More

    ಗೀತಕ್ಕ ಗೆದ್ದರೆ ಮಹಿಳೆಯರಿಗೆ ಗೆಲುವಾದಂತೆ

    ಶಿಕಾರಿಪುರ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ನಮ್ಮೆಲ್ಲರ ಆಶಯದಂತೆ ಗೀತಕ್ಕ ಗೆಲುವು ನಿಶ್ಚಿತ. ಇದು ನಮ್ಮ ಕಾರ್ಯಕರ್ತರ ಸಂಘಟಿತ ಪ್ರಯತ್ನದ ಫಲವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ಸೊರಬ ಮತ್ತು ಶಿಕಾರಿಪುರದ ಮೇಲೆ ತಂದೆಯವರಿಗೆ ವಿಶೇಷ ಅಭಿಮಾನವಿತ್ತು. ಅದು ನೀವೆಲ್ಲರೂ ಅವರ ಮೇಲಿಟ್ಟಿರುವ ಗೌರವ ಮತ್ತು ವಿಶ್ವಾಸ. ಅದಕ್ಕೆ ಬೆಲೆ ಕಟ್ಟಲಾಗದು. ಜಿಲ್ಲಾದ್ಯಂತ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಏ.15ರಂದು ಗೀತಕ್ಕ ನಾಮಪತ್ರ ಸಲ್ಲಿಸಲಿದ್ದಾರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಜನರ ಪ್ರೀತಿಯೇ ನಮಗೆ ಬ್ರಹ್ಮಾಸ. ನಿಮ್ಮ ಆಶಯದಂತೆ ಗೀತಕ್ಕ ಮತ್ತೆ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆ ಜಿಲ್ಲೆಯ ಮತದಾರರ ಮೇಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಮಹಿಳೆಯರೇ ಕಾರಣ. ಈಗ ಅವರ ಮಡಿಲಿಗೆ ಗೀತಕ್ಕನನ್ನು ಹಾಕಿದ್ದೇವೆ. ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು. ಅವರು ಗೆದ್ದರೆ ಜಿಲ್ಲೆಯ ಹೆಣ್ಣುಮಕ್ಕಳೇ ಗೆದ್ದಂತೆ ಎಂದರು.
    ಅಕ್ಕಿ ಹಂಚಿದ್ದು ಸ್ವಂತ ಹಣದಲ್ಲಿ:
    ಗ್ಯಾರಂಟಿಗಳ ಕಾರಣದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮರ್ಥ ಆಡಳಿದಲ್ಲಿ ಕಾಂಗ್ರೆಸ್ ಅತ್ಯಂತ ಸದೃಢವಾಗಿದೆ. 30 ವರ್ಷದ ಹಿಂದೆ ತಂದೆಯವರು ನೀಡಿದ ಉಚಿತ ಅಕ್ಕಿಯನ್ನೇ ಪದೇಪದೇ ಪ್ರಸ್ತಾಪ ಮಾಡುತ್ತೇನೆ ಎಂದು ನನಗೆ ಕೆಲವರು ಲೇವಡಿ ಮಾಡುತ್ತಾರೆ. ಆದರೆ ನಾವು ಉಚಿತವಾಗಿ ಹಂಚಿದ ಅಕ್ಕಿ ನಮ್ಮ ಸ್ವಂತ ದುಡ್ಡಿನದು. ನಿಮ್ಮ ಹಾಗೆ ಸೊಸೈಟಿಯಿಂದ ತಂದು ಹಂಚಿದ್ದಲ್ಲ. ನಮ್ಮ ಹಣದಲ್ಲಿ ಬಡವರಿಗೆ ಬರಗಾಲದಲ್ಲಿ ಉಚಿತ ಅಕ್ಕಿ ನೀಡಿದ ತೃಪ್ತಿ ನಮಗಿದೆ ಎಂದರು.
    ಶಿಕಾರಿಪುರದಲ್ಲಿ ಸಭೆ: ಏ.11 ಮತ್ತು 13ರಂದು ಶಿಕಾರಿಪುರ ತಾಲೂಕಿನಲ್ಲಿ ಗೀತಕ್ಕ, ಶಿವರಾಜ್‌ಕುಮಾರ್ ಮತ್ತು ಪಕ್ಷದ ಮುಖಂಡರು ಪ್ರಚಾರ ಮಾಡಲಿದ್ದಾರೆ. ನಂತರ ಜಿಲ್ಲೆಗೆ ತಾರಾ ಪ್ರಚಾರಕರು ಬರುತ್ತಾರೆ. ರಾಜ್ಯದ ಗಣ್ಯರು ಬರಲಿದ್ದಾರೆ. ನಂತರ ಪ್ರತಿ ಎರಡು ಪಂಚಾಯತಿಗೊಂದರಂತೆ ಪ್ರಚಾರ ಮಾಡಲಿದ್ದಾರೆ. ಈ ಬಾರಿ ನಾವು ಶಿಕಾರಿಪುರದಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸುವುದು ಖಚಿತ.
    ಮುಖಂಡರಾದ ನಗರದ ಮಹದೇವಪ್ಪ, ಎಸ್.ಪಿ.ನಾಗರಾಜ ಗೌಡ, ಚುರ್ಚಿಗುಂಡಿ ರುದ್ರಗೌಡ, ರೋಷನ್, ಜಾರ್ ಅಲಿ, ಎನ್.ಅರುಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts