More

    ಆಸ್ಪತ್ರೆಯಲ್ಲಿರೋ ದೀದಿ ಹತ್ರ ಇರೋದು ಒಂಬತ್ತೇ ಗ್ರಾಂ ಚಿನ್ನ, ಒಂದೇ ಒಂದು ಸ್ವಂತ ವಾಹನನೂ ಇಲ್ವಂತೆ!

    ಕೋಲ್ಕತಾ: ನಿಗೂಢ ರೀತಿಯಲ್ಲಿ ಆಸ್ಪತ್ರೆ ಸೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಿಜವಾಗಿಯೂ ಆಗಿದ್ದೇನು ಎಂಬ ಬಗ್ಗೆ ಇದುವರೆಗೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅವರ ಪಕ್ಷದವರೇ ಒಂದೊಂದು ರೀತಿ ಮಾಹಿತಿ ನೀಡುತ್ತಿರುವ ನಡುವೆಯೇ ಇದೀಗ ಮಮತಾ ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.

    ಇನ್ನೇನು ಪಶ್ಚಿಮ ಬಂಗಾಳಕ್ಕೆ ಚುನಾವಣೆ ಸಮೀಪಿಸುತ್ತಿದೆ. ನಂದಿ ಗ್ರಾಮದಲ್ಲಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ ಮಮತಾ ಬ್ಯಾನರ್ಜಿ ತಮ್ಮ ಬಳಿ ಇರುವುದು ಒಂಬತ್ತು ಗ್ರಾಂ ಚಿನ್ನ ಮಾತ್ರ ಎಂದು ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ. 9 ಗ್ರಾಂ ಚಿನ್ನ ಸೇರಿದಂತೆ ತಮ್ಮ ಬಳಿ ಇರುವ ಆಸ್ತಿಯ ಮೌಲ್ಯ ಕೇವಲ 16.72 ಲಕ್ಷ ರೂ ಎಂದು ಅವರು ಹೇಳಿದ್ದಾರೆ.

    ಇದರ ಜತೆಗೆ ತಮ್ಮ ಬಳಿ ಸ್ವಂತ ವಾಹನ ಇಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.ತಮ್ಮ ನಿವ್ವಳ ಆಸ್ತಿ ಮೌಲ್ಯ 16.72 ಲಕ್ಷ ರೂ ಮಾತ್ರ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.. 2019-20ರಲ್ಲಿ ರೂ. 10,34,370 ರೂ ಆದಾಯ ಬಂದಿದೆ. ಅಲ್ಲದೆ, ತಮ್ಮ ಬಳಿ 69,255 ರೂ ನಗದು ಹಾಗೂ 13.53 ಲಕ್ಷ ರೂ. ರೂ. ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿದ್ದು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ 1.51 ಲಕ್ಷ ಕೂಡ ಅದರಲ್ಲಿದ ಎಂದು ಮಮತಾ ಪ್ರಮಾಣ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

    ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)ಯಲ್ಲಿ ರೂ 18,490 ರೂ ಗಳನ್ನು ಉಳಿಸಿದ್ದೇನೆ. 2019-20ರ ಹಣಕಾಸು ವರ್ಷದಲ್ಲಿ ಪಾವತಿಸಿದ ಆದಾಯ ತೆರಿಗೆ ಮೇಲೆ ಟಿಡಿಎಸ್ ರೂಪದಲ್ಲಿ 1.85 ಲಕ್ಷ ರೂ. ವಾಪಸ್​ ಬರಬೇಕಿದೆ. ಅಲ್ಲದೆ, ತಮ್ಮ ಬಳಿ 43, 837ರೂ ಮೌಲ್ಯದ ಮೌಲ್ಯದ 9 ಗ್ರಾಂ ಚಿನ್ನವಿದೆ ಎಂದು ಹೇಳಿದ್ದಾರೆ.
    ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂ.ಎ ಸ್ನಾತ್ತಕೋತ್ತರ ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಪಡೆದಿರುವ ಮಮತಾ ಬ್ಯಾನರ್ಜಿಯವರು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಘೋಷಣೆ ಮಾಡಿದ್ದಾರೆ.

    ಪೂರ್ವ ಮೇದಿನಿಪುರದ ನಂದಿಗ್ರಾಮ ಕ್ಷೇತ್ರದಲ್ಲಿ ಏಪ್ರಿಲ್ 1ರಂದು ಮತದಾನ ನಡೆಯಲಿದ್ದು, ಈ ಬಾರಿ ಬಿರುಸಿನ ಹಣಾಹಣಿ ನಿರೀಕ್ಷಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬರಲಿದೆ.

    ಮಮತಾ ಅವರು 1997ರಲ್ಲಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಎರಡು ಬಾರಿ ಕೇಂದ್ರದಲ್ಲಿ ರೈಲ್ವೆ ಖಾತೆ ಸಚಿವರಾದರು. ಎನ್​ಡಿಎ ಹಾಗೂ ಯುಪಿಎ ಎರಡೂ ಮೈತ್ರಿಕೂಟಗಳ ಸರ್ಕಾರಗಳಲ್ಲಿ ಸಚಿವೆಯಾಗಿದ್ದ ಇವರು ನಂದಿಗ್ರಾಮ ಹಾಗೂ ಸಿಂಗೂರ ಹೋರಾಟಗಳಿಂದ ಹೆಸರುವಾಸಿಯಾದವರು, ಮೊದಲಿಗೆ 2011 ರಲ್ಲಿ ಹಾಗೂ ನಂತರ 2016 ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೇರಿದವರು.

    ‘ವೀಲ್​ ಚೇರ್​ ಮೇಲೆ ಕುಳಿತಾದರೂ ಪ್ರಚಾರ ಮಾಡ್ತೀನಿ’ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಹರಿಬಿಟ್ಟ ದೀದಿ

    ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

    10 ವರ್ಷ ಚೆನ್ನಾಗಿದ್ದ ನನ್​ ಗಂಡ ಪಕ್ಕದ್ಮನೆ ಮಹಿಳೆಯಿಂದಾಗಿ ಹಾದಿ ತಪ್ತಿದ್ದಾರೆ… ಪ್ಲೀಸ್​ ದಾರಿ ತೋರಿ…

    ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…

    ಅಯ್ಯೋ… ಇದು ವಿಕ್ರಮ- ಬೇತಾಳ ಅಲ್ರಪ್ಪ… ಹಾಗಿದ್ರೆ ಇದೇನು ಅಂತೀರಾ? ಇಲ್ಲಿದೆ ನೋಡಿ ವಿವರ…

    ಬ್ಯಾಂಕ್​ನಲ್ಲಿ ಕೆಲಸ ಇದೆಯೆ? ಇಂದೇ ಮುಗಿಸಿ… ಇಲ್ಲದಿದ್ದರೆ ನಾಲ್ಕು ದಿನ ಪರದಾಡಬೇಕಾಗುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts