More

    ಸಾವಯವ ಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ

    ಕೋಲಾರ: ಸಾವಯವ ಗೊಬ್ಬರ ಬಳಸಿ ರಾಗಿ ಬೆಳೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು. ರಾಗಿ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯವೃದ್ಧಿಯಾಗುತ್ತದೆ ಎಂದು ರೈತ ಮುಳಗಾಳಪ್ಪ ಹೇಳಿದರು.

    ತಾಲೂಕಿನ ಚೌಡದೇನಹಳ್ಳಿಯಲ್ಲಿ ಶುಕ್ರವಾರ ಯಂಗ್​ ಇಂಡಿಯಾ ಡೆವಲಪ್​ಮೆಂಟ್​ ಸೊಸೈಟಿ, ಈ ನೆಲ ಈ ಜಲ ಕಲೆ ಮತ್ತು ಸಾಂಸತಿಕ ಸಂಸ್ಥೆಯಿಂದ ಪ್ರಗತಿಪರ ರೈತ ರಾಗಿ ಲಕ್ಷ್ಮಣಯ್ಯ ಸ್ಮರಣಾರ್ಥ ಹಮ್ಮಿಕೊಂಡಿದ್ದ ಯುವಜನರೊಂದಿಗೆ ರಾಗಿ ತಳಿಗಳ ಬಗ್ಗೆ ಮಾತುಕತೆ ಮತ್ತು ಪ್ರಯೋಗಿಕ ಕಲಿಕೆ ತರಬೇತಿಯಲ್ಲಿ ಮಾತನಾಡಿದರು. ಕಡ್ಡಿ ರಾಗಿ ಒಂದು ಎಕರೆಗೆ 10 ಮೂಟೆ ರಾಗಿ ಆಗುತ್ತಿತ್ತು, ಇಂಡಾಫ್​ ಬಂದ ಮೇಲೆ 20-30 ಮೂಟೆ ರಾಗಿ ಬೆಳೆದಿದ್ದೇವೆ. ಈಗ ರಾಸಾನಿಕ ವಸ್ತುಗಳನ್ನು ಬಳಸುತ್ತಿರುವುದರಿಂದ ರಾಗಿ ಬೆಳೆಯು ವಿಲವಾಗುತ್ತದೆ. ಆದಷ್ಟು ರೈತರು ಸಾವಯವ ಗೊಬ್ಬರ ಬಳಸಲು ಒತ್ತು ನೀಡಬೇಕು. ರಾಗಿಮುದ್ದೆ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

    ಯಂಗ್​ ಇಂಡಿಯಾ ಡೆವಲಪ್ಮೆಂಟ್​ ಸೊಸೈಟಿ ಅಧ್ಯಕ್ಷ ಹೂಹಳ್ಳಿ ನಾಗರಾಜ್​ ಮಾತಾನಾಡಿ, ಲಕ್ಷ್ಮಣಯ್ಯನವರು ಸುಮಾರು 23 ಅಧಿಕ ಇಳುವರಿಯ ತಳಿಗಳನ್ನು ಕಂಡುಹಿಡಿದ ವಿಜ್ಞಾನಿ. ರಾಗಿ ಲಕ್ಷ್ಮಣಯ್ಯ ಎನ್ನುವ ಹೆಸರಿನಿಂದ ಪ್ರಖ್ಯಾತರಾಗಿದ್ದಾರೆ. ಮಂಡ್ಯದ ವಿಸಿ ಫಾಮ್​ರ್ ಅವರ ಕಾರ್ಯಕ್ಷೇತ್ರ.1951 ರಿಂದ 1964ರವರೆಗೆ ನಮ್ಮ ರಾಜ್ಯದ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು. ಈ ತಳಿಗಳಿಂದ ಶೇ. 50ರಷ್ಟು ಅಧಿಕ ಇಳುವರಿ ಪಡೆಯಲು ಸಾಧ್ಯವಾಯಿತು ಎಂದರು.

    ತರಬೇತಿಯಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್​, ಈನೆಲ ಈ ಜಲ ಸಂಸ್ಥೆಯ ಅಧ್ಯಕ್ಷ ವೆಂಕಟಚಲಪತಿ, ಮಹಿಳಾ ಸಂರಕ್ಷಣಾ ಸಮಿತಿ ಅಧ್ಯೆ ಶಶಿಕಲಾ, ಲಕ್ಷ್ಮೀದೇವಿ, ಗಿರಿಜಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts