More

    ನಿಷೇಧಾಜ್ಞೆ ಉಲ್ಲಂಘಿಸೋದು ನನಗೇನು ದೊಡ್ಡದಲ್ಲ ಎಂದು ಗರಂ ಆಗುತ್ತಲೇ ‘ಮಡಿಕೇರಿ ಚಲೋ’ ನಿಲ್ಲಿಸಿದ ಸಿದ್ದು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಕಪ್ಪು ಬಾವುಟ ಪ್ರದರ್ಶನ ಹಾಗೂ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇದೇ 26ರಂದು ಮಡಿಕೇರಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು.

    ಅದೇ ದಿನ ಮಡಿಕೇರಿಯಲ್ಲಿ ಬಿಜೆಪಿಯ ಜಾಗೃತಿ ಸಮಾವೇಶವೂ ಹಮ್ಮಿಕೊಂಡಿರುವ ಕಾರಣ, ಇದು ಸಾಕಷ್ಟು ಗಲಭೆಗೆ ಕಾರಣವಾಗಬಹುದು ಎನ್ನುವ ಕಾರಣಕ್ಕೆ ಮಡಿಕೇರಿ ಜಿಲ್ಲಾಡಳಿತವು ಕೊಡಲು ಜಿಲ್ಲೆಯಾದ್ಯಂತ ಆಗಸ್ಟ್ 24 ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ಸಾಯಂಕಾಲ 6 ಗಂಟೆಯವರೆಗೆ ಸೆಕ್ಷನ್ 144 ಹೇರಲಾಗಿದೆ. ಅಂದರೆ ಇಷ್ಟೂ ದಿನಗಳು ನಿಷೇಧಾಜ್ಞೆ ಜಾರಿಯಲ್ಲಿ ಇರಲಿವೆ. ಮಾತ್ರವಲ್ಲದೇ ಈ ದಿನ ಮದ್ಯ ಮಾರಾಟವನ್ನು ಕೂಡ ನಿಷೇಧಿಸಲಾಗಿದೆ.

    ಇದಕ್ಕೆ ಗರಂ ಆಗಿರುವ ಸಿದ್ದರಾಮಯ್ಯನವರು ಪತ್ರಿಕಾಗೋಷ್ಠಿ ಕರೆದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಸರ್ಕಾರಕ್ಕೆ ನನ್ನ ವಿರುದ್ಧ ಭಯ ಬಂದಿದೆ. ಹಾಗಾಗಿ ಸಾವರ್ಕರ್ ವಿಚಾರವೇ ಮುಂದಿಟ್ಟುಕೊಂಡಿದ್ದಾರೆ. ಸಾಕಷ್ಟು ಬಾರಿ ನಾನು ಕೊಡಗಿಗೆ ಹೋಗಿದ್ದೆ. ಆಗ ಯಾರೂ ಪ್ರತಿಭಟನೆ ಮಾಡಿಸಲಿಲ್ಲ, ಈಗ ನನ್ನನ್ನು ಹತ್ತಿಕ್ಕಲು ನೋಡುತ್ತಿದ್ದಾರೆ ಎಂದು ಕಿಡಿ ಕಾರಿದರು.

    ಭೋಪಯ್ಯ ನನಗೆ ಸವಾಲು ಹಾಕಿದ್ದಾರೆ. ಕೊಡಗಿಗೆ ಬರಲಿ ಅಂತ ಸವಾಲು ಹಾಕಿದ್ದಾರೆ. ನಾವು ಸ್ವತಂತ್ರ ಭಾರತದಲ್ಲಿ ಇದ್ದೇವಿ ತಾನೆ? ಹಿಂದೆ ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ದರು. ಆದರೂ ಬಳ್ಳಾರಿ ಪಾದಯಾತ್ರೆ ಮಾಡಿದ್ವಿ. ಈಗ ಮಡಿಕೇರಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಬಿಜೆಪಿಗರು ಜಾಗೃತಿ ಸಮಾವೇಶ ಮಾಡುತ್ತಿದ್ದಾರೆ. ಈ ಮೂಲಕ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದರು.

    ಅನಗತ್ಯವಾಗಿ ನನನ್ನ ವಿರುದ್ಧ ಕಾರಣ ಇಲ್ಲದೆ ಪ್ರತಿಭಟನೆ ಮಾಡಿದ್ದಾರೆ. ಈಗ ನಿಷೇಧಾಜ್ಞೆ ಹೇರಿದ್ದಾರೆ. ನಾವು ನಿಷೇಧಾಜ್ಞೆ ಉಲ್ಲಂಘನೆ ಮಾಡಬಹುದಿತ್ತು, ಅದೇನು ದೊಡ್ಡ ವಿಷಯವಲ್ಲ. ಆದರೆ ನಾನು ಮುಖ್ಯಮಂತ್ರಿ ಆಗಿದ್ದವನು. ಆದ್ದರಿಂದ ಕಾನೂನು ಪಾಲನೆ ಮಾಡಲೇಬೇಕು. ಈಗ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ. ಆದ್ದರಿಂದ ಮಡಿಕೇರಿ ಚಲೋ ಕಾರ್ಯಕ್ರಮ ಮುಂದೂಡಿದ್ದೇವೆ ಎಂದರು.

    ಪಕ್ಷದ ನಿರ್ಧಾರದಂತೆ ಸದ್ಯ ಹೋರಾಟ ಮುಂದೂಡಲಾಗಿದೆ. ಕೊಡಗಿನಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಕಳಪೆ ಕಾಮಗಾರಿ ನೋಡಲು ಅಡ್ಡಿ ಪಡಿಸುವ ಉದ್ದೇಶದಿಂದ ಮೊಟ್ಟೆ ಹೊಡೆದರು. ಸರ್ಕಾರ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೊಡಗಲ್ಲಿ ಪ್ರತಿಭಟಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

    ಕಾಂಗ್ರೆಸ್​ನ ‘ಮಡಿಕೇರಿ ಚಲೋ’ಗೆ ಜಿಲ್ಲಾಡಳಿತ ನೀಡಿತು ಶಾಕ್​- ಹೊರಟಿತು ಹೀಗೊಂದು ಆದೇಶ

    ಕೆಪಿಟಿಸಿಎಲ್​ ಪರೀಕ್ಷೆ ಗೋಲ್​ಮಾಲ್​: ಸ್ಮಾರ್ಟ್​ವಾಚ್​, ಬ್ಲೂಟೂಥ್​ನಿಂದ ಅಕ್ರಮ- 9 ಮಂದಿ ಅರೆಸ್ಟ್​

    ಕೈಗೆ ಬಂದ ತುತ್ತು ಬಾಯಿಗಿಲ್ಲ: ಸರ್ಕಾರಿ ಕೆಲಸ ಸಿಕ್ಕಿಲ್ಲ.. ಬ್ಲಡಿ ಸಿಸ್ಟಮ್​ ಎಂದು ಬರೆದಿಟ್ಟು ಬಾರದ ಲೋಕಕ್ಕೆ ಯುವತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts