More

    ಕಣ್ಣೆದುರೇ ಹಿಂದೂಗಳ ಶವಗಳ ರಾಶಿ, ಇಸ್ಲಾಂ ಒಪ್ಪಿಕೊಳ್ಳಲು ಬೆದರಿಕೆ… ಆಗಲೇ ಸರ್ಕಾರ ಮನಸ್ಸು ಮಾಡಿದ್ದರೆ…

    ಬೆಂಗಳೂರು: ಅಲ್ಲಿತ್ತು ಹೆಣಗಳ ರಾಶಿ… ರಾಶಿ… ಎಲ್ಲರೂ ಹಿಂದೂಗಳೇ. ‘ಭಾರತೀಯರು ಸಾಯುತ್ತಾರೆ’ ಎಂಬ ಬರಹ ಅಲ್ಲಲ್ಲಿ ರಾಜಾಜಿಸುತ್ತಿದ್ದವು. ಅದೇ ಇನ್ನೊಂದೆಡೆ ನಮ್ಮ ತಲೆಗೆ ಬಂದೂಕು ಇಟ್ಟು ಇಸ್ಲಾಂ ಒಪ್ಪಿಕೊಳ್ಳಿ, ಇಲ್ಲದೇ ಹೋದರೆ… ಎಂದು ಆ ಶವಗಳನ್ನು ತೋರಿಸಿ ಬೆದರಿಸಲಾಗುತ್ತಿತ್ತು. ಕಾಶ್ಮೀರದಲ್ಲಿ ಬದುಕಲು ಇಚ್ಛಿಸುವವರು ಇಸ್ಲಾಂ ಒಪ್ಪಿಕೊಳ್ಳಬೇಕು. ಬುರ್ಕಾ ಹಾಕಿಕೊಳ್ಳಬೇಕು ಎಂದು ಗದರಿಸಲಾಗುತ್ತಿತ್ತು. ಭಾರತದ ನಾಯಿಗಳು ಬಿಟ್ಟು ಹೋಗಬಹುದು ಎಂಬೆಲ್ಲ ಘೋಷಣೆಗಳು ಮಸೀದಿಗಳ ಧ್ವನಿವರ್ಧಕಗಳ ಮೂಲಕ ಕೂಗಲಾಗುತ್ತಿತ್ತು…

    ಹೀಗೆ ಕಾಶ್ಮೀರದಲ್ಲಿನ ಆ ದಿನಗಳ ಕರಾಳ ದಿನಗಳನ್ನು ನೆನಪಿಸಿಕೊಂಡವರು ಕಾಶ್ಮೀರದಿಂದ ವಲಸೆ ಬಂದು ಬೆಂಗಳೂರಲ್ಲಿ ವಾಸಿಸಿರುವ ಕಾಶ್ಮೀರಿ ಪಂಡಿತ ಮಹಿಳೆ ಸುನೀತಾ.

    ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಘೋರ ಹತ್ಯಾಕಾಂಡವನ್ನು ಎಳೆಎಳೆಯಾಗಿ ತೆರೆದಿಟ್ಟ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಬಂದ ಮೇಲೆ ಮುಚ್ಚಿಟ್ಟ ಕರಾಳ ಕಹಿ ಘಟನೆಗಳ ಘನಘೋರ ಅಧ್ಯಾಯ ಜನರ ಮುಂದೆ ಬಂದಿದೆ. ಈ ಚಿತ್ರ ಬಿಡುಗಡೆಯಾಗದಂತೆ ಹಲವಾರು ಶಕ್ತಿಗಳು ಪಟ್ಟ ಪ್ರಯತ್ನದಿಂದಾಗಿಯೇ ಈ ಚಿತ್ರದ ಬಗ್ಗೆ ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿಯೇ ಚಿತ್ರ ಧೂಳೆಬ್ಬಿಸಿಬಿಟ್ಟಿದೆ. ಒಂದು ವರ್ಗಕ್ಕೆ ನುಂಗಲಾಗದ ತುತ್ತಾಗಿ ಪರಿಣಮಿಸಿರುವ ‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ತೆರೆಯ ಮೇಲೆ ಬರುತ್ತಿದ್ದಂತೆಯೇ ತಾವು ಅನುಭವಿಸಿರುವ ಘನಘೋರ ಸತ್ಯಗಳನ್ನು ಜನರ ಮುಂದೆ ಇಡಲು ಹಲವರು ಇದೀಗ ಧೈರ್ಯ ತೋರುತ್ತಿದ್ದು, ಸುನೀತಾ ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    1990ರಲ್ಲಿ ನಡೆದ ಕಾಶ್ಮೀರ ಪಂಡಿತರ ಮೇಲಿನ ಅಮಾನುಷ ಆಕ್ರಮಣದ ಸಂತ್ರಸ್ತರಲ್ಲಿ ಸುನೀತಾ ಕೂಡ ಒಬ್ಬರು. ಸದ್ಯ ಬೆಂಗಳೂರಲ್ಲಿ ವಾಸವಾಗಿರುವ ಇವರು, ಅಂದು ಕಾಶ್ಮೀರದಲ್ಲಿ ನಡೆದ ಅಂದಿನ ಘಟನೆಗಳನ್ನು ವಿವರಿಸಿದ್ದಾರೆ.

    ಆಗಿನ್ನೂ ನಾನು ತುಂಬಾ ಚಿಕ್ಕವಳು. ಆದರೆ ನನ್ನ ಕುಟುಂಬದೊಂದಿಗೆ ಕಾಶ್ಮೀರದಿಂದ ಜಮ್ಮುಗೆ ಬರುತ್ತಿದ್ದಾಗ ನಡೆದ ಉಗ್ರರ ದಾಳಿಯ ನೆನಪು ಮಾತ್ರ ಮರೆಯಲು ಸಾಧ್ಯವೇ ಇಲ್ಲ. 1986-88ರ ನಡುವೆ ಯಾವುದೇ ಕಾರಣವಿಲ್ಲದೇ ನಮ್ಮ ಗುಡಿಗಳು, ಮಂದಿರಗಳಿಗೆ ಬೆಂಕಿ ಹಚ್ಚಿದರು. ಬುರ್ಕಾ ಧರಿಸುವಂತೆ ಬೆದರಿಕೆ ಹಾಕುತ್ತಿದ್ದರು. ಚಿತ್ರಮಂದಿರಗಳನ್ನು ಮುಚ್ಚಿಸಿದರು. ಯಾವುದೇ ಛಾಯಾಚಿತ್ರಗಳು, ವಿಡಿಯೋ ಕೂಡ ತೆಗೆಯುವಂತೆಯೂ ಇರಲಿಲ್ಲ. ಕೇಂದ್ರ ಸರ್ಕಾರ ಆಗಲೇ ಏನಾದರೂ ಮಾಡಿದ್ದರೆ ಎಷ್ಟೋ ಮಂದಿಯ ಜೀವ ಉಳಿಯುತ್ತಿತ್ತು. ಆದರೆ ಆಗ ಏನೂ ಆಗಲಿಲ್ಲ. ಹಿಂದೂಗಳ ಹತ್ಯಾಕಾಂಡ ನಡೆಯಿತು ಎಂದಿದ್ದಾರೆ ಸುನೀತಾ.

    ನಾವು ಕಾಶ್ಮೀರಕ್ಕೆ ಪ್ರವಾಸಿಗರಾಗಿ ಹೋಗುತ್ತೇವೆಯೇ ಹೊರತು ಅಲ್ಲಿ ವಾಸಿಸಲು ಅಲ್ಲ. ಈಗಲೂ ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಈಗಲೂ ಅಲ್ಲಿನ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಅಂದು ನಮ್ಮೊಂದಿಗೆ ಏನು ಆಗಿದೆಯೋ, ಅದು ಮತ್ತೊಬ್ಬರಿಗೂ ಆಗಬಹುದು. ಇದು ಮುಂದಿನ ಭವಿಷ್ಯಕ್ಕೆ ಮತ್ತಷ್ಟು ಅಪಾಯ ಎಂಬುದೇ ಅವರ ಆತಂಕ. ನಮ್ಮ ಆಸ್ತಿಗಳನ್ನು ಸ್ಥಳೀಯ ಮುಸ್ಲಿಮರು ಬಿಟ್ಟುಕೊಡಲು ಇನ್ನೂ ಒಪ್ಪುತ್ತಿಲ್ಲ ಎನ್ನುವುದೇ ನೋವಿನ ಸಂಗತಿ ಎಂದಿದ್ದಾರೆ ಅವರು

    ಹಸಿರು-ಬಿಳಿ ಬಣ್ಣದ ನಾಮಫಲಕಗಳು ಇರದೇ ಹೋದರೆ ಅಂತಹ ಇಡೀ ಕಟ್ಟಡಗಳಿಗೆ ಬೆಂಕಿ ಇಡಲಾಗುತ್ತಿತ್ತು. ಅಲ್ಲಿಂದ ಪ್ರಮುಖ ಹಿಂದೂ ಮುಖಂಡರ ಕೊಲೆ ಮಾಡಲು ಶುರು ಮಾಡಿದರು. ಜೀವ ಭಯದಿಂದ ಟ್ರಕ್​ಗಳಲ್ಲಿ ಅವಿತು ಆಶ್ರಯ ಪಡೆಯುತ್ತಿದ್ದರೂ ಬಿಡುತ್ತಿರಲಿಲ್ಲ. ಉಗ್ರರೊಂದಿಗೆ ಪೊಲೀಸರು ಸಹ ಶಾಮೀಲಾಗಿದ್ದರಿಂದ ಎಲ್ಲವೂ ಅಲ್ಲೋಲ ಕಲ್ಲೋಲವಾಗಿತ್ತು.

    ನಮ್ಮ ಮೂರು ಮಹಡಿಯ ಮನೆ, ಹೊಲ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಜೀವ ಉಳಿಸಿಕೊಂಡು ಬಂದೆವು. 20 ದಿನಗಳ ಕಾಲ ದೇವಸ್ಥಾನವೊಂದರಲ್ಲೇ ಆಶ್ರಯ ಪಡೆದೆವು. ಕೆಲವೇ ಕೆಲವು ಮುಸ್ಲಿಮರು ಒಳ್ಳೆಯವರಿದ್ದರು. ಅವರೂ ನಮಗೆ ಸಹಾಯ ಮಾಡುತ್ತಾ ಹೇಗಾದರೂ ತಪ್ಪಿಸಿಕೊಂಡು ಹೋಗಿ ಎಂದಿದ್ದರು ಎಂದು ಭಯಾನಕ ದಿನಗಳನ್ನು ಸುನೀತಾ ನೆನಪಿಸಿಕೊಂಡರು.

    ನಿದ್ದೆಗೆಡಿಸಿದ ‘ದಿ ಕಾಶ್ಮೀರ್​ ಫೈಲ್ಸ್’​: ಸಿನಿಮಾ ನೋಡಿ ಮರಳುತ್ತಿದ್ದ ಬಿಜೆಪಿ ಸಂಸದನ ಕಾರಿನ ಮೇಲೆ ಬಾಂಬ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts