More

    ಬಿಜೆಪಿ ಮುಖಂಡರ ಮೇಲೆ ಮುಂದುವರೆದಿದೆ ಉಗ್ರರ ದಾಳಿ: ನಾಲ್ಕನೇ ಬಲಿ!

    ಶ್ರೀನಗರ: ಬಿಜೆಪಿ ಮುಖಂಡರನ್ನು ಗುರಿಯಾಗಿಸಿಕೊಂಡು ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ ಮುಂದುವರೆದಿದೆ.

    ಅಬ್ದುಲ್ ಹಮೀದ್ ನಜರ್ (38) ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಬ್ದುಲ್‌ ಅವರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಇವರು ಬುದ್ಗಾಮ್ ಜಿಲ್ಲೆಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾಗಿದ್ದರು.

    ಭಾನುವಾರ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ವೇಳೆ ನಜರ್ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಶ್ರೀನಗರದ ಎಸ್‍ಹೆಚ್‍ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಕಳೆದ ಜೂನ್ ತಿಂಗಳಿಂದ ಬಿಜೆಪಿ ನಾಯಕರ ಮೇಲೆ ಉಗ್ರರು ದಾಳಿ ನಡೆಸುತ್ತಲೇ ಇದ್ದು, ಇದು 4ನೇ ಕೃತ್ಯವಾಗಿದೆ. ಆಗಸ್ಟ್ 6 ರಂದು ಕೂಡ ಭಯೋತ್ಪಾದಕರ ಗುಂಡಿನ ದಾಳಿಗೆ ಬಿಜೆಪಿ ನಾಯಕರೊಬ್ಬರು ಬಲಿಯಾಗಿದ್ದರು. ಕಳೆದ ತಿಂಗಳು ವಾಹೀಂ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

    ಇದನ್ನೂ ಓದಿ: ಆತ್ಮಹತ್ಯೆಗೆ ಮುಂದಾದ ಮುಂಬೈಯವ- ಮಾಹಿತಿ ಸಿಕ್ಕಿದ್ದು ಐರ್ಲೆಂಡ್‌ ಅಧಿಕಾರಿಗೆ: ಮುಂದೆ ಎಲ್ಲವೂ ವಿಚಿತ್ರ!

    ಈ ಭಯಕ್ಕೆ ಹೆದರಿ ಈಗಾಗಲೇ ನಾಲ್ವರು ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಉಳಿದ ಮುಖಂಡರ ಹತ್ಯಾ ಸರಣಿ ಮುಂದುವರೆದಿದೆ.

    ಭಾನುವಾರ ಘಟನೆ ನಡೆದ ಕೂಡಲೇ ಪ್ರದೇಶದ ಸುತ್ತ ಭದ್ರತಾ ಪಡೆಗಳು ಸುತ್ತುವರಿದು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರ ಪ್ರಕಾರ ನಜರ್ ಅವರಿಗೆ ಸುರಕ್ಷಿತ ವಸತಿ ಸೌಕರ್ಯಗಳನ್ನು ನೀಡಲಾಗಿತ್ತು. ಆದರೆ ಅವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡದೆ ವಾಕಿಂಗ್ ಹೋಗಿದ್ದರು ಎನ್ನಲಾಗಿದೆ.

    ಇಲ್ಲಿ ಹಸುವಲ್ಲ, ಸೆಗಣಿಯ ಮೇಲೆ ಕಳ್ಳರ ಕಣ್ಣು- 100 ಕೆ.ಜಿ ದಿಢೀರ್‌ ನಾಪತ್ತೆ

    84 ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಕೆಂಪು ಹವಳದ ಹಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts