More

    ಸಿಲಿಂಡರ್ ಸ್ಫೋಟಗೊಂಡು ತಪ್ಪಿದ ಅನಾಹುತ

    ಹೊಳೆನರಸೀಪುರ: ತಾಲೂಕಿನ ಹರಿಹರಪುರ ಗ್ರಾಮದ ಗೋಬಿ ಮಂಚೂರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರಿ ಅನಾಹುತ ತಪ್ಪಿದೆ.

    ತಾಲೂಕಿನ ಹರಿಹರಪುರ ಗ್ರಾಮದ ಲಕ್ಕಪ್ಪಗೌಡ ಅವರು ತಾತ್ಕಾಲಿಕವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಯಲ್ಲಿ ಪ್ರಜ್ವಲ್ ಎಂಬ ಯುವಕ ಗೋಬಿ ಮಂಚೂರಿ ವ್ಯಾಪಾರ ಮಾಡುತ್ತಿದ್ದ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿನಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಸಿತು.

    ಮಧ್ಯಾಹ್ನದ ಸುಡು ಬಿಸಿಲಿನ ಕಾರಣದಿಂದ ರಸ್ತೆಯಲ್ಲಿ ಜನಸಂಚಾರ ವಿರಳವಿದ್ದರಿಂದ ಅನಾಹುತ ತಪ್ಪಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ. ಪಟ್ಟಣದ ಅಗ್ನಿಶಾಮಕ ಠಾಣೆಯ ಅಧಿಕಾರಿ ಸೋಮಶೇಖರ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

    ಹೊಳೆನರಸೀಪುರ ತಾಲೂಕಿನ ಹರಿಹರಪುರ ಗ್ರಾಮದ ಗೋಬಿ ಮಂಚೂರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts