More

  ರೋಗ ನಿಯಂತ್ರಣ ಸಾವಯವ ಔಷಧ ಪೂರಕ

  ಸಾಗರ: ಅಡಕೆ ಬೆಳೆಗಾರರು ತಮ್ಮ ಕಾರ್ಯ ಕ್ಷೇತ್ರದ ಬಗ್ಗೆ ವ್ಯವಸ್ಥಿತವಾಗಿ ತಿಳಿದುಕೊಂಡಿರಬೇಕು. ರೋಗ ಬಾಧೆಗಳಿಂದ ಬೆಳೆಗಾರ ತೀವ್ರ ನಷ್ಟ ಅನುಭವಿಸುತ್ತಿದ್ದಾನೆ. ರೋಗಮುಕ್ತ ತೋಟ ನಿರ್ಮಾಣವಾದರೆ ಬೆಳೆಗಾರ ಆರ್ಥಿಕವಾಗಿ ಸದೃಢನಾಗಲು ಸಾಧ್ಯ ಎಂದು ಡಾ. ಹೆನಿಚ್ ಆಗ್ರೋ ಸೆಲ್ಯೂಷನ್ ಇಂಡಿಯಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಡಾ. ರಜನಿ ರಾಣಾ ತಿಳಿಸಿದರು.
  ತಾಲೂಕಿನ ವರದಾಮೂಲದಲ್ಲಿ ಮಂಗಳವಾರ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ, ಡಾ. ಹೆನಿಚ್ ಆಗ್ರೋ ಸೆಲ್ಯೂಷನ್, ಗ್ರಾಮಾಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ಅಡಕೆ ಬೆಳೆಗೆ ದ್ರಾವಣ ಸಿಂಪಡಣೆ ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಮಲೆನಾಡು ಭಾಗದ ಅಡಕೆ ಬೆಳೆಗಾರರಿಗೆ ಅನುಕೂಲವಾಗುವ ಅನೇಕ ಸಾವಯವ ಔಷಧಗಳಿವೆ. ಮಲೆನಾಡು ಭಾಗದಲ್ಲಿ ಅಡಕೆ ಬೆಳೆಗಾರರು ಸಾವಯವ ಔಷಧ ಬಳಸುವುದರಿಂದ ರೋಗ ನಿಯಂತ್ರಿಸಲು ಸಾಧ್ಯ. ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಔಷಧ ತಯಾರಿಸಲಾಗುತ್ತಿದೆ ಎಂದರು.

  ವಿ.ಮಂಜುನಾಥ್, ರಾಜೇಶ್ ಕೇಡಲಸರ, ಅಶೋಕ್ ಕಾಶಿ ಇತರರಿದ್ದರು. ಅಡಕೆ ತೋಟದಲ್ಲಿ ದ್ರಾವಣ ಸಿಂಪಡಣೆ ಪ್ರಾತ್ಯಕ್ಷಿಕೆಯಲ್ಲಿ ಡಾ. ನಾರಾಯಣಸ್ವಾಮಿ, ಡಾ. ನರೇಂದ್ರ ಎಂ.ಎಸ್., ವ.ಶಂ.ರಾಮಚಂದ್ರ ಭಟ್, ರಾಜಶೇಖರ್, ಲಕ್ಷ್ಮೀನಾರಾಯಣ, ಗಣಪತಿ, ವರದಾ ಭಟ್, ಬಸವರಾಜ್ ನಾರಾಯಣಸ್ವಾಮಿ ಇತರರು ಭಾಗವಹಿಸಿದ್ದರು.

  See also  ಯುವನಿಧಿ ನೋಂದಣಿಗೆ ಮಾರ್ಗದರ್ಶನ ನೀಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts