More

    ಕಳ್ಳರಾಗಿದ್ರೆ ಕಾಂಗ್ರೆಸ್ ಇಷ್ಟವಾಗತ್ತೆ, ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕ್ತಾರೆ- ವಿವಾದದಲ್ಲಿ ನಾಲ್ಕನೇ ಸೂತ್ರ!

    ಮುಂಬೈ: ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ವಿವಾದದಲ್ಲಿ ಸಿಲುಕುತ್ತಿರುವ ನಟಿ ಕಂಗನಾ ಕೆಲ ದಿನಗಳಿಂದ ಸುಮ್ಮನಿದ್ದರು. ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ಟ್ವೀಟ್‌ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

    ‘ಜೀವನದ ನಾಲ್ಕು ಸೂತ್ರಗಳನ್ನು ನೆನಪಿಡಿ’ ಎಂದು ಟ್ವೀಟ್‌ ಮಾಡಿರುವ ಅವರು, ಈ ಸೂತ್ರದಲ್ಲಿ ನಾಲ್ಕನೆಯ ಸೂತ್ರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಯಾರು ಮತ ಹಾಕುತ್ತಾರೆ ಎಂಬುದನ್ನು ಹೇಳಿದ್ದಾರೆ. ‘ನೀವು ಒಂದು ವೇಳೆ ಕಳ್ಳನಾಗಿದ್ದರೆ ನೀವು ಕಾಂಗ್ರೆಸ್ ಅನ್ನು ಇಷ್ಟಪಡುತ್ತೀರಿ. ಒಂದು ವೇಳೆ ನಿಜವಾದ ರಾಷ್ಟ್ರೀಯವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುತ್ತೀರಿ’ ಎಂದು ಅವರು ಬರೆದುಕೊಂಡಿದ್ದಾರೆ.

    ಅದೇ ರೀತಿ ಇನ್ನು ಮೂರು ಸೂತ್ರಗಳು ಎಂದರೆ, ಒಂದನೆಯದ್ದು: ‘ಮೋಸಗಾರರು ಮತ್ತೋರ್ವ ಮೋಸಗಾರರಿಗೆ ಸಹಾಯ ಮಾಡುತ್ತಾರೆ- ಎರಡನೆಯದ್ದು: ‘ಯಾರಿಗೆ ತಮ್ಮ ಕುರಿತು ನಂಬಿಕೆ ಇಲ್ಲವೋ ಅವರಿಗೆ ದೇವರು ಅಥವಾ ಮತ್ಯಾವುದರ ಕುರಿತೂ ನಂಬಿಕೆ ಇರುವುದಿಲ್ಲ ಹಾಗೂ ಮೂರನೆಯದ್ದು: ‘ಎಲ್ಲರಿಗೂ ಅವರೊಳಗಿನ ಮನಸ್ಥಿತಿಗೆ ತಕ್ಕಂತೆ ಗುರು ಸಿಗುತ್ತಾನೆ. ಒಳ್ಳೆಯವರಾಗಿದ್ದರೆ ಒಳ್ಳೆಯ ಗುರು ಹಾಗೂ ಕೆಟ್ಟವರಾಗಿದ್ದರೆ ವಂಚನೆಗಾರರು, ಮೋಸಗಾರ ಗುರು ಸಿಗುತ್ತಾರೆ ಎಂದು ಕಂಗನಾ ಹೇಳಿ ನಾಲ್ಕನೆಯ ಸೂತ್ರದಲ್ಲಿ ಕಾಂಗ್ರೆಸ್‌, ಬಿಜೆಪಿಯದ್ದು ಉಲ್ಲೇಖಿಸಿದ್ದಾರೆ.

    ಪತ್ರಕರ್ತೆ ರಾಣಾ ಅಯ್ಯುಬ್ ಅವರನ್ನು ಈ ಸಂದರ್ಭದಲ್ಲಿ ಕಂಗನಾ ಉಲ್ಲೇಖಿಸಿದ್ದಾರೆ. ರಾಣಾ ಅಯ್ಯುಬ್ ಸಾರ್ವಜನಿಕ ದೇಣಿಗೆ ಮೂಲಕ ಸಂಗ್ರಹಿಸಿದ ಹಣವನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದೆ. ಆದರೆ ಇದನ್ನು ರಾಣಾ ನಿರಾಕರಿಸಿದ್ದಾರೆ.

    VIDEO: ಅದೃಷ್ಟ ಖುಲಾಯಿಸಿದ ಫೋಟೋ: ಮೊನ್ನೆಯವರೆಗೂ ಕೂಲಿ ಕಾರ್ಮಿಕ- ಇಂದು ಫೇಮಸ್‌ ಮಾಡೆಲ್‌!

    7 ರಾಜ್ಯಗಳ 14 ಮಂದಿಯನ್ನು ಮದ್ವೆಯಾದ ಭೂಪ: ಬಲೆಗೆ ಬಿದ್ದವರೆಲ್ಲಾ ವೈದ್ಯರು, ವಕೀಲರು, ಉನ್ನತ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts