More

    26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಸ್ತಾಂತರಿಸಲು ಭಾರತ ಆಗ್ರಹ: ಪಾಕ್​ನಲ್ಲಿ ಈತ ಏನು ಮಾಡುತ್ತಿದ್ದಾನೆ?

    ನವದೆಹಲಿ: ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಸ್ಥಾಪಕ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಅಧಿಕೃತವಾಗಿ ವಿನಂತಿಸಿದೆ ಎಂದು ಮೂಲಗಳು ತಿಳಿಸಿವೆ.

    ಸಯೀದ್ ಹಸ್ತಾಂತರಕ್ಕೆ ಕಾನೂನು ಪ್ರಕ್ರಿಯೆ ಪ್ರಾರಂಭಿಸುವಂತೆ ಒತ್ತಾಯಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನ ಸರ್ಕಾರಕ್ಕೆ ಔಪಚಾರಿಕ ಮನವಿಯನ್ನು ಕಳುಹಿಸಿದೆ ಎಂದು ಮೂಲಗಳು ದೃಢಪಡಿಸಿವೆ,

    ಸಯೀದ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನೆಂದು ಪಟ್ಟಿ ಮಾಡಲ್ಪಟ್ಟಿದ್ದಾನೆ. ಅಲ್ಲದೆ, 2008 ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಈತನ ವಿರುದ್ಧ ಅಮೆರಿಕವು ಒಂದು ಕೋಟಿ ಡಾಲರ್​ (ಅಂದಾಜು 83 ಕೋಟಿ ರೂಪಾಯಿ) ಬಹುಮಾನ ಘೋಷಿಸಿದೆ.

    ಮುಂಬೈ ದಾಳಿಯ ವಿಚಾರಣೆ ಎದುರಿಸಲು ಸಯೀದ್‌ನ ಹಸ್ತಾಂತರಕ್ಕೆ ಭಾರತ ಪದೇಪದೆ ಒತ್ತಾಯಿಸುತ್ತಿದೆ, ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಹಸ್ತಾಂತರ ಒಪ್ಪಂದದ ಇಲ್ಲದಿರುವುದು ಈ ಪ್ರಕ್ರಿಯೆಯನ್ನು ಜಟಿಲಗೊಳಿಸಿದೆ.

    ಎಲ್‌ಇಟಿ ನಾಯಕತ್ವ ತಾನು ವಹಿಸಿಲ್ಲ ಎಂದು ಸಯೀದ್ ಪ್ರತಿಪಾದಿಸಿದ್ದರೂ ಅನೇಕ ವರ್ಷಗಳಲ್ಲಿ ಹಲವಾರು ಕಾನೂನು ಸವಾಲುಗಳನ್ನು ಅವರು ಎದುರಿಸಿದ್ದಾರೆ. ಅವರನ್ನು ಮೊದಲು ಜುಲೈ 2019 ರಲ್ಲಿ ಬಂಧಿಸಿ, 11 ವರ್ಷಗಳ ಶಿಕ್ಷೆ ನೀಡಲಾಗಿದೆ.

    ಕಳೆದ ವರ್ಷ ಏಪ್ರಿಲ್‌ನಲ್ಲಿ ಪಾಕಿಸ್ತಾನದ ನ್ಯಾಯಾಲಯವು ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ದಾಖಲೆಗಳು ತೋರಿಸಿವೆ. ಆದರೂ, ಆತ ಜೈಲಿನಲ್ಲಿದ್ದಾರೆಯೇ ಎಂಬುದು ಅಸ್ಪಷ್ಟವಾಗಿದೆ, 2017 ರಲ್ಲಿ ಗೃಹಬಂಧನದಿಂದ ಬಿಡುಗಡೆಯಾದ ನಂತರ ಈತ ಸ್ವತಂತ್ರ ವ್ಯಕ್ತಿಯಾಗಿ ಉಳಿದಿದ್ದಾನೆ ಎಂದು ಕೆಲವು ವರದಿಗಳು ಹೇಳುತ್ತವೆ. ಕಳೆದ ದಶಕದಲ್ಲಿ ಸಯೀದ್​ನನ್ನು ಹಲವಾರು ಬಾರಿ ಬಂಧಿಸಿ, ಬಿಡುಗಡೆ ಮಾಡಲಾಗಿದೆ.

    ಕಳೆದ ವರ್ಷ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಾರತವು ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್​ನನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಇದೀಗ, ತಲ್ಹಾ ಸಯೀದನು ಪಾಕಿಸ್ತಾನದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ತಂದೆಯ ರಾಜಕೀಯ ಪಕ್ಷವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಬ್ಯಾನರ್ ಅಡಿಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.

    https://youtu.be/AEEwfP-JO7I

    ಹೀಗೊಂದು ಗ್ಯಾಂಗ್ಸ್ ಆಫ್ ವಾಸೇಪುರ್: 21 ವರ್ಷಗಳ ನಂತರ ಸಿನಿಮಾ ಶೈಲಿಯಲ್ಲಿ ಕೊಲೆ ಆರೋಪಿ ಬಂಧನ

    ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆಲ್ಲಬಹುದು: ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಹೀಗೇಕೆ ಹೇಳಿದ್ದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts