More

    ನಿಜ ಹೇಳಬೇಕು ಅಂದ್ರೆ ನಾನು‌ ಅಂದು ನಾಟಿ ಕೋಳಿ ಸಾಂಬಾರ್​ ತಿಂದೇ ಇರಲಿಲ್ಲ: ಸಿದ್ದರಾಮಯ್ಯ ಯೂ ಟರ್ನ್​

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣದ ನಡುವೆಯೇ ಈಗ ಮಡಿಕೇರಿಯಲ್ಲಿ ಅವರು ನಾಟಿಕೋಳಿ ಸಾಂಬಾರ್​ ತಿಂದು ದೇವಾಲಯಕ್ಕೆ ಭೇಟಿ ಕೊಟ್ಟಿರುವ ವಿವಾದ ಶುರುವಾಗಿದೆ.

    ನಾಟಿಕೋಳಿ ಸಾರು ತಿಂದು ಕೊಡಗಿನಲ್ಲಿ ದೇವಾಲಯಕ್ಕೆ ಸಿದ್ದರಾಮಯ್ಯನವರು ಭೇಟಿ ನೀಡಿರುವುದಾಗಿ ಹೇಳಲಾಗುತ್ತಿದೆ. ಮಡಿಕೇರಿಯ ಅತಿಥಿಗೃಹದಲ್ಲಿ ಕಳೆದ 18ನೇ ತಾರೀಖು ಮಧ್ಯಾಹ್ನ ಊಟ ಮಾಡಿದ್ದ ಸಿದ್ದರಾಮಯ್ಯನವರು ನಂತರ ಅಲ್ಲಿಂದ ದೇವಾಲಯಕ್ಕೆ ಭೇಟಿ ನೀಡಿದ್ದರು. ಅತಿಥಿ ಗೃಹದಲ್ಲಿ ಸಿದ್ದರಾಮಯ್ಯಗೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಅವರಿಂದ ಊಟದ ವ್ಯವಸ್ಥೆ ಮಾಡಿಸಿದ್ದರು.

    ಸಿದ್ದರಾಮಯ್ಯನವರಿಗೆ ಪ್ರೀತಿ ಎನ್ನುವ ಕಾರಣಕ್ಕೆ ನಾಟಿ ಕೋಳಿ ಸಾರು, ರಾಗಿ ಮುದ್ದೆ, ಕಣಿಲೆ, ಅನ್ನ ತರಕಾರಿ ಸಾಂಬಾರಿನ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯನವರು ತಮ್ಮ ನೆಚ್ಚಿನ ನಾಟಿ ಕೋಳಿ ಸಾರನ್ನು ತಿಂದಿದ್ದರು. ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.

    ಇದು ವಿವಾದ ಸೃಷ್ಟಿಸುತ್ತಲೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯನಾನು ಸಿದ್ದರಾಮಯ್ಯನವರಿಗಾಗಿ ನಾಟಿಕೋಳಿನ ಸಾರು ಮಾಡಿಸಿದ್ದು ನಿಜ, ಅದು ಅವರಿಗೆ ತುಂಬಾ ಪ್ರೀತಿ ಎನ್ನುವ ಕಾರಣಕ್ಕೆ ಮಾಡಿಸಿದ್ದೆ. ಆದರೆ ಅವರು ಅದರ ಸೇವನೆ ಮಾಡಲಿಲ್ಲ, ತರಕಾರಿ ಸಾಂಬಾರು ಸೇವಿಸಿ ಹೋಗಿದ್ದರು ಎಂದಿದ್ದರು. ಆದರೆ ಈ ಬಗ್ಗೆ ಅಂದು ಸಿದ್ದರಾಮಯ್ಯನವರು ಹೇಳಿದ್ದೇ ಬೇರೆ. ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳುತ್ತಲೇ ಗರಂ ಆದ ಸಿದ್ದರಾಮಯ್ಯ, “ಏನಿಗ? ದೇವರು ಇಂಥದ್ದೇ ತಿನ್ನಬೇಕು ಅಂತ ಏನಾದ್ರೂ ಹೇಳಿದ್ದಾನಾ ಹೇಳ್ರಪ್ಪ ಎಂದು ಪ್ರಶ್ನಿಸಿದರು. ನೀವು ರಾತ್ರಿ ಮಾಂಸ ತಿಂದು ಬೆಳಗ್ಗೆ ಹೋಗ್ಬೋದಂತೆ, ಮಧ್ಯಾಹ್ನ ತಿಂದು ಸಂಜೆ ಹೋದ್ರೆ ತಪ್ಪೇನಯ್ಯಾ’ ಎಂದು ಪ್ರಶ್ನಿಸಿದ್ದರು.

    ಆದರೆ ಇಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಅಂದು ನಾನು ಮಾಂಸಾಹಾರ ಸೇವನೆ ಮಾಡಿರಲಿಲ್ಲ. ಅವತ್ತು ತಿಂದದ್ದು ಅಕ್ಕಿರೊಟ್ಟಿ. ವೀಣಾ ಅಚ್ಚಯ್ಯ ನಾಟಿಕೋಳಿ‌ ಮಾಡಿಕೊಂಡು ಬಂದಿದ್ದು ನಿಜ, ಆದರೆ ನಾನು ಮಾಂಸ ಸೇವನೆ ಮಾಡಿರಲಿಲ್ಲ. ಕೆಲವರು ವಾದ ಮಾಡುತ್ತಿದ್ದಾರೆ, ಅದಕ್ಕೆ ಕೌಂಟರ್ ಕೊಡ್ತಾ ಇದ್ದೇನೆ, ಯಾಕೆ ತಿನ್ನಬಾರದು ಅಂತ ವಾದ ಮಾಡುತ್ತಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಮಾಂಸ ತಿನ್ನೋದು ಬಿಡೋದು ಅವರವರ ಹ್ಯಾಬಿಟ್. ನಾನು ಮಾಂಸ ತಿನ್ನುತ್ತೇನೆ, ಅದು ನನ್ನ ಹ್ಯಾಬಿಟ್ ಎಂದ ಸಿದ್ದರಾಮಯ್ಯ ನೀವು ತಿನ್ನಲ್ವೇನಪ್ಪ, ಇಲ್ಲಿ ಎಷ್ಟು ಜನ ತಿನ್ನಲ್ಲ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು. ನಾನು ದೇವಸ್ಥಾನಗಳಿಗೆ ಹೋಗ್ತೇನೆ, ನಮ್ಮೂದು ದೇವಸ್ಥಾನದಲ್ಲಿ ನಾನು ಕುಣಿಯಲಿಲ್ವೇ? ಅನೇಕ ಬಾರಿ ತಿರುಪತಿ, ಚಾಮುಂಡಿ, ನಂಜನಗೂಡಿಗೆ ಹೋಗಿದ್ದೇನೆ. ಎಷ್ಟೋ ದೇವರಿಗೆ ಮಾಂಸದ ಎಡೆ ಇಡುತ್ತಾರೆ. ನಾನು ಕೋಳಿ, ಕುರಿ, ಮೇಕೆ ಅಷ್ಟೇ ತಿನ್ನೋದು. ಯಾವುದನ್ನು ತಿನ್ನಬೇಕು ಅಂತ ಬೇರೆಯವರನ್ನು ಯಾಕೆ ಕೇಳ್ಬೇಕು? ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ನಾನ್ಯಾಕೆ ಕೈಹಾಕಲಿ ಎಂದು ಪ್ರಶ್ನಿಸಿದರು.

    ದೇವಸ್ಥಾನಕ್ಕೆ ಹೋದಾಗ ನನೀವೇನು ತಿಂದ್ರಿ ಅಂತ ಕೇಳ್ತಾರೇನ್ರೀ? ಅಷ್ಟಕ್ಕೂ ನಾನು ಅವತ್ತು ತಿಂದೇ ಇಲ್ಲ. ವೀಣಾ ಅಚ್ಚಯ್ಯ ಹೇಳಿದ್ದು ನಿಜ. ನಾನು ಮಾಂಸ ಹಾರಿ ಆದ್ರೂ ಅವತ್ತು ತಿನ್ನಲಿಲ್ಲ. ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನಾನು ಹೇಳ್ದೆ ಅಷ್ಟೇ. ನಾನು ಸತ್ಯವನ್ನೇ ಹೇಳ್ತೇನೆ ಎಂದರು. (ದಿಗ್ವಿಜಯ ನ್ಯೂಸ್​)

    ನಾಟಿಕೋಳಿ ವಿವಾದ: ನಮ್​ ಮನೇಲಿ ಚಿಕನ್​ ತಿಂದೇ ಇಲ್ಲ ಎಂದ ಮಾಜಿ ಶಾಸಕಿ: ಆದ್ರೆ ಸಿದ್ದು ಹೇಳಿದ್ದೇ ಬೇರೆ…

    ನಿಷೇಧಾಜ್ಞೆ ಉಲ್ಲಂಘಿಸೋದು ನನಗೇನು ದೊಡ್ಡದಲ್ಲ ಎಂದು ಗರಂ ಆಗುತ್ತಲೇ ‘ಮಡಿಕೇರಿ ಚಲೋ’ ನಿಲ್ಲಿಸಿದ ಸಿದ್ದು

    ಕಾಂಗ್ರೆಸ್​ನ ‘ಮಡಿಕೇರಿ ಚಲೋ’ಗೆ ಜಿಲ್ಲಾಡಳಿತ ನೀಡಿತು ಶಾಕ್​- ಹೊರಟಿತು ಹೀಗೊಂದು ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts