More

    ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ

    ನವದೆಹಲಿ: 65 ವರ್ಷದ ವೃದ್ಧೆ ಹಸೀನಾ ಬೇಗಂ ಅವರ ಆಸೆ ಇದ್ದುದು ಒಂದೇ. ತಾಯ್ನಾಡಾಗಿರುವ ಭಾರತದಲ್ಲಿಯೇ ನನ್ನ ಪ್ರಾಣ ಹೋಗಬೇಕು ಎನ್ನುವುದು. ತಮ್ಮ ಬದುಕಿನ ಈ ಆಸೆ ಈಡೇರುವುದೋ ಇಲ್ಲವೋ ಎಂದು ದಿನನಿತ್ಯವೂ ಸಂಕಟ ಪಡುತ್ತ ಅಲ್ಹಾನನ್ನು ಬೇಡಿಕೊಳ್ಳುತ್ತಿದ್ದ ಈ ಹಿರಿಯ ಜೀವದ ಆಸೆ ಕೊನೆಗೂ ಈಡೇರಿದೆ. ಭಾರತದ ನೆಲದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಔರಂಗಾಬಾದ್​ನ ನಿವಾಸಿಯೊಬ್ಬರ ನೋವಿನ ಕಥೆಯಿದು. ಇವರ ಪತಿಯ ಸಂಬಂಧಿಕರು ಕೆಲವು ಪಾಕಿಸ್ತಾನದಲ್ಲಿ ಇದ್ದಾರೆ. ಅವರನ್ನು ಭೇಟಿಯಾಗಲು ಹಸೀನಾ ಹೋಗಿಬಿಟ್ಟರು. ಆದರೆ ಅಲ್ಲಿ ಅವರ ಪಾಸ್​ಪೋರ್ಟ್​ ಕಳೆದುಹೋಯಿತು. ಎಷ್ಟು ಹುಡುಕಾಡಿದರೂ ಸಿಗಲೇ ಇಲ್ಲ. ಪಾಕಿಸ್ತಾನದ ಕಂಡಕಂಡ ಅಧಿಕಾರಿಗಳಲ್ಲಿ ಬೇಡಿಕೊಂಡರೂ ಅವರ ನೆರವಿಗೆ ಯಾರೂ ಬರಲಿಲ್ಲ.

    ಆಗಲೇ ಅವರ ಗ್ರಹಚಾರ ಕೆಟ್ಟಿತ್ತು. ಅವರದಲ್ಲದ ತಪ್ಪಿಗೆ ಪಾಕಿಸ್ತಾನದ ಕೋರ್ಟ್​ ಅವರನ್ನು ಜೈಲಿಗೆ ಕಳುಹಿಸಿತು. ಬರೋಬ್ಬರಿ 18 ವರ್ಷ ಅಲ್ಲಿ ಅಕ್ರಮ ಬಂಧನದಲ್ಲಿದ್ದು, ನರಕ ಅನುಭವಿಸಿದರು.

    ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ

    ಭಾರತದ ಹೆಣ್ಣುಮಗಳೊಬ್ಬಳು ಈ ರೀತಿ ಅಕ್ರಮವಾಗಿ ಬಂಧನದಲ್ಲಿ ಇರುವ ಬಗ್ಗೆ ಭಾರತ ಸರ್ಕಾರಕ್ಕೆ ಸುಳಿವು ಸಿಕ್ಕಿದ್ದೇ ತಡ. ಪಾಕಿಸ್ತಾನವನ್ನು ಸಂಪರ್ಕಿಸಿ ಮಹಿಳೆಯ ಬಿಡುಗಡೆಗೆ ಎಲ್ಲ ಸಿದ್ಧತೆ ಮಾಡಿಕೊಂಡರು. ಸರ್ಕಾರದ ನೆರವಿನಿಂದಾಗಿ 18 ವರ್ಷಗಳ ನಂತರ ಹಸೀನಾ ಬೇಗಂ ಅವರಿಗೆ ಪಾಕಿಸ್ತಾನದ ನರಕದಿಂದ ಬಿಡುಗಡೆಯಾಯಿತು.

    ತಮ್ಮ ತಾಯ್ನಾಡನ್ನು ಸೇರುವೆನೋ ಇಲ್ಲವೋ… ಜೀವನದಲ್ಲಿ ಭಾರತದ ಭೂಮಿಯನ್ನು ಸ್ಪರ್ಶಿಸುವೆನೋ ಇಲ್ಲವೋ, ತಮ್ಮ ಕುಟುಂಬಸ್ಥರನ್ನು ಕಾಣುವೆನೋ ಇಲ್ಲವೋ ಎಂದುಕೊಂಡಿದ್ದ ಹಸೀನಾರ ಆಸೆ ಕೊನೆಗೂ ಈಡೇರಿತ್ತು. ಭಾರತಕ್ಕೆ ಬರುತ್ತಲೇ ಇಲ್ಲಿನ ಭೂಮಿಯನ್ನು ಸ್ಪರ್ಶಿಸಿ ಧನ್ಯತೆ ಸಲ್ಲಿಸಿದ್ದರು ಹಸೀನಾ. ನಂತರ ಔರಂಗಾಬಾದ್​ ಪೊಲೀಸರನ್ನು ಭೇಟಿ ಮಾಡಿ ಪಾಕಿಸ್ತಾನದ ಜೈಲಿನಲ್ಲಿ ತಾವು ಅನುಭವಿಸಿದ ನರಕಯಾತೆಯನ್ನು ಬಿಚ್ಚಿಟ್ಟರು.

    ಭಾರತದಲ್ಲಿಯೇ ತಮ್ಮ ಪ್ರಾಣ ಹೋಗಬೇಕು ಎಂದು ದಿನವೂ ಅಲ್ಹಾನನ್ನು ಕೋರಿಕೊಳ್ಳುತ್ತಿದ್ದೆ. ಈಗ ನಿಶ್ಚಿಂತೆಯಾಗಿದ್ದೇನೆ. ನನ್ನ ಪ್ರಾಣ ಇಲ್ಲಿಯೇ ಹೋಗಬೇಕಿದೆ… ಈಗಾಗಲೇ ನರಕ ಅನುಭವಿಸಿ ದೇಹ- ಮನಸ್ಸು ಎಲ್ಲವೂ ಜರ್ಜರಿತವಾಗಿಹೋಗಿದೆ ಎಂದೆಲ್ಲಾ ಹೇಳಿದರು ಹಸೀನಾ.

    ಅಷ್ಟೇ… ಅವರ ಈ ಕೊನೆಯ ಆಸೆ ಈಡೇರಿಯೇ ಬಿಟ್ಟಿದೆ. ನಿನ್ನೆ ಹಸೀನಾ ಭಾರತದ ಭೂಮಿಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ತಮ್ಮವರನ್ನೆಲ್ಲಾ ಒಮ್ಮೆ ಕಂಡು ಸಂತಸದಿಂದ ಇದ್ದ ಹಸೀನಾ ಅವರಿಗೆ ಹೃದಯಾಘಾತವಾಗಿದ್ದು ಪ್ರಾಣ ಬಿಟ್ಟಿದ್ದಾರೆ. ಭಾರತಕ್ಕೆ ಬಂದಿದ್ದೇನೆ. ಇನ್ನು ಇಲ್ಲಿಯೇ ಸಾಯಬೇಕು ಎಂಬುದಾಗಿ ಪದೇ ಪದೇ ಹಸೀನಾ ಹೇಳುತ್ತಿರುವ ಬಗ್ಗೆ ಅವರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

    ‘ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು- ಸ್ನೇಹಪರತೆ ಮೋದಿಯಿಂದ ಕಲಿಯಬೇಕು’

    ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

    ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts