೆ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿದ್ದಾರೆ.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಬೆಟಗೇರಿ ಕೃಷ್ಣ ಶರ್ಮ ಸಂಶೋಧಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
    ಜ್ಯೋತಿ ಹೊಸೂರ ಅವರು, ಪತ್ನಿ, ಮಗ, ಮಗಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

    ಭೀಕರ ರಸ್ತೆ ಅಪಘಾತ: ದಾರುಣ ಸಾವು ಕಂಡ ‘ಮಿಸ್‌ ಕೇರಳ’, ‘ಮಿಸ್‌ ರನ್ನರ್ಸ್‌ ಅಪ್‌’

    ಅಪ್ಪುವಿನ ಸಮಾಧಿ ಬಳಿ ನೂಕುನುಗ್ಗಲು: ಐದು ದಿನ ಸಿಗದು ದರ್ಶನ- ಗೇಟ್‌ ಬಳಿ ಕಣ್ಣಿರಿಡುತ್ತರೋ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts