More

    ಅಂದು ಗೋಕುಲ್​, ಇಂದು ಹರ್ಷ: ಹತ್ಯೆಗೆ ಜೈಲಿನಿಂದಲೇ ಸ್ಕೆಚ್​ ಹಾಕಿದ್ರಾ? ಇವನದ್ದಾ ಮಾಸ್ಟರ್​ಮೈಂಡ್​?

    ಶಿವಮೊಗ್ಗ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದ್ದು, ಹತ್ಯೆಗೆ ಶಿವಮೊಗ್ಗ ಜೈಲಿನಿಂದ ಸಿದ್ಧವಾಯ್ತಾ ಮಾಸ್ಟರ್ ಪ್ಲ್ಯಾನ್ ಎಂಬ ಸಂದೇಹ ವ್ಯಕ್ತವಾಗಿದೆ.

    ದಶಕದ ಹಿಂದೆ ಹಿಂದೂ ಕಾರ್ಯಕರ್ತ ಗೋಕುಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಲ್ಲಿರುವ ರೌಡಿ ಸಾತು ನೇತೃತ್ವದಲ್ಲಿ ಹರ್ಷ ಅವರನ್ನು ಮುಗಿಸುವ ಕೃತ್ಯಕ್ಕೆ ಇಳಿದಿದ್ದರಾ ಹಂತಕರು ಎಂಬ ಬಗ್ಗೆ ಗುಮಾನಿಯಿದೆ. ಜೈಲಲ್ಲಿದ್ದುಕೊಂಡು, ಪ್ಲ್ಯಾನ್ ಮಾಡಿ ಸಹಕಾರ ನೀಡಿರೋ ಆರೋಪ‌ ಕೇಳಿಬಂದಿದೆ. ಹರ್ಷ ಅವರ ಹತ್ಯೆ ಮಾಡಲು ಖಾಸಿಫ್ ಅಂಡ್ ಗ್ಯಾಂಗ್​ಗೆ ಜೈಲಿನಿಂದಲೇ ಇವರು ಸಹಕಾರ ನೀಡಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಅಕ್ರಮ ಗಾಂಜಾ ಮಾರಾಟ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣ ಸಾತು ಮೇಲಿವೆ. ಗಾಂಜಾ ಅಡ್ಡೆಯಾಗ್ತಿರೊ ಏರಿಯಾಗಳಲ್ಲಿ ಸಾತು ಗ್ಯಾಂಗ್​ ಹವಾ ಬಲು ಜೋರಾಗಿದೆ. ಲಕ್ಷರ್ ಮೊಹಲ್ಲಾ, ಪೆನ್ಷನ್ ಮೊಹಲ್ಲಾ.. ಕಾರ್ಕ್ ಪೇಟೆ , ಆರ್ ಎಂ ಎಲ್ ನಗರ, ಬಾಪೂಜಿನಗರ, ಟಿಪ್ಪುನಗರದಂತ ಸೂಕ್ಷ್ಮ ಸ್ಥಳಗಳಲ್ಲಿ ಎಗ್ಗಿಲ್ಲದೆ ಗಾಂಜಾ ಮಾರಾಟ ನಡೆಸುತ್ತಿದ್ದಾರೆ. ಜತೆಗೆ ತುಂಗಾ ನಗರ, ನ್ಯೂ ಮಂಡಿ, ಭಾರತ್ ಕಾಲೋನಿ, ಅಜಾದ್ ನಗರ, ಹೊಸ ಬಸ್ ನಿಲ್ದಾಣ ಹಿಂಭಾಗವೂ ಸಹ ಗಾಂಜಾ ಹಾವಳಿ ಜಾಸ್ತಿಯಾಗಿದ್ದು, ಇವುಗಳ ಹಿಂದೆ ಇವರದ್ದೇ ಕೈವಾಡ ಇದೆ ಎನ್ನಲಾಗುತ್ತಿದೆ.

    ಗಾಂಜಾ ಕಿಕ್ ಏರಿಸಿಕೊಂಡು ಮಾರಕಾಸ್ತ್ರ ಹಿಡಿದು ಹರ್ಷ ಅವರ ಕೊಲೆ ಮಾಡಿರೊ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಇವರೇ ಹರ್ಷ ಕೊಲೆ ಆರೋಪಿಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಥ್ ನೀಡಿರುವ ಸಾಧ್ಯತೆಗಳಿಗೆ ಎನ್ನಲಾಗಿದೆ.

    ಹರ್ಷನ ಕೊಲೆ ಕೇಸ್​ಗೆ ಸ್ಫೋಟಕ ತಿರುವು: ಹತ್ಯೆಗೂ ಮುನ್ನ ಹರ್ಷನಿಗೆ ಕರೆ ಮಾಡಿದ್ದರಂತೆ ಇಬ್ಬರು ಹುಡುಗಿಯರು!

    ಶಿವಮೊಗ್ಗ ಗಲಭೆಯ ವಿಡಿಯೋ ಲಭ್ಯ: ಈ ಹಂತದಲ್ಲಿ ರಹಸ್ಯ ಬಿಚ್ಚಿಡಲಾಗದು ಎಂದ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts