More

    ಬಿಗಡಾಯಿಸಿದ ಲಾಲೂ ಪ್ರಸಾದ್‌ ಆರೋಗ್ಯ ಸ್ಥಿತಿ: ನಾಯಕನ ಚೇತರಿಕೆಗೆ ಹೋಮ-ಹವನ

    ನವದೆಹಲಿ: ಬಹು ಕೋಟಿ ರೂಪಾಯಿ ಮೇವು ಹಗರಣ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ನಿನ್ನೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲುಮಾಡಲಾಗಿದೆ.

    ತಮ್ಮ ನೆಚ್ಚಿನ ನಾಯಕನ ಚೇತರಿಕೆಗಾಗಿ ಆರ್‌ಜೆಡಿ ಮುಖಂಡರು ಹೋಮ-ಹವನ ನಡೆಸುತ್ತಿದ್ದಾರೆ. ಮುಜಾಫರ್‌ನ ಜಿಲ್ಲಾಧ್ಯಕ್ಷ ರಮೇಶ್‌ ಗುಪ್ತಾ ನೇತೃತ್ವದಲ್ಲಿ ಇದಾಗಲೇ ಹೋಮ- ಹವನ ಶುರು ಮಾಡಿದ್ದರೆ ಆರ್‌ಜೆಡಿ ಯುವ ಘಟಕದ ಅಧ್ಯಕ್ಷ ಮೊಹಮ್ಮದ್‌ ಖಾರಿ ಸೋಹೆಬ್‌ ಅವರು ಕೂಡ ನಾಯಕನ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ.

    ಅಪ್ಪನ ಆರೋಗ್ಯದ ಕುರಿತಾಗಿ ತೇಜಸ್ವಿ ಯಾದವ್​ ಮಾಹಿತಿ ನೀಡಿದ್ದಾರೆ. ಅಪ್ಪನ ಆರೋಗ್ಯ ಹದಗೆಟ್ಟಿದೆ. ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಮುಖ ಊದಿದೆ ಎಂದು ಹೇಳಿದ್ದರು. ನಂತರ ಅವರನ್ನು ಶುಕ್ರವಾರ ರಾಂಚಿಯ ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಏರ್‌ಲಿಫ್ಟ್‌ ಮೂಲಕ ಇಂದು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಉಪ ಸಿಎಂ ತೇಜಶ್ವಿ ಯಾದವ್, ಮತ್ತು ಮಾಜಿ ಸಚಿವರಾದ ತೇಜ್ ಪ್ರತಾಪ್ ಯಾದವ್ ಸೇರಿ ಹಲವು ನಾಯಕರು ಲಾಲೂ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಂದಿದ್ದಾರೆ.

    ಬಿಹಾರದ ಮೇವು ಹಗರಣ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದಾರೆ. ಲಾಲು ಪ್ರಸಾದ್ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಅವರು ಚಿಕಿತ್ಸೆ ಪಡೆಯುತ್ತಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ಮಂಡಳಿ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಬೆಳಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ಜೈಲಧಿಕಾರಿಗಳಿಗೂ ಅವರು ಮಾಹಿತಿ ನೀಡಿದರು. ಈ ಹಿನ್ನಲೆ ಜೈಲಾಧಿಕಾರಿಗಳು ಅವರನ್ನು ದೆಹಲಿಗೆ ಶಿಫ್ಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ನಿಮಗೆ ನಿಮ್ಮವರಿಂದಲೇ ತೊಂದರೆಯಾದೀತು; ನಿತ್ಯ ಭವಿಷ್ಯ

    ಸುಂದರಿಯಿಂದ ಮಸಾಜ್‌ ಮಾಡಿಸಿಕೊಳ್ಳೋ ಕನಸು ಕಾಣ್ತಾ ಹೋದ್ರೆ ನಿಮಗೂ ಹೀಗೇ ಆಗ್ಬೋದು ಜೋಕೆ!

    ಇಂಗ್ಲೆಂಡ್ ವಿರುದ್ಧ ಸರಣಿಗೆ ಕ್ವಾರಂಟೈನ್‌ನಲ್ಲಿ ಕಾರ್ಯತಂತ್ರ ಸಿದ್ಧಪಡಿಸಲಿದೆ ಟೀಮ್ ಇಂಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts