More

    ಹೆಣ್ಣುಮಕ್ಕಳಿಗೆ ವಯಸ್ಸು ಕೇಳೋ ಮುನ್ನ ಎಚ್ಚರ! ಡೊಮಿನೋಸ್ ಪಿಜ್ಜಾಗೆ 3.78 ಲಕ್ಷ ರೂ. ದಂಡ

    ಐರ್ಲೆಂಡ್​: ಹೆಣ್ಣು ಮಕ್ಕಳು ಮತ್ತು ವಯಸ್ಸಿನ ವಿಷಯದಲ್ಲಿ ನಾನಾ ರೀತಿಯ ಜೋಕ್​ಗಳಿವೆ. ಮಹಿಳೆಯರಿಗೆ ಎಂದಿಗೂ ವಯಸ್ಸು ಆಗುವುದೇ ಇಲ್ಲ, ಆದ್ದರಿಂದ ಎಂದಿಗೂ ಅವರ ವಯಸ್ಸನ್ನು ಕೇಳಬಾರದು ಎಂದೇ ತಮಾಷೆಯ ರೀತಿಯಲ್ಲಿ ಹೇಳುತ್ತಾರೆ. ಆದರೆ ಇಲ್ಲಿ ನಡೆದಿರುವ ಘಟನೆ ತಮಾಷೆಯಲ್ಲ. ಮಹಿಳೆಯೊಬ್ಬರಿಗೆ ವಯಸ್ಸನ್ನು ಕೇಳಿದ ಕಾರಣದಿಂದಾಗಿ ಈಗ ಡೊಮಿನೋಸ್ ಪಿಜ್ಜಾ 3.78 ಲಕ್ಷ ರೂಪಾಯಿ ದಂಡ ತೆರಬೇಕಾಗಿದೆ. ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಆ ಮಹಿಳೆಗೆ ಕೊಡಬೇಕಾಗಿದೆ!

    ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಅಷ್ಟಕ್ಕೂ ಆಗಿದ್ದೇನೆಂದರೆ, ಸಂದರ್ಶನವೊಂದರಲ್ಲಿ ಡೊಮಿನೋಸ್​ ಪಿಜ್ಜಾ ಮಹಿಳೆಗೆ ವಯಸ್ಸನ್ನು ಕೇಳಿತ್ತು ಅಷ್ಟೇ!

    ಕೌಂಟಿ ಟೈರೋನ್​ನ ಸ್ಟ್ರಾಬೇನ್​ನಲ್ಲಿರುವ ಪಿಜ್ಜಾ ಕಂಪೆಯು ಡೆಲಿವರಿ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ವಾಲ್ಷ್​ ಎಂಬ ಮಹಿಳೆ ಅರ್ಜಿ ಸಲ್ಲಿಸಿದ್ದರು. ಇದು ಕೇವಲ ಪುರುಷರಿಗೆ ಇರುವ ಹುದ್ದೆಯಾಗಿದ್ದರಿಂದ ಕಂಪೆನಿ ಇವರನ್ನು ಮೊದಲೇ ನಿರಾಕರಿಸುವ ರೀತಿಯಲ್ಲಿ ಮಾತನಾಡಿತ್ತು. ಆದರೂ ಕೊನೆಗೆ ಅವರ ವಯಸ್ಸನ್ನು ಕೇಳಿತು. ಅದಕ್ಕೆ ಮಹಿಳೆ ಡ್ರೈವರ್​ ಹುದ್ದೆಗೆ ನಾನು ಎಲ್ಲಾ ರೀತಿಯಲ್ಲಿಯೂ ಅರ್ಹಳಾಗಿದ್ದೇನೆ. ವಯಸ್ಸು ಅಥವಾ ನನ್ನ ಲಿಂಗ (ಹೆಣ್ಣು) ಅದಕ್ಕೆ ಅಡ್ಡಿ ಬರುವುದಿಲ್ಲ ಎಂದಳು.

    ಆದರೆ ಆಕೆ ಹೆಣ್ಣು ಎನ್ನುವ ಕಾರಣಕ್ಕೆ ಮತ್ತು ವಯಸ್ಸಾದ್ದರಿಂದ ಕೆಲಸದಿಂದ ಕಂಪೆನಿ ಆಕೆಯನ್ನು ಅನರ್ಹಗೊಳಿಸಿತು. ಇದು ವಾಲ್ಷ್​ನ ಕೆಂಗಣ್ಣಿಗೆ ಗುರಿಯಾಯಿತು. ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ನನ್ನನ್ನು ಈ ಹುದ್ದೆಗೆ ಪರಿಗಣಿಸಲಿಲ್ಲ, ಇದು ತಾರತಮ್ಯ ಎನ್ನುವ ಕಾರಣಕ್ಕೆ ಕಂಪೆನಿ ವಿರುದ್ಧ ವಾಲ್ಷ್​ ದೂರು ದಾಖಲು ಮಾಡಿದರು. ಮೊದಲಿಗೆ ವಾಲ್ಷ್ ಫೇಸ್​ಬುಕ್ ಮೂಲಕ ಕಂಪೆನಿಯ ಮುಖ್ಯ ಕಚೇರಿಯನ್ನು ಸಂಪರ್ಕಿಸಿ ಅಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಕಂಪೆನಿ ಇವರಿಂದ ಕ್ಷಮೆ ಕೂಡ ಕೋರಿದೆ.

    ಆದರೂ ಅಷ್ಟಕ್ಕೆ ಸುಮ್ಮನಾಗದ ವಾಲ್ಷ್​ ಲಿಂಗ ಮತ್ತು ವಯಸ್ಸಿನ ತಾರತಮ್ಯದ ಕುರಿತು ಕೋರ್ಟ್​ ಮೊರೆ ಹೋದರು. “ನೇಮಕಾತಿ ಮತ್ತು ಆಯ್ಕೆಯಲ್ಲಿ ತೊಡಗಿರುವ ಉದ್ಯೋಗದಾತನಿಗೆ ಕಾನೂನಿನ ಪ್ರಕಾರ ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದಿರಬೇಕು. ನಿರ್ದಿಷ್ಟ ಕೆಲಸಗಳನ್ನು ಇಂಥವರಷ್ಟೇ ಮಾಡಬಲ್ಲರು ಎಂಬ ಸ್ಟೀರಿಯೊಟೈಪಿಕ್ ದೃಷ್ಟಿಕೋನಗಳಿಗೆ ಅವಕಾಶ ಇರಬಾರದು ಎಂದು ಅರ್ಜಿಯಲ್ಲಿ ತಿಳಿಸಿದರು. ಕಂಪೆನಿ ನಡೆಸಿಕೊಂಡ ರೀತಿಗೆ ತಮಗೆ ಅವಮಾನ ಆಗಿರುವುದಾಗಿ ಹೇಳಿದರು.

    ಇದನ್ನು ಒಪ್ಪಿದ ಕೋರ್ಟ್​ ಪರಿಹಾರಕ್ಕೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ಈಗ 4 ಸಾವಿರ ಪೌಂಡ್ ಅಂದರೆ ಸುಮಾರು 3.78 ಲಕ್ಷ ರೂಪಾಯಿಗಳ ಪರಿಹಾರವನ್ನು ಮಹಿಳೆಗೆ ನೀಡಬೇಕಾಗಿದೆ. (ಏಜೆನ್ಸೀಸ್​)

    ಪ್ರವಾದಿ ಮೊಹಮ್ಮದ್​​​ ವಿರುದ್ಧ ಹೇಳಿಕೆ ನೀಡಿ ಕೆಲಸ ಕಳೆದುಕೊಂಡ ಬಿಜೆಪಿ ಶಾಸಕ- ಪಕ್ಷದಿಂದ ಅಮಾನತು

    ದೇವಾಲಯ ಪ್ರವೇಶಿಸಿದ ಸಚಿವ ​ಮನ್ಸೂರಿ: ಮೈತ್ರಿ ಸರ್ಕಾರಕ್ಕೆ ಶುರುವಾಯ್ತು ಸಂಕಟ! ಆಗಿದ್ದೇನು ನೋಡಿ…

    ನಿಜ ಹೇಳಬೇಕು ಅಂದ್ರೆ ನಾನು‌ ಅಂದು ನಾಟಿ ಕೋಳಿ ಸಾಂಬಾರ್​ ತಿಂದೇ ಇರಲಿಲ್ಲ: ಸಿದ್ದರಾಮಯ್ಯ ಯೂ ಟರ್ನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts