More

    ಆಯುರ್ವೇದದಲ್ಲಿದೆ ಕಾಯಿಲೆಗಳಿಗೆ ಪರಿಹಾರ

    ಆನವಟ್ಟಿ: ಆಯುರ್ವೇದದಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ಪೂರ್ವಜರು ನಾಡಿಮಿಡಿತ ಹಾಗೂ ನಾಲಿಗೆ ಮೇಲಿನ ತೇವಾಂಶದಿಂದ ಯಂತ್ರೋಪಕರಣದ ನೆರವಿಲ್ಲದೆ ಕಾಯಿಲೆಯ ಗುಣಾವಗುಣಗಳನ್ನು ಅರಿತು ಸೂಕ್ತ ಚಿಕಿತ್ಸೆ ನೀಡುತ್ತಿದ್ದರು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ತಿಳಿಸಿದರು.

    ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಕ್ಲೈರ್ ವೇದ ಆಯುರ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಪರಿಹಾರವಾಗದ ಸಮಸ್ಯೆಗಳೇ ಇಲ್ಲ. ಪ್ರತಿಯೊಂದು ಸಮಸ್ಯೆಗೂ ಹೇಗೆ ಕಾರಣವಿರುತ್ತೋ ಅದೇ ರೀತಿ ಪರಿಹಾರವೂ ಇರುತ್ತದೆ ಎಂದು ತಿಳಿಸಿದರು.
    ಈಗ ಪ್ರತಿಯೊಂದು ಅಂಗಕ್ಕೆ ಒಬ್ಬೊಬ್ಬ ವೈದ್ಯರಿದ್ದು, ಜನರು ಮತ್ತೆ ಆಯುರ್ವೇದದತ್ತ ಮುಖ ಮಾಡುತ್ತಿದ್ದಾರೆ. ಆಯುರ್ವೇದ ಪದ್ಧತಿಯಲ್ಲಿ ಕಡಿಮೆ ವೆಚ್ಚದಲ್ಲಿ ರೋಗಗಳು ಯಾವುದೇ ಅಡ್ಡಪರಿಣಾಮಗಳಾಗದೆ ಸಂಪೂರ್ಣವಾಗಿ ಗುಣಮುಖವಾಗಲಿವೆ. ಇಂತಹ ಆಯುರ್ವೇದ ಕ್ಲಿನಿಕ್ ಆನವಟ್ಟಿ ಗ್ರಾಮದಲ್ಲಿ ಆರಂಭಗೊಂಡಿದೆ ಎಂದರು.
    ಶಿರಸಿ ನಿಸರ್ಗ ಮನೆಯ ಡಾ. ವೆಂಕಟರಮಣ ಹೆಗ್ಗಡೆ ಮಾತನಾಡಿ, ದೈವದತ್ತವಾಗಿ ಹಾಗೂ ನೈಸರ್ಗಿಕವಾಗಿ ಸಿಗುವ ಸಸ್ಯ ಹಾಗೂ ಗಿಡಮೂಲಿಕೆಗಳಿಂದ ಆಯುರ್ವೇದ ಪದ್ಧತಿಯಿಂದ ಎಂತಹ ರೋಗಗಳನ್ನಾದರೂ ನಿವಾರಣೆ ಮಾಡಬಹುದು ಎಂದು ಪೂರ್ವಜರು ತಿಳಿಸಿಕೊಟ್ಟಿದ್ದಾರೆ. ಇಂತಹ ಆಯುರ್ವೇದ ಪದ್ಧತಿಯನ್ನು ಇಂದಿನ ಕಾಲಕ್ಕೆ ಸರಳೀಕರಣಗೊಳಿಸಿ ಚಿಕಿತ್ಸೆ ನೀಡಿ ಕಾಯಿಲೆಗಳನ್ನು ತಡೆಹಿಡಿಯುವ ಕಾರ್ಯದಲ್ಲಿ ಕ್ಲೈರ್ ವೇದ ಆಯುರ್ ಸಂಸ್ಥೆಯು ಸಫಲವಾಗಿದೆ ಎಂದು ತಿಳಿಸಿದರು.
    ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ನರಸಿಂಹ ಜೋಶಿ ಹಾಸ್ಯದ ಮೂಲಕ ಜನರನ್ನು ರಂಜಿಸಿದರು. ಕ್ಲೈರ್ ವೇದ ಸಂಸ್ಥೆ ಸಂಸ್ಥಾಪಕ ಡಾ. ಪ್ರವೀಣ್ ಜೇಕಬ್, ಡಾ. ಶ್ವೇತಾ, ನಿವೃತ್ತ ಪ್ರಾಚಾರ್ಯ ಎಚ್.ಜಯಪ್ಪ, ಉಪಪ್ರಾಚಾರ್ಯ ಮಹಾದೇವಪ್ಪ, ಜಯಶೀಲಗೌಡ, ರಫೀಕ್ ಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts