More

    ಶಿವಮೊಗ್ಗ ಗಲಭೆಯ ವಿಡಿಯೋ ಲಭ್ಯ: ಈ ಹಂತದಲ್ಲಿ ರಹಸ್ಯ ಬಿಚ್ಚಿಡಲಾಗದು ಎಂದ ಸಚಿವ

    ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಗಲಭೆಯ ವಿಡಿಯೋ ಲಭ್ಯವಾಗಿವೆ. ಹಿಂದು‌ ಸಂಘಟನೆ ಕಾರ್ಯಕರ್ತ ಹರ್ಷ‌ ಹತ್ಯೆ ಪ್ರಕರಣ ತನಿಖೆ ಹಂತದಲ್ಲಿರುವಾಗ ಕೆಲವೊಂದು ರಹಸ್ಯ‌ ವಿಚಾರಗಳನ್ನು ಬಿಚ್ಚಿಡಲಾಗದು ಎಂದು ಯುವಜನ ಸಬಲೀಕರಣ, ಕ್ರೀಡಾ ಖಾತೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಂಗಳವಾರ ಬೆಳಗ್ಗೆ ಎರಡು‌ ಆಟೋ ರಿಕ್ಷಾಗಳನ್ನು ಸುಟ್ಟಿದ್ದು ಯಾರೆಂಬುದು ಗೊತ್ತಾಗಿದೆ. ಸಹಜ ಸ್ಥಿತಿಗೆ ಮರಳುವ ದೃಷ್ಟಿಯಿಂದ ಮಾಧ್ಯಮಗಳ ಸಹಕಾರವೂ ಅಗತ್ಯವಿದೆ ಎಂದು ಕೋರಿದರು.

    ತನಿಖೆ ತ್ವರಿತವಾಗಿ ನಡೆದಿದ್ದು, ಗೃಹ ಸಚಿವರಿಗೂ ಭೇಟಿ ಮಾಡಿ ಚರ್ಚಿಸಿರುವೆ. ಶಿವಮೊಗ್ಗದ ಪರಿಸ್ಥಿತಿ ಬಗ್ಗೆ ಪ್ರತಿ ಗಂಟೆಗೊಮ್ಮೆ ಮಾಹಿತಿ ಪಡೆಯುತ್ತಿರುವೆ. ಜಿಲ್ಲಾಮಟ್ಟದ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿರುವೆ ಎಂದರು.

    ಶಿವಮೊಗ್ಗದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೊಲೆಯಾದ ಯುವಕನ ಶವದ ಮೆರವಣಿಗೆಯಲ್ಲಿ ಸಚಿವ ಈಶ್ವರಪ್ಪ ಭಾಗವಹಿಸಿದ್ದರ ಬಗ್ಗೆ ಕೆ.ಸಿ.ನಾರಾಯಣ ಗೌಡ‌ ಪ್ರತಿಕ್ರಿಯಿಸಿದ ಅವರು ಪಕ್ಷದ ಕಾರ್ಯಕರ್ತನ ದುಃಖದಲ್ಲಿ ಭಾಗಿಯಾಗಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕ್ರಮವಹಿಸುತ್ತಾರೆ. ಕ್ರಮವಹಿಸಿಲ್ಲವೇಕೆ ? ಎಂದು ಕೇಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ರೀತಿ‌ ಕಾರ್ಯಕರ್ತರ ಕಷ್ಟ-ನಷ್ಟದಲ್ಲಿ ಭಾಗಿಯಾಗಿಲ್ಲವೆ ? ನಿಯಮಗಳನ್ನು ಉಲ್ಲಂಘಿಸಿಲ್ಲವೆ ? ಅವರು ಹೇಳುವುದೊಂದು ಮಾಡುವುದು ಇನ್ನೊಂದು ಎಂದು‌ ನಾರಾಯಣ ಗೌಡ ಟೀಕಿಸಿದರು.

    ಹರ್ಷನ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ಪ್ರತಿಭಟನೆ

    ಡಿಜಿಪಿಗೆ ಪತ್ರ ಬರೆದ ಗೃಹ ಸಚಿವ: ಸಮಾಜಘಾತುಕ ಶಕ್ತಿ ಬೆಳವಣಿಗೆಯಲ್ಲಿ ಪೊಲೀಸರ ಪಾತ್ರದ ತನಿಖೆಗೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts