More

    ನಿದ್ದೆಗೆಡಿಸಿದ ‘ದಿ ಕಾಶ್ಮೀರ್​ ಫೈಲ್ಸ್’​: ಸಿನಿಮಾ ನೋಡಿ ಮರಳುತ್ತಿದ್ದ ಬಿಜೆಪಿ ಸಂಸದನ ಕಾರಿನ ಮೇಲೆ ಬಾಂಬ್‌!

    ಕೋಲ್ಕತಾ: ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಿ ಮರಳುತ್ತಿದ್ದ ಬಿಜೆಪಿ ಸಂಸದ ಜಗನ್ನಾಥ್​ ಸರ್ಕಾರ್​ ಅವರ ಕಾರನ್ನು ಗುರಿಯಾಗಿಸಿಕೊಂಡು ಬಾಂಬ್‌ದಾಳಿ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಸಿನಿಮಾ ನೋಡಿ ವಾಪಸ್​ ಬರುತ್ತಿದ್ದ ವೇಳೆ ನಾದಿಯಾ ಜಿಲ್ಲೆಯ ಹಾರಿಂಘಾಟಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಕಾರಿನ ಹಿಂಭಾಗದಲ್ಲಿ ಬಾಂಬ್​ ಬಿದ್ದು ಸ್ಫೋಟಗೊಂಡಿದ್ದರಿಂದ ಸಂಸದ ಅಪಾಯದಿಂದ ಪಾರಾಗಿದ್ದಾರೆ. ಜತೆಗಿದ್ದವರಿಗೂ ಯಾರಿಗೂ ಗಾಯವಾಗಿಲ್ಲ.

    ಅದೃಷ್ಟವಶಾತ್‌ ಯಾರ ಪ್ರಾಣಕ್ಕೂ ಹಾನಿಯಾಗಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಯಾರಿಗೂ ಭದ್ರತೆಯಿಲ್ಲ. ಇಲ್ಲಿ ಈಗಿರುವ ಹಿಂಸಾಚಾರ, ಅಭದ್ರತೆ ವಾತಾವರಣ ಸರಿಯಾಗಬೇಕು ಎಂದರೆ ರಾಷ್ಟ್ರಪತಿ ಆಳ್ವಿಕೆ (ಆರ್ಟಿಕಲ್​ 356) ಜಾರಿಯಾಗಬೇಕು. ಇಲ್ಲದಿದ್ದರೆ ಸರಿಯಾಗುವುದಿಲ್ಲ’ ಎಂದು ಜಗನ್ನಾಥ್​ ಹೇಳಿದ್ದಾರೆ.

    ತೃಣಮೂಲ ಕಾಂಗ್ರೆಸ್​ ಆಡಳಿತದಲ್ಲಿ ಬೇರೆ ಪಕ್ಷಗಳ ಜನಪ್ರತಿನಿಧಿಗಳೂ ಸುರಕ್ಷಿತರಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತಾ ಮಜುಂದಾರ್​ ಟ್ವೀಟ್​ ಮೂಲಕ ಕಿಡಿ ಕಾರಿದ್ದಾರೆ. ಇಲ್ಲಿ ಗೂಂಡಾಗಳನ್ನು ಸ್ವತಂತ್ರವಾಗಿ ಬಿಟ್ಟುಬಿಡಲಾಗಿದೆ. ಅವರನ್ನು ನಿಯಂತ್ರಣ ಮಾಡುವವರೇ ಇಲ್ಲದಂತಾಗಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಯಾರಿಗೂ ಕಾನೂನು ಮತ್ತು ಸುವ್ಯವಸ್ಥೆಯ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.

    ಕಾಶ್ಮೀರಿ ಪಂಡಿತರ ಹತ್ಯಾಕಾಂಡ, 1990ರ ದಶಕದಲ್ಲಿ ನಡೆದ ಅವರ ವಲಸೆಯ ಚಿತ್ರಣವನ್ನೊಳಗೊಂಡ ದಿ ಕಾಶ್ಮೀರ್​ ಫೈಲ್ಸ್​​ನ್ನು ಕೆಲವು ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಈ ಚಿತ್ರ ನಿರ್ಮಾಣ ಮಾಡಿದ ವಿವೇಕ್​ ಅಗ್ನಿಹೋತ್ರಿಯವರಿಗೆ ಬೆದರಿಕೆಗಳೂ ಬರುತ್ತಿದ್ದು, ವೈ ಕೆಟೆಗರಿ ಭದ್ರತೆಯನ್ನೂ ವಿಧಿಸಲಾಗಿದೆ. ಈ ಚಿತ್ರ ಹಲವರ ನಿದ್ದೆಗೆಡಿಸಿದ್ದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದನ ಮೇಲೆ ಇಂಥದ್ದೊಂದು ಕೃತ್ಯ ನಡೆದಿರುವುದಾಗಿ ಆರೋಪಿಸಲಾಗುತ್ತಿದೆ.

    ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ‘ದಿ ಕಾಶ್ಮೀರ್ ಫೈಲ್ಸ್​’: ಏಳೇ ದಿನಗಳಲ್ಲಿ 100 ಕೋಟಿ ರೂ.ನತ್ತ ದಾಪುಗಾಲು

    15 ವರ್ಷವಾದ್ರೂ ಮುಗಿಯದ ಇದೆಂಥ ದ್ವೇಷನಪ್ಪಾ? ಜನಸಂದಣಿ ನಡುವೆ ಬಂದು 500ಕ್ಕೂ ಹೆಚ್ಚು ಸಲ ಕಚ್ಚಿದ ಹಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts