More

    ದೀದಿಗೆ ಶಾಕ್​ ಮೇಲೆ ಶಾಕ್​: ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ರಾಜೀನಾಮೆ

    ನವದೆಹಲಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಟೈಂ ಸದ್ಯಕ್ಕೆ ಸರಿಯಿದ್ದಂತಿಲ್ಲ. ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಮಧ್ಯೆಯೇ ರಾಜಕೀಯವಾಗಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ.

    ಕಳೆದ ನವೆಂಬರ್​ನಲ್ಲಿ ಐವರು ಸಚಿವರು ಸಂಪುಟ ಸಭೆಗೆ ಗೈರುಹಾಜರಾಗುವ ಮೂಲಕ ನೀಡಿ ಮಮತಾ ಬ್ಯಾನರ್ಜಿ ಶಾಕ್​ ಕೊಟ್ಟಿದ್ದರು. ಅವರೆಲ್ಲರೂ ಟಿಎಂಸಿ ಪಕ್ಷ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿಯಾಗಿದ್ದ ಹಿನ್ನೆಲೆಯಲ್ಲಿ, ಮಮತಾ ಅವರನ್ನು ಪೇಚಿಗೆ ಸಿಲುಕಿಸಿತ್ತು.

    ಅದಿನ್ನೂ ಸುಧಾರಿಸಿಕೊಳ್ಳುವ ಬೆನ್ನಲ್ಲೇ ಉಪಚುನಾವಣೆಯಲ್ಲಿಯೂ ಭರ್ಜರಿ ಜಯಭೇರಿ ಗಳಿಸಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನೂ ಕೇಸರಿಮಯವಾಗಿಸುವ ಪಣ ತೊಟ್ಟಿರುವ ವಿಷಯ ಬಹಿರಂಗವಾಯಿತು. ಸಾಲದು ಎಂಬುದಕ್ಕೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆದ್ದ ನಂತರ, ಎಐಎಂಐಎಂ ಕಣ್ಣು ಕೂಡ ಈ ರಾಜ್ಯದ ಮೇಲೆ ಬಿದ್ದದ್ದು ಮಮತಾ ಬ್ಯಾನರ್ಜಿ ಅವರನ್ನು ಇನ್ನಷ್ಟು ಕಂಗೆಡಿಸಿದೆ.

    ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮುಸ್ಲಿಂ ಮತದಾರರ ಮಟ್ಟಿಗೆ ಹೇಳುವುದಾದರೆ ಕಾಶ್ಮೀರದ ನಂತರ ಅತಿ ಹೆಚ್ಚು ಮಂದಿ ಇರುವುದು ಪಶ್ಚಿಮ ಬಂಗಾಳದಲ್ಲಿ. ಇಲ್ಲಿ ಶೇಕಡಾ 30ರಷ್ಟು ಮುಸ್ಲಿಂ ಮತದಾರರಿದ್ದಾರೆ. ಇವರ ಮತಗಳು 2011ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ನೆರವಾಗಿದ್ದವು.

    ಇದನ್ನೂ ಓದಿ: ಒವೈಸಿ ಎಂಟ್ರಿ: ಮುಸ್ಲಿಂ ಮತದಾರರನ್ನು ಕಳೆದುಕೊಳ್ಳೋ ಟೆನ್ಷನ್​ನಲ್ಲಿ ದೀದಿ!

    ಎಡರಂಗ ಸೋತ ನಂತರ ರಾಜ್ಯದ ಅಲ್ಪಸಂಖ್ಯಾತ ಮತಗಳು ಮಮತಾ ಬ್ಯಾನರ್ಜಿಯವರ ಟಿಎಂಸಿ ಪಾಲಾಗಿದ್ದವು.
    ಆದರೆ ಇದೀಗ ಮುಸ್ಲಿಂ ಪಕ್ಷವೇ ಚುನಾವಣಾ ಕಣಕ್ಕೆ ಇಳಿದರೆ ತಮ್ಮ ಕಥೆ ಏನು ಎಂಬ ಚಿಂತೆ ಮಮತಾ ಅವರಿಗೆ ಶುರುವಾಗಿದೆ.
    ಇದನ್ನೂ ಅರಗಿಸಿಕೊಳ್ಳುವ ಹೊತ್ತಿಗೇ ತೃಣಮೂಲ ಪಕ್ಷದ ಜತೆ ಮುನಿಸಿಕೊಂಡಿದ್ದ ಟಿಎಂಸಿ ಹಿರಿಯ ನಾಯಕ ಸುವೇಂದು ಅಧಿಕಾರಿ ತಮ್ಮ ಸಾರಿಗೆ ಖಾತೆ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿ ಮತ್ತೊಂದು ಶಾಕ್​ ನೀಡಿದ್ದಾರೆ.

    ಅಧಿಕಾರಿ ಅವರು ರಾಜೀನಾಮೆ ಪತ್ರವನ್ನು ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗ್​ದೀಪ್​ ಧನ್​ಖಾರ್ ಅವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿದ್ದಾರೆ.

    ನಾನು ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೂಡಲೇ ನನ್ನ ರಾಜೀನಾಮೆಯನ್ನು ಸ್ವೀಕರಿಸಲು ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿರುವುದಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಾನು ಪ್ರಾಮಾಣಿಕವಾಗಿ, ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿರುವುದಾಗಿ ಪತ್ರದಲ್ಲಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ರಾಜೀನಾಮೆ ಪತ್ರವನ್ನು ಪಶ್ಚಿಮಬಂಗಾಳದ ರಾಜ್ಯಪಾಲರಿಗೆ ಇ ಮೇಲ್ ಮೂಲಕ ರವಾನಿಸಿರುವುದಾಗಿ ಸುವೇಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಪಶ್ಚಿಮಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಸುವೇಂದು ಅಧಿಕಾರಿ ಅವರು ಶೀಘ್ರದಲ್ಲಿಯೇ ಬಿಜೆಪಿ ಪಕ್ಷ ಸೇರಲಿದ್ದಾರೆ. ಅವರ ಜತೆ ಟಿಎಂಸಿಯ ಹಿರಿಯ ನಾಯಕರು ಕೂಡಾ ಟಿಎಂಸಿ ತೊರೆಯಲಿದ್ದಾರೆ ಎಂದು ತಿಳಿಸಿದ್ದು ಇಲ್ಲಿ ಉಲ್ಲೇಖಾರ್ಹ.

    ಮುಂಬೈ ಬ್ಲಾಸ್ಟ್​ ಸಂಚುಕೋರ ಹಫೀಜ್​ ಜೈಲಲ್ಲೇ ಇಲ್ಲ! ಬಯಲಾಯ್ತು ಪಾಕ್​ ಬಣ್ಣ…

    ಅರ್ನಬ್​ ಗೋಸ್ವಾಮಿ ಬಂಧನ: ಸರ್ಕಾರಕ್ಕೆ ಸುಪ್ರೀಂ ತರಾಟೆ- ಹೈಕೋರ್ಟ್​ಗೂ ‘ಬುದ್ಧಿಮಾತು’

    ಕೋಮುವಾದಿ ಪಕ್ಷದಲ್ಲಿ ಇರಲಾರೆವು: ಮೆಹಬೂಬಾ ಮುಫ್ತಿಗೆ ಮತ್ತೊಮ್ಮೆ ಆಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts