VIDEO: ಹಿಮ ಸ್ಫೋಟ- 32 ಮೃತದೇಹ ಪತ್ತೆ; 200ಕ್ಕೂ ಅಧಿಕ ಮಂದಿ ನಾಪತ್ತೆ; ಹಗಲಿರುಳು ರಕ್ಷಣಾ ಕಾರ್ಯ

ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮ ಸ್ಫೋಟದಲ್ಲಿ ಇಲ್ಲಿಯವರೆಗೆ 32 ಮೃತದೇಹಗಳು ಪತ್ತೆಯಾಗಿವೆ. 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ರಕ್ಷಣಾ ಸಿಬ್ಬಂದಿ ಹಗಲಿರುಳು ದುಡಿಯುತ್ತಿದ್ದಾರೆ. ತಪೋವನ್ ಸುರಂಗದಲ್ಲಿ ಅಧಿಕ ಮಂದಿ ಸಿಲುಕಿದ್ದಾರೆ. ರೈನಿ ಗ್ರಾಮದಲ್ಲಿ ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿದ್ದ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ತಪೋವನ ವಿದ್ಯುತ್ ಯೋಜನೆಯ ಸ್ಥಳದಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಟನೆಲ್​ನೊಳಗೆ ಸಿಲುಕಿಕೊಂಡಿದ್ದು, ಇವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕೆಲವರನ್ನು ಏರ್​ಲಿಫ್ಟ್​ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. … Continue reading VIDEO: ಹಿಮ ಸ್ಫೋಟ- 32 ಮೃತದೇಹ ಪತ್ತೆ; 200ಕ್ಕೂ ಅಧಿಕ ಮಂದಿ ನಾಪತ್ತೆ; ಹಗಲಿರುಳು ರಕ್ಷಣಾ ಕಾರ್ಯ