More

    ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ- ಹೈಕೋರ್ಟ್​ನಿಂದ ಕಂಗನಾಗೆ ಸಿಕ್ಕಿತು ರಿಲೀಫ್​

    ಮುಂಬೈ: ಮುಂಬೈನಲ್ಲಿ ನಟಿ ಕಂಗನಾ ರಣಾವತ್​ ಅವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಆರೋಪಿಸಿ ಅವರ ವಿರುದ್ಧ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದ ಬೃಹನ್‌ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಭಾರಿ ಮುಖಭಂಗವಾಗಿದೆ. ಈ ಪ್ರಕರಣದಲ್ಲಿ ಕಂಗನಾ ಪರವಾಗಿ ಕೋರ್ಟ್​ ತೀರ್ಪು ನೀಡಿದೆ.

    ಸುಶಾಂತ್‌ ಸಿಂಗ್‌ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ಪ್ರಕರಣ ಚರ್ಚೆ ಆಗುತ್ತಿದ್ದಾಗಲೇ ಮುಂಬೈಯಲ್ಲಿದ್ದ ಕಂಗನಾ ಬಂಗಲೆಯನ್ನು ಕೆಡವಲು ಬಿಎಂಸಿ ಆದೇಶ ನೀಡಿತ್ತು. ಬಾಂದ್ರಾದಲ್ಲಿರುವ ಕಂಗನಾ ಅವರಿಗೆ ಸೇರಿದ ಪಲಿಹಿಲ್ ಬಂಗಲೆ ಅಕ್ರಮವಾಗಿದೆ ಎಂದು ಆರೋಪಿಸಿ ಬಿಎಂಸಿ ಕಟ್ಟಡದ ಒಂದು ಭಾಗವನ್ನು ತೆರವುಗೊಳಿಸಿತ್ತು. 24 ಗಂಟೆಯ ಒಳಗಡೆ ನೋಟಿಸ್​ ನೀಡಿ ಈ ಕ್ರಮ ತೆಗೆದುಕೊಂಡಿತ್ತು.

    ಇದರ ವಿರುದ್ಧ ಕಂಗನಾ ಹೈಕೋರ್ಟ್​ ಮೊರೆ ಹೋಗಿದ್ದರು. ಇದರ ಹಿಂದೆ ದುರುದ್ದೇಶವಿದೆ ಎಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಎರಡು ಕೋಟಿ ರೂಪಾಯಿ ಪರಿಹಾರಕ್ಕೆ ಅವರು ಕೋರಿದ್ದರು.
    ನ್ಯಾ.ಎಸ್.ಜೆ.ಕಾತಾವಾಲ ನೇತೃತ್ವದ ಪೀಠ, ವ್ಯಕ್ತಿಯ ವಿರುದ್ಧ ಅಧಿಕಾರಿಗಳು ತೋಳ್ಬಲವನ್ನು ಪ್ರದರ್ಶಿಸುವುದನ್ನು ಒಪ್ಪಲಾಗದು. ಇದು ಕಾನೂನಿನ ದುರುಪಯೋಗ ಅಲ್ಲದೇ ಬೇರೇ ಏನೂ ಅಲ್ಲ ಎಂದು ಅಭಿಪ್ರಾಯಪಟ್ಟು ಕಂಗನಾ ಅವರು ಪರಿಹಾರಕ್ಕೆ ಅರ್ಹರು ಎಂದು ಹೇಳಿದೆ.

    ಆದರೆ ಪರಿಹಾರದ ಕುರಿತು ಸದ್ಯಕ್ಕೆ ಕೋರ್ಟ್​ ಯಾವುದೇ ಮಾಹಿತಿ ನೀಡಲಿಲ್ಲ. ಪರಿಹಾರ ಕುರಿತಂತೆ ಕೋರ್ಟ್‌ ಓರ್ವ ಮೌಲ್ಯಮಾಪಕರನ್ನು ನೇಮಿಸುತ್ತದೆ ಎಂದಿರುವ ಕೋರ್ಟ್​, ಕಟ್ಟಡಕ್ಕೆ ಆಗಿರುವ ಹಾನಿಯನ್ನು ಅಂದಾಜಿಸಿ 2021ರ ಮಾರ್ಚ್‌ ಒಳಗಡೆ ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದಿದೆ.

    ಇದನ್ನೂ ಓದಿ: ಕಂಗನಾ v/s ಡಿ. ರೂಪಾ- ಹೊತ್ತಿ ಉರಿತಿದೆ ಪಟಾಕಿಯ ಕಿಡಿ: ಮೀಸಲಾತಿ ಅಡ್ಡ ಪರಿಣಾಮ ಅಂದ್ರು ನಟಿ!

    ಕೋರ್ಟ್​ ಆದೇಶದ ನಂತರ ಟ್ವೀಟ್​ ಮಾಡಿರುವ ಕಂಗನಾ,’ ಸತ್ಯಕ್ಕೆ ಜಯವಾಗಿದೆ. ಈ ಹೋರಾಟದಲ್ಲಿ ನನಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ತೀರ್ಪು ಬರಲು ಕಾರಣರಾದ ʼವಿಲನ್‌ʼಗಳಿಗೂ ಧನ್ಯವಾದ’ ಎಂದು ಹೇಳಿದ್ದಾರೆ.

    ದೀದಿಗೆ ಶಾಕ್​ ಮೇಲೆ ಶಾಕ್​: ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ರಾಜೀನಾಮೆ

    ಮುಂಬೈ ಬ್ಲಾಸ್ಟ್​ ಸಂಚುಕೋರ ಹಫೀಜ್​ ಜೈಲಲ್ಲೇ ಇಲ್ಲ! ಬಯಲಾಯ್ತು ಪಾಕ್​ ಬಣ್ಣ…

    ಅರ್ನಬ್​ ಗೋಸ್ವಾಮಿ ಬಂಧನ: ಸರ್ಕಾರಕ್ಕೆ ಸುಪ್ರೀಂ ತರಾಟೆ- ಹೈಕೋರ್ಟ್​ಗೂ ‘ಬುದ್ಧಿಮಾತು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts