More

    ಸುಂದರಿಯಿಂದ ಮಸಾಜ್‌ ಮಾಡಿಸಿಕೊಳ್ಳೋ ಕನಸು ಕಾಣ್ತಾ ಹೋದ್ರೆ ನಿಮಗೂ ಹೀಗೇ ಆಗ್ಬೋದು ಜೋಕೆ!

    ಬೆಂಗಳೂರು: ಮಸಾಜ್‌ ಮಾಡಿಕೊಂಡರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ದೂರವಾಗುವುದು ನಿಜ. ಅದರಲ್ಲಿಯೂ ಎಷ್ಟೋ ದೈಹಿಕ ಸಮಸ್ಯೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಮಾಡುವ ಮಸಾಜ್‌ಗಳೇ ಮದ್ದು ಎನ್ನುವುದೂ ಸತ್ಯವೇ.

    ಆದರೆ ಇದೇ ಕಾರಣಕ್ಕೆ ಮಸಾಜ್‌ ಕೇಂದ್ರಗಳು ಹಲವೆಡೆ ತಲೆಎತ್ತಿವೆ. ಅದೇ ಇನ್ನೊಂದೆಡೆ ಮಸಾಜ್‌ ಕೇಂದ್ರದ ಹೆಸರಿನಲ್ಲಿ ವೇಶ್ಯಾವಾಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಅವರಿಗೆಲ್ಲಾ ಮಸಾಜ್‌ ಕೇಂದ್ರವೇ ದೊಡ್ಡ ಅಡ್ಡೆಯಾಗಿಬಿಟ್ಟಿದೆ.

    ನಿಮ್ಮ ಸಮೀಪ ಅಥವಾ ಗೊತ್ತಿರುವ ಮಸಾಜ್‌ ಕೇಂದ್ರಗಳಿಗೆ ಭೇಟಿ ನೀಡಿದರೆ ಪರವಾಗಿಲ್ಲ. ಅದನ್ನು ಬಿಟ್ಟು ಆನ್‌ಲೈನ್‌ನಲ್ಲಿ ಸರ್ಚ್‌ ಮಾಡಿದರೆ ನಿಮಗೆ ಹೆಚ್ಚಿನ ಸಮಯ ಆಪತ್ತು ಕಟ್ಟಿಟ್ಟಿದ್ದೇ. ಇದಕ್ಕೆ ಈ ಘಟನೆಯೇ ಸಾಕ್ಷಿ. ಆನ್‌ಲೈನ್‌ನಲ್ಲಿ ಬೆಸ್ಟ್‌ ಮಸಾಜ್‌ ಸೆಂಟರ್‌ ಎಂದೋ ಅಥವಾ ಮಸಾಜ್‌ ಕೇಂದ್ರಗಳ ಹುಡುಕಾಟ ನಡೆಸುವ ಯುವಕರನ್ನು ಸೆಳೆದು ಅವರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುವ ದೊಡ್ಡ ಜಾಲವೊಂದು ಇದೀಗ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ಪೊಲೀಸರಿಗೆ ಸಿಕ್ಕಿಬಿದ್ದಿದೆ.

    ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಕುಮಾರ್​, ರಘು, ಮೈಕಲ್ ರಾಜ್, ಸೆಲ್ವರಾಜ್, ತಿಮ್ಮಪ್ಪ, ಮನುಕುಮಾರ್ ಗುರುತಿಸಲಾಗಿದೆ. ಮಹಿಳೆ ತಪ್ಪಿಸಿಕೊಂಡಿದ್ದಾಳೆ.

    ಮಸಾಜ್‌ ಸೆಂಟರ್‌ ಹುಡುಕಾಟದಲ್ಲಿ ಇರುವಾಗ ಅಲ್ಲಿ ಮೊದಲು ಸುಂದರ ಯುವತಿಯರ ಫೋಟೋ ಕಾಣಿಸಿಕೊಳ್ಳುತ್ತದೆ. ಇವರಿಂದ ಮಸಾಜ್‌ ಮಾಡಿಸಲಾಗುವುದು ಎಂಬ ಸಂದೇಶ ಬರುತ್ತದೆ. ಆ ಯುವತಿಯರ ಅರೆಬರೆ ಡ್ರೆಸ್‌, ಸೌಂದರ್ಯ ನೋಡಿ ಯುವಕರಷ್ಟೇ ಅಲ್ಲ, ಕೆಲವು ವಯಸ್ಸಾದವರಿಗೂ ಒಮ್ಮೆ ಹೋಗಿಯೇ ಬಿಡೋಣ ಎನ್ನಿಸುವುದುಂಟು.

    ಅಂಥದ್ದೇ ಒಂದು ಕೇಸ್‌ ಇದು. ಕಳೆದ ವಾರ 38 ವರ್ಷದ ವ್ಯಕ್ತಿಯೊಬ್ಬರು ಆನ್​ಲೈನ್​ನಲ್ಲಿ ಮಸಾಜ್ ಕೇಂದ್ರದ ಹುಡುಕಾಟ ನಡೆಸಿದಾಗ ಇದೇ ರೀತಿ ಕಾಣಿಸಿಕೊಂಡಿದೆ. ಅಲ್ಲಿರುವ ನಂಬರ್‌ಗೆ ಅವರು ಕಾಲ್‌ ಮಾಡಿದ್ದಾರೆ.

    ’ಜಯನಗರದ ಬಳಿ ಬರುವಂತೆ ಅತ್ತ ಇದ್ದವರು ತಿಳಿಸಿದ್ದಾರೆ. ಅಲ್ಲಿಗೆ ಬಂದ ಯುವತಿ, ಮನೆಯಲ್ಲೇ ಮಸಾಜ್ ಮಾಡುತ್ತೇವೆಂದು ಕೆಎಸ್​ ಲೇಔಟ್ ಬಳಿ ಕರೆದುಕೊಂಡು ಹೋಗಿದ್ದಾಳೆ. ನಂತರ ಆತನ ಜತೆ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಯಿಸಿಕೊಂಡಿದ್ದಾಳೆ.
    ನಂತರ ಈ ಫೋಟೋ ಇಟ್ಟು ಬ್ಲ್ಯಾಕ್‌ಮೇಲ್‌ ಶುರು ಮಾಡಿದೆ ತಂಡ. ವ್ಯಕ್ತಿಯೊಂದ ನಾಲ್ಕು ಲಕ್ಷ ರೂ.ಗೆ ಬೇಡಿಕೆ ಇಡಲಾಗಿದೆ. ಹಣ ಕೊಡದಿದ್ದರೆ ಫೋಟೊಗಳನ್ನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ತೋರಿಸಿ ಮಾನ ಕಳೆಯುತ್ತೇವೆ‌ ಎಂದ ಬೆದರಿಸಿದ್ದಾರೆ. ನಂತರ ಬೆದರಿಸಿ 50 ಸಾವಿರ ರೂ.ವಿತ್​​ ಡ್ರಾ ಮಾಡಿಸಿದ್ದಾರೆ. ನಂತರ ಯುವಕನ ಗೆಳೆಯ ನವೀನ್ ಎಂಬುವವನಿಗೆ ಕರೆ ಮಾಡಿಸಿ ಒಂದು ಲಕ್ಷ ಹಣ ತರಿಸಿಕೊಂಡಿದ್ದಾರೆ.

    ಇಷ್ಟೇ ಅಲ್ಲ… ಆರೋಪಿಗಳು ಇವರ ಮೈಮೇಲಿದ್ದ ಚಿನ್ನದ ಉಂಗುರ ಚಿನ್ನದ ಸರ ಹಾಗೂ ವಾಚ್​ನ್ನು‌ ಕಿತ್ತುಕೊಂಡು ಕಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಸಂತ್ರಸ್ಥ ಯುವಕ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
    ಪೊಲೀಸರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಎಚ್ಚರ… ಎಚ್ಚರ…

    ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಶೀಘ್ರವೇ ಗುಡ್‌ನ್ಯೂಸ್‌: ಸಿಗಲಿದೆ 10 ಸಾವಿರ ರೂ?

    ಭೀಕರ ಆತ್ಮಹತ್ಯಾ ದಾಳಿ: ಚುನಾವಣೆ ಬೆನ್ನಲ್ಲೇ ಘನಘೋರ ಕೃತ್ಯ- ಕನಿಷ್ಠ 30 ಮಂದಿ ಬಲಿ

    ಇಂಗ್ಲಿಷ್‌ ಭಾಷೆ ತಂದ ಎಡವಟ್ಟು: ಕಡಿಮೆ ದರಕ್ಕೆ ‘ಕೇಕ್’‌ ಸಿಕ್ಕಿತೆಂದು ಸೆಗಣಿ ತಿಂದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts