More

    ಅಪ್ಪ ಹಾಕಿದ ಲವ್​ ಜಿಹಾದ್​​ ಕೇಸ್​- ಪುತ್ರಿ ಎಂದಳು ನಮ್ದು ಪ್ಯೂರ್​ ಲವ್​: ಹೈಕೋರ್ಟ್​ ಏನು ಹೇಳ್ತು ನೋಡಿ…

    ಮುಂಬೈ: ಅಂತರ್​ಧರ್ಮೀಯ ವಿವಾಹ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ಆಮಿಷ ಒಡ್ಡಿ ಇಲ್ಲವೇ ಅವರನ್ನು ಅಪಹರಣ ಮಾಡಿಕೊಂಡು ತಮ್ಮ ಧರ್ಮಕ್ಕೆ ಮತಾಂತರಗೊಳಿಸುತ್ತಿರುವ ಭಯಾನಕ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಇದೇ ಕಾರಣದಿಂದ ಕೆಲವು ರಾಜ್ಯಗಳು ಲವ್​ ಜಿಹಾದ್​ ತಡೆಗೆ ಕಠಿಣ ಕಾನೂನು ರೂಪಿಸಿವೆ.

    ಅದೇ ರೀತಿಯ ಅಂತರ್​ಧರ್ಮೀಯ ವಿವಾಹ ಮುಂಬೈ ಹೈಕೋರ್ಟ್​ ಮೆಟ್ಟಿಲೇರಿತ್ತು. ತನ್ನ 19 ವರ್ಷದ ಮಗಳನ್ನು ವಾಪಸ್ ಕಳುಹಿಸುವಂತೆ ಯುವತಿ ತಂದೆ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಇಷ್ಟದಂತೆ, ಪಾಲಕರು ನೋಡಿದ ಹುಡುಗನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ, ನಂತರ ಅನ್ಯ ಧರ್ಮಿಯ ಯುವಕನ ಬಲೆಗೆ ಬಿದ್ದು ಮೋಸ ಹೋಗಿದ್ದಾಳೆ. ಅವನನ್ನು ಮದುವೆಯಾಗಿದ್ದು, ಮತಾಂತರಗೊಳ್ಳುತ್ತಿದ್ದಾಳೆ ಎಂದು ಕೋರ್ಟ್​ನಲ್ಲಿ ತಿಳಿಸಿದ್ದ ಅಪ್ಪ, ಮಗಳನ್ನು ವಾಪಸ್​ ಕಳುಹಿಸಿಕೊಡುವಂತೆ ಆಕೆಯ “ಪತಿ”ಯ ಮನೆಯವರಿಗೆ ಆದೇಶಿಸಬೇಕು ಎಂದು ಕೋರಿದ್ದರು. ಇದೊಂದು ಲವ್​ ಜಿಹಾದ್​ ಕೇಸ್​ ಎನ್ನುವುದು ಅವರ ಆರೋಪ.

    ಮಗಳು ಏಕಾಏಕಿ ನಾಪತ್ತೆಯಾಗಿಬಿಟ್ಟಿದ್ದಳು. ಪೊಲೀಸರಲ್ಲಿ ದೂರು ದಾಖಲು ಮಾಡಿದಾಗ 24 ಗಂಟೆ ಕಾಯುವಂತೆ ಹೇಳಿದ್ದರು. ಅಲ್ಲಿಯವರೆಗೆ ಆ ಯುವಕ ಮಗಳನ್ನು ಮೋಡಿ ಮಾಡಿ ನಿಖಾ ಮಾಡಿಕೊಂಡಿದ್ದಾನೆ. ಇದರಿಂದ ತಮ್ಮ ಮಗಳ ಭವಿಷ್ಯ ಕತ್ತಲೆಯಾಗಿದೆ. ಆಕೆಯ ಪ್ರಾಣಕ್ಕೂ ಕುತ್ತಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.
    ಆದರೆ ಯುವತಿಯನ್ನು ಕೋರ್ಟ್​ನಲ್ಲಿ ಕರೆಸಿ ವಿಚಾರಣೆ ನಡೆಸಿದಾಗ ಆಕೆ ತಾನು ತನ್ನ ಇಚ್ಛೆಯಂತೆ ಯುವಕನನ್ನು ಮದುವೆಯಾಗಿರುವುದಾಗಿ ಹೇಳಿದಳು. ಯುವಕನ ಮನೆಯವರು ಆಕೆಯ ತಲೆತಿರುಗಿಸಿದ್ದಾರೆ ಎಂದು ಅಪ್ಪ ಎಷ್ಟೇ ಹೇಳಿದರೂ, ಮಗಳು ಪತಿಯ ಜತೆಯೇ ಇರುವುದಾಗಿ ಹೇಳಿದಳು.

    ಯುವತಿಗೆ ಇದಾಗಲೇ 19 ವರ್ಷ ವಯಸ್ಸಾಗಿರುವ ಕಾರಣ, ಹುಡುಗಿಯರು ತಮಗಿಷ್ಟವಾದವರನ್ನು ಮದುವೆಯಾಗಬಹುದು ಎಂದು ಕೋರ್ಟ್​ ಹೇಳಿ ಅರ್ಜಿ ವಜಾ ಮಾಡಿತು.

    ಸಮಾಜದಲ್ಲಿ ಏಕತೆ ಸಾಧಿಸುವುದು ಬಹುಮುಖ್ಯವಾದದ್ದು. ಇದೇ ಕಾರಣಕ್ಕೆ ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಬೇಕು. ದೇಶದಲ್ಲಿ ಸುಮಾರು ಮೂರು ಸಾವಿರ ಜಾತಿ ಮತ್ತು ಧರ್ಮವಿದೆ. ಪ್ರತಿ 25 ಕಿಲೋಮೀಟರ್​ಗೆ ವಿವಿಧ ಧರ್ಮದ ಜನರು ವಾಸವಾಗಿದ್ದಾರೆ. ಈ ದೇಶದಲ್ಲಿ 130 ಕೋಟಿ ಜನರು ಒಟ್ಟಿಗೆ ವಾಸವಾಗಿದ್ದಾರೆ. ಆದ್ದರಿಂದ ಯುವತಿಯರು ತಮ್ಮಿಚ್ಛೆಯಂತೆ ಮದುವೆಯಾಗಬಹುದು ಎಂದರು.

    ಸ್ಥಿತಿವಂತರಾದರೂ ಬಿಪಿಎಲ್​ ಕಾರ್ಡ್​ ಪಡೆದಿರುವಿರಾ? ಕ್ರಿಮಿನಲ್​ ಕೇಸ್​ ಎದುರಿಸಲು ಸಿದ್ಧರಾಗಿ

    ಗಂಡ ಕೋರ್ಟ್​ಗೆ ಬರದ ಕಾರಣ ಡಿವೋರ್ಸ್​ ಕೇಸ್ ವಜಾ ಆದ್ರೆ ಅಲ್ಲಿಯೇ ಮತ್ತೊಮ್ಮೆ ಅರ್ಜಿ ಹಾಕಬಹುದಾ?

    ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ

    VIDEO: ಹಿಮ ಸ್ಫೋಟ- 32 ಮೃತದೇಹ ಪತ್ತೆ; 200ಕ್ಕೂ ಅಧಿಕ ಮಂದಿ ನಾಪತ್ತೆ; ಹಗಲಿರುಳು ರಕ್ಷಣಾ ಕಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts