More

    84 ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಕೆಂಪು ಹವಳದ ಹಾವು!

    ಖೇರಿ (ಉತ್ತರಾಖಂಡ): 1936ರಲ್ಲಿ ಪತ್ತೆಯಾಗಿದ್ದ ತೀರಾ ಅಪರೂಪದ ಎನಿಸಿರುವ ಕೆಂಪು ಹವಳದ ಕುಕ್ರಿ ಎಂಬ ಹಾವು ಉತ್ತರಾಖಂಡದ ನೈನಿತಾಲ್ ಜಿಲ್ಲೆ ಬಿಂದುಖಟ್ಟ ಬಳಿಯ ಮನೆಯೊಂದರಲ್ಲಿ ಹಾವು ಪತ್ತೆಯಾಗಿದೆ.

    1936ರಲ್ಲಿ ಈ ಹಾವು ಉತ್ತರಾಖಂಡದ ಖೇರಿಯಲ್ಲಿ ಪತ್ತೆಯಾಗಿತ್ತು. 84 ವರ್ಷಗಳ ಬಳಿಕ ಮತ್ತೊಮ್ಮೆ ಇದು ಕಾಣಿಸಿಕೊಂಡಿದ್ದು, ತಜ್ಞರಲ್ಲಿ ತೀವ್ರ ಆಸಕ್ತಿ ಮೂಡಿಸಿದೆ.
    ಈ ಹಾವಿನ ವೈಜ್ಞಾನಿಕ ಹೆಸರು ಒಲಿಗೊಂಡನ್ ಖೇರಿಯನ್ಸಿಸ್ ಎಂದು ತಜ್ಞರು ಹೇಳಿದ್ದಾರೆ. 2015ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಇದೇ ತಳಿಯ ಹಾವು ಪತ್ತೆಯಾಗಿತ್ತು. ನಂತರ ಉತ್ತರಪ್ರದೇಶದ ದಧುವಾ ರಾಷ್ಟ್ರೀಯ ಉದ್ಯಾನದಲ್ಲಿ ಕೂಡ ಸಿಕ್ಕಿತ್ತು.

    ಕಳೆದ ಶುಕ್ರವಾರ ಕುರ್ರಿಯಖಟ್ಟ ಗ್ರಾಮದ ಕವೀಂದ್ರ ಕೊರಂಗ ಎಂಬುವರಿಂದ ಗೌಲ ಅರಣ್ಯ ವಲಯಕ್ಕೆ ದೂರವಾಣಿ ಕರೆ ಬಂದಿತ್ತು. ಮನೆಯೊಳಗೆ ಹಾವು ಬಂದಿದ್ದು, ರಕ್ಷಿಸುವಂತೆ ಮನವಿ ಮಾಡಿದ್ದರು. ಅರಣ್ಯ ಸಿಬ್ಬಂದಿ ಹೋಗುವ ವೇಳೆಗೆ ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ರಕ್ಷಿಸಿದ್ದರು.

    ಅದನ್ನು ನೋಡಿದ ಮೇಲೆ ಅಚ್ಚರಿಯಾಯಿತು. ಅತ್ಯಪರೂಪದ ಕೆಂಪುಹವಳದ ಹಾವು ಎಂಬುದು ಗೊತ್ತಾಯಿತು ಎಂದು ವಿಭಾಗೀಯ ಅರಣ್ಯಾಧಿಕಾರಿ ನಿತೀಶ್ ಮಣಿ ತ್ರಿಪಾಠಿ ಮಾಹಿತಿ ನೀಡಿದ್ದಾರೆ.

    ಇದನ್ನು ಕಾಡಿಗೆ ತಂದು ಬಿಡಲಾಗಿದೆ ಎಂದಿದ್ದಾರೆ. ಐಎಫ್‌ಎಸ್ ಅಧಿಕಾರಿ ಕುಂದನ್ ಕುಮಾರ್ ಅವರು ಟ್ವಿಟ್ಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

    ಆತ್ಮಹತ್ಯೆಗೆ ಮುಂದಾದ ಮುಂಬೈಯವ- ಮಾಹಿತಿ ಸಿಕ್ಕಿದ್ದು ಐರ್ಲೆಂಡ್‌ ಅಧಿಕಾರಿಗೆ: ಮುಂದೆ ಎಲ್ಲವೂ ವಿಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts