More

    ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲಾ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದರ್ಶನ!

    ಮೈಸೂರು: ಚಾಮರಾಜನಗರ ‌ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಇರುವ ಮಾದಪ್ಪ ದೇವರ ಗುಡಿಗೆ ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.
    ಹೀಗೊಂದು ಆದೇಶ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಿಂದ ಹೊರಟಿದ್ದು, ಈ ಬಗ್ಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ.

    ಚಾಮರಾಜನಗರ ‌ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟ ಇದಾಗಿದೆ. ಕರೊನಾ ಕಾರಣದಿಂದ ಮಾದಪ್ಪನ ಬೆಟ್ಟದಲ್ಲಿ ಮುಡಿ ಸೇವೆ‌ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಳಿಸಲಾಗಿದ್ದು, ಭಕ್ತರಿಗೆ ಕೇವಲ ಮಾದಪ್ಪನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.

    ಆದರೆ ಇದೇ ವೇಳೆ ಭಕ್ತರ ಒತ್ತಾಯಕ್ಕೆ ಮಣಿದು ಹೆಚ್ಚು ಶುಲ್ಕ ಪಡೆದು ಕದ್ದು ಮುಚ್ಚಿ ಮುಡಿ ಸೇವೆ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು. ಅನಧಿಕೃತವಾಗಿ ಮುಡಿ ತೆಗೆಯುದ್ದವರಿಗೆ ಇದಾಗಲೇ ನೋಟಿಸ್ ಕೂಡ ನೀಡಲಾಗಿದೆ. ಮುಡಿ ತೆಗೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

    ಆದರೆ ಇದೀಗ ಪ್ರಾಧಿಕಾರದ ಹೊರ ಆವರಣ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಾಗಲೇ ಬೇರೆ ಕಡೆಗಳಿಂದ ಮುಡಿ ಮಾಡಿಸಿಕೊಂಡು ಬರುತ್ತಿದ್ದಾರೆ. ಆದ್ದರಿಂದ ಮುಡಿ ಮಾಡಿಸಿಕೊಂಡ ಬರುವ ಯಾರೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಒಳ ಆವರಣದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಹೀಗೊಂದು ಸುತ್ತೋಲೆ ಹೊರಟಿದ್ದು ಭಕ್ತರದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

    ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲಾ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದರ್ಶನ!

    ‘ಉಚಿತ ಸೇವೆ’ ಮಾಡಲು ಠಾಣೆಗೆ ಬಂದ- ಇನ್ಸ್‌ಪೆಕ್ಟರ್‌ ದುರುಗುಟ್ಟಿ ನೋಡುತ್ತಿದ್ದಂತೆಯೇ ಜೈಲುಪಾಲಾದ!

    VIDEO: ಯುವತಿ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts