More

    ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ಕರಾಳತೆ ಬಿಚ್ಚಿಟ್ಟ 94ರ ಅಜ್ಜಿ- ಪರಿಹಾರಕ್ಕೆ ಕೋರಿ ‘ಸುಪ್ರೀಂ’ ಮೊರೆ!

    ನವದೆಹಲಿ: ಪ್ರಧಾನಿಯಾಗಿದ್ದ ವೇಳೆ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಹೇರಿ ಇದೀಗ 45 ವರ್ಷಗಳೇ ಗತಿಸಿಹೋಗಿವೆ. ಆದರೆ ಅದರ ಭೀಕರತೆ ಮೂರು ತಲೆಮಾರಿನ ಮೇಲೆ ಆಗಿದೆ ಎಂದು ಆರೋಪಿಸಿ 94 ವರ್ಷದ ವೃದ್ಧೆಯೊಬ್ಬರು ಇದೀಗ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ.

    1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಹಾಗೂ ಅದರಿಮದ ತಮ್ಮ ಮೂರು ತಲೆಮಾರಿಗೆ ಆಗಿರುವ ಹಾನಿಯನ್ನು ನೀಡಲು ಅವರ ಕುಟುಂಬಸ್ಥರಿಗೆ ಆದೇಶಿಸಬೇಕು. ತಮಗೆ ಪರಿಹಾರವಾಗಿ 25 ಕೋಟಿ ರೂಪಾಯಿ ನೀಡಲು ಆದೇಶಿಸಬೇಕು ಎಂದು ವೀರಾ ಸರಿನ್​ ಎಂಬ ಮಹಿಳೆ ಕೋರ್ಟ್​ ಮೊರೆ ಹೋಗಿದ್ದಾರೆ.

    ಅಂದಿನ ಭೀಕರ ದಿನಗಳನ್ನು ಅರ್ಜಿಯಲ್ಲಿ ಸ್ಮರಿಸಿಕೊಂಡಿರುವ ವೃದ್ಧೆ ಹೇಗೆ ಅಂದಿನ ಸರ್ಕಾರದಿಂದಾಗಿ ತಾವು ದೇಶಬಿಟ್ಟು ಹೋಗಬೇಕಾಯಿತು ಎನ್ನುವುದನ್ನು ಉಲ್ಲೇಖಿಸಿದ್ದಾರೆ.

    ಅಂದಿನ ಸರ್ಕಾರಿ ಅಧಿಕಾರಿಗಳು ತಮ್ಮನ್ನು ಹಾಗೂ ತಮ್ಮ ಪತಿ ಎಚ್.ಕೆ. ಸಾರಿನ್ ಅವರನ್ನು ಆಧಾರಹಿತ ಬಂಧನಕ್ಕೆ ಒಳಪಡಿಸಲು ಮುಂದಾದರು. ದೆಹಲಿಯ ಕರೋಲ್ ಬಾಗ್ ಮತ್ತು ಕನಟ್​ ಪ್ಲೇಸ್​ನಲ್ಲಿ ರತ್ನಾಭರಣದ ವ್ಯಾಪಾರ ಮಳಿಗೆಗಳನ್ನು ಹೊಂದಿದ್ದ ವ್ಯಾಪಾರ ನಡೆಸುತ್ತಿದ್ದ ನನ್ನ ಪತಿಯ ಮಳಿಗೆ ಮೇಲೆ ದಾಳಿ ಮಾಡಿದರು. ನಮ್ಮ ಮನೆಯನ್ನು ಲೂಟಿ ಮಾಡಿದರು, ಮಳಿಗೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದರು. ಈ ದೌರ್ಜನ್ಯ ಸಹಿಸಲಾಗದೆ ನಾವು ದೇಶವನ್ನೇ ತೊರೆಯಬೇಕಾಯಿತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ಪ್ರಣಾಳಿಕೆಯಲ್ಲೂ ಇದೇ ಕೃಷಿ ಕಾನೂನು- ಗುಡುಗುತ್ತಿರೋ ಕೈ ಮುಖಂಡರು ಸುಸ್ತೋ ಸುಸ್ತು!

    ಕಸ್ಟಮ್ಸ್​ ಕಾಯ್ದೆಯ ಉಲ್ಲಂಘನೆ ಎಂಬ ನೆಪವೊಡ್ಡಿ ಇವೆಲ್ಲವನ್ನು ಜಪ್ತಿ ಮಾಡಲಾಗಿತ್ತು. ಅಧಿಕಾರಿಗಳ ದೌರ್ಜನ್ಯದಿಂದಾಗಿ ನಾನು ಪತಿಯನ್ನು ಕಳೆದುಕೊಳ್ಳಬೇಕಾಯಿತು. ದಿಕ್ಕುದೆಸೆಯಿಲ್ಲದೇ ಅಲೆದಾಡಬೇಕಾಯಿತು ಎಂದು ವೃದ್ಧೆ ಹೇಳಿದ್ದಾರೆ.

    ಎಲ್ಲವನ್ನೂ ಕಳೆದುಕೊಂಡ ನಾನು ಮಾತ್ರವಲ್ಲದೇ ನನ್ನ ಮೂರು ತಲೆಮಾರು ಈ ಕರಾಳ ದಿನದ ಪರಿಣಾಮ ಎದುರಿಸಬೇಕಾಗಿದೆ. ಹಾಗಾಗಿ, ತುರ್ತು ಪರಿಸ್ಥಿತಿಯನ್ನು ಕಾನೂನುಬಾಹಿರವೆಂದು ಘೋಷಿಸಬೇಕು ಎಂದು ಕೇಳಿದ್ದಾರೆ.

    ಇದೇ ಬೇಡಿಕೆ ಇಟ್ಟು ಅವರು 2014ರಲ್ಲಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು. ಆದರೆ ಕೋರ್ಟ್​ ಅರ್ಜಿಯನ್ನು ವಜಾ ಮಾಡಿತ್ತು. ಆದರೆ ಸರ್ಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಬೆಲೆಬಾಳುವ ಹಾಗೂ ಸ್ಥಿರಾಸ್ತಿಯನ್ನು ಹಿಂದಿರುಗಿಸಲು ಆದೇಶಿಸಿತ್ತು. ಆದರೆ ಇದುವರೆಗೂ ತಮಗೆ ಅದು ಸಿಕ್ಕಿಲ್ಲ ಎಂದು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ ವೃದ್ಧೆ.

    ತಂದೆಯವರು ನನ್ನ ತಮ್ಮ, ಅವನ ಪತ್ನಿಗೆ ಆಸ್ತಿ ಬರೆದಿದ್ದು ನನಗೇನೂ ಕೊಟ್ಟಿಲ್ಲ- ಕೇಸ್​ ಹಾಕಬಹುದಾ?

    ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

    ಮದ್ವೆ ಯಾವಾಗ ಆಗುತ್ತೆ ಗುರೂಜಿ? ಹುಡುಗನಿಗೆ ಸರ್ಕಾರಿ ಕೆಲ್ಸ ಇರತ್ತಾ? ಹುಡುಗಿ ಸ್ಮಾರ್ಟ್​ ಇರ್ತಾಳಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts