More

    VIDEO: ಜೊತೆಜೊತೆಯಲಿ ಧಾರಾವಾಹಿ ವಿವಾದಕ್ಕೆ ಟ್ವಿಸ್ಟ್​: ನಿರ್ದೇಶಕ ಜಗದೀಶ್​ ಹೇಳಿಕೆಯ ಆಡಿಯೋ ಲೀಕ್​..

    ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಈಗ ಭಾರಿ ಸುದ್ದಿಯಾಗುತ್ತಿದೆ. ಇದರ ನಾಯಕ ನಟ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್​ ಜತ್ಕರ್ ಅವರನ್ನು ಪಾತ್ರದಿಂದ ಕೈಬಿಟ್ಟಿರುವುದು ಮಾತ್ರವಲ್ಲದೇ ಕನ್ನಡ ಕಿರುತೆರೆಯಲ್ಲಿ 2 ವರ್ಷಗಳ ಕಾಲ ಅವರನ್ನು ಯಾವುದೇ ಧಾರಾವಾಹಿ ಅಥವಾ ರಿಯಾಲಿಟಿ ಶೋಗಳಲ್ಲಿ ಬಳಸಿಕೊಳ್ಳದಂತೆ ಕನ್ನಡ ಕಿರುತೆರೆಯ ನಿರ್ಮಾಪಕರ ಸಂಘ ನಿರ್ಧರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

    ಅನಿರುದ್ಧ್​ ಅವರ ಜಾಗದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅಭಿಯಾನವನ್ನೇ ಶುರು ಮಾಡಿದ್ದರೆ, ಈ ಧಾರಾವಾಹಿಯ ಟಿಆರ್​ಪಿ ಕುಸಿಯಲು ಅನಿರುದ್ಧ್​ ಅವರೇ ಕಾರಣ ಎಂದಿದ್ದರು ನಿರ್ದೇಶಕ ಆರೂರು ಜಗದೀಶ್. ಅನಿರುದ್ಧ್​ ಸದಾ ಕಿರಿಕ್​ ಮಾಡುತ್ತಿದ್ದರು, ಆದ್ದರಿಂದ ಟಿಆರ್​ಪಿ ಕುಸಿಯಲು ಅವರೇ ನೇರ ಕಾರಣ ಎಂದು ಅವರ ಮೇಲೆ ಮಾಧ್ಯಮಗೋಷ್ಠಿಯಲ್ಲಿ ಆರೋಪಗಳ ಸುರಿಮಳೆಯನ್ನೇ ಗೈದರು.

    ಆದರೆ ಇದೇ ಆರೂರು ಜಗದೀಶ್​ ಅವರು ಈ ವಿವಾದಕ್ಕೂ ಮುನ್ನ ವ್ಯಕ್ತಿಯೊಬ್ಬರ ಜತೆ ಮಾತನಾಡಿರುವ ಆಡಿಯೋ ‘ದಿಗ್ವಿಜಯ ನ್ಯೂಸ್’​ಗೆ ಲಭ್ಯವಾಗಿದೆ. ಅದರಲ್ಲಿ ಅವರು ಅನಿರುದ್ಧ್​ ಅವರನ್ನು ಹಾಡಿ ಹೊಗಳಿದ್ದಾರೆ. ಈಗ ಏಕಾಏಕಿ ಯೂಟರ್ನ್​ ತೆಗೆದುಕೊಂಡಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

    ಏನಿದೆ ಆಡಿಯೋದಲ್ಲಿ?

    ಆರೂರು ಜಗದೀಶ್​ ಅವರೇ ಮಾತನಾಡಿದ್ದಾರೆ ಎನ್ನಲಾದ ಈ ಆಡಿಯೋದಲ್ಲಿ ಅವರು ‘ಅನಿರುದ್ಧ್​ ಸರ್ ಯಾವತ್ತಿದ್ದರೂ ಹೀರೋನೇ. ವಿಲನ್ ಆಗಲು ಸಾಧ್ಯವೇ ಇಲ್ಲ. ಟಿ.ಆರ್‌.ಪಿ ಕಮ್ಮಿ ಆಗ್ತಿದೆ ಎನ್ನೋ ಫೀಲ್‌ನ ಬಿಟ್ಟುಬಿಡಿ. ಕಥೆಯನ್ನು ಕಥೆಯಾಗಿ ನೋಡಿ’ ಎಂದಿದ್ದಾರೆ. ಅನಿರುದ್ಧ್​ ಅವರನ್ನು ಈ ಧಾರಾವಾಹಿಯ ಕೆಲ ಪಾರ್ಟ್​ಗಳಲ್ಲಿ (ಫ್ಲ್ಯಾಶ್ ಬ್ಯಾಕ್‌ ಕಥೆ) ವಿಲನ್​ ಆಗಿ ಪರಿವರ್ತನೆ ಮಾಡಿರುವುದನ್ನು ಸಹಿಸದ ಅವರ ಅಭಿಮಾನಿಯೊಬ್ಬರು ಫೋನ್​ ಮಾಡಿದಾಗ ಜಗದೀಶ್​ ಅವರು ಈ ಸ್ಪಷ್ಟನೆ ಕೊಟ್ಟಿರಬಹುದು ಎನ್ನಲಾಗಿದೆ. ಫ್ಲ್ಯಾಶ್ ಬ್ಯಾಕ್‌ ಕಥೆಯಲ್ಲಿ ಆರ್ಯವರ್ಧನ್​ನನ್ನು ಕೊಲೆಗಾರನಂತೆ ಬಿಂಬಿಸಲಾಗಿದೆ. ಅದನ್ನು ಅಭಿಮಾನಿ ಸಹಿಸದೇ ಈ ಕರೆ ಮಾಡಿರಬಹುದು ಎನ್ನಲಾಗುತ್ತಿದೆ.

    ‘’ಒಂದು ಧಾರಾವಾಹಿಯನ್ನು ಕಥೆಯಾಗಿ ನೋಡಬೇಕು. ಒಂದೇ ಒಂದು ಕ್ಯಾರೆಕ್ಟರ್‌ನಿಂದ ನೋಡಿದರೆ ಹೀಗೆನಿಸುತ್ತದೆ. ನಾವೀಗ ಫ್ಲ್ಯಾಶ್ ಬ್ಯಾಕ್‌ಗೆ ಹೋಗಿಬಿಟ್ಟಿದ್ದೀವಿ. ಆಲ್​ರೆಡಿ ಶೂಟಿಂಗ್​ ಎಲ್ಲಾ ಮುಗಿದುಬಿಟ್ಟಿದೆ. ಈ ಕಥೆಯಲ್ಲಿ ರಾಜನಂದಿನಿ (ನಾಯಕನ ಮೊದಲ ಪತ್ನಿ) ಎಂಟ್ರಿನೂ ಆಗಿಹೋಗಿದೆ. ಆದ್ದರಿಂದ ಸದ್ಯ ಯಾವುದೇ ಬದಲಾವಣೆ ಮಾಡಲು ಆಗುವುದಿಲ್ಲ. ಹಾಗಾಗಿ, ಕಥೆಯಾಗಿ ನೋಡಿ ಎಂದು ಹೇಳಿರೋ ಆರೂರು ಜಗದೀಶ್ ಅವರು, ಅನಿರುದ್ಧ್ ಸರ್ ಯಾವತ್ತಿದ್ದರೂ ಹೀರೋನೇ. ವಿಲನ್ ಅಲ್ಲ ಎಂದು ಅವರನ್ನು ಹೊಗಳಿದ್ದಾರೆ.

    ಈ ಫ್ಲ್ಯಾಶ್ ಬ್ಯಾಕ್‌ನಿಂದ ಬಂದ ಮೇಲೆ ಹೀರೋಯಿಸಂ ಅನ್ನು ನಾವು ಇನ್ನಷ್ಟು ರಿವೀಲ್ ಮಾಡ್ತೀವಿ. ಕಥೆಯಲ್ಲಿ ಹಲವು ಟ್ವಿಸ್ಟ್‌ಗಳಿವೆ. ಈಗ ತಾತ್ಕಾಲಿಕವಾಗಿ ವಿಲನ್​ ಎನಿಸುತ್ತಾರೆ ಅಷ್ಟೇ. ಇದ್ದಕ್ಕಿದ್ದಂತೆ ದಿಢೀರ್ ಅಂತ ನಾವು ಬದಲಾಯಿಸೋಕೂ ಆಗಲ್ಲ. ಕ್ಯಾರೆಕ್ಟರ್‌ನಲ್ಲಿ ವಿಭಿನ್ನತೆ ಇರಬೇಕು. ಇಲ್ಲಾಂದ್ರೆ ಯಾರೂ ನೋಡಲ್ಲ. ನಾಯಕ-ನಾಯಕಿಯ ರೊಮಾನ್ಸ್ ಜಾಸ್ತಿ ಆಗೋಯ್ತು. ರಾಜನಂದಿನಿ ಬರಬೇಕು ಅನ್ನೋ ತರಹ ಜನ ಫೀಲ್ ಮಾಡಿದ್ದರು. ಹಾಗಾಗಿ ಕಥೆಯಾಗಿ ನೋಡಿ.. ನಿಮಗೆ ಇಷ್ಟ ಆಗುತ್ತೆ ಖಂಡಿತ’ ಎಂದು ಅದರಲ್ಲಿ ಅವರು ಹೇಳಿದ್ದಾರೆ.

    ‘ಧಾರಾವಾಹಿಯಲ್ಲಿ ಚಿಕ್ಕ ಕ್ಯಾರೆಕ್ಟರ್​ ಮಾಡಿದರೂ ಜನರು ಅವರನ್ನು ಗುರುತಿಸುವಷ್ಟರ ಮಟ್ಟಿಗೆ ಧಾರಾವಾಹಿ ಜನಪ್ರಿಯವಾಗಿದೆ. ಆದ್ದರಿಂದ ಟಿಆರ್​ಪಿ ಎಲ್ಲಾ ಬಿಟ್ಟುಬಿಡಿ. ಟಿಆರ್​ಪಿ ನೋಡಲು ಒಂದು ಹತ್ತು ಕಡೆ ಮಷಿನ್ ಇಟ್ಟಿರುತ್ತಾರೆ ಅಷ್ಟೇ. ಆದರೆ ಅದೇ ಟಿಆರ್​ಪಿ ಆಗಲ್ಲ, ಕರ್ನಾಟಕದ ಆರೇಳು ಕೋಟಿ ಜನ ಧಾರಾವಾಹಿ ನೋಡುತ್ತಾರೆ ಎನ್ನುವುದು ನೆನಪಿರಲಿ, ಆರ್ಯವರ್ಧನ್​ (ನಾಯಕ) ಎಂದಿಗೂ ಇದರಲ್ಲಿ ಹೀರೋನೇ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಡಿಯೋ ಇಲ್ಲಿದೆ ಕೇಳಿ:

    ಹೆಣ್ಣುಮಕ್ಕಳಿಗೆ ವಯಸ್ಸು ಕೇಳೋ ಮುನ್ನ ಎಚ್ಚರ! ಡೊಮಿನೋಸ್ ಪಿಜ್ಜಾಗೆ 3.78 ಲಕ್ಷ ರೂ. ದಂಡ

    ಪ್ರವಾದಿ ಮೊಹಮ್ಮದ್​​​ ವಿರುದ್ಧ ಹೇಳಿಕೆ ನೀಡಿ ಕೆಲಸ ಕಳೆದುಕೊಂಡ ಬಿಜೆಪಿ ಶಾಸಕ- ಪಕ್ಷದಿಂದ ಅಮಾನತು

    ದೇವಾಲಯ ಪ್ರವೇಶಿಸಿದ ಸಚಿವ ​ಮನ್ಸೂರಿ: ಮೈತ್ರಿ ಸರ್ಕಾರಕ್ಕೆ ಶುರುವಾಯ್ತು ಸಂಕಟ! ಆಗಿದ್ದೇನು ನೋಡಿ…

    ನಿಜ ಹೇಳಬೇಕು ಅಂದ್ರೆ ನಾನು‌ ಅಂದು ನಾಟಿ ಕೋಳಿ ಸಾಂಬಾರ್​ ತಿಂದೇ ಇರಲಿಲ್ಲ: ಸಿದ್ದರಾಮಯ್ಯ ಯೂ ಟರ್ನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts