More

    ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

    ಚೆನ್ನೈ: ಚುನಾವಣೆ ಬಂತೆಂದರೆ ಸಾಕು… ಆಶ್ವಾಸನೆ, ಭರವಸೆಗಳ ಮಹಾಪೂರವನ್ನೇ ರಾಜಕಾರಣಿಗಳು ಹರಿಸಿಬಿಡುತ್ತಾರೆ. ಅವರ ಪೈಕಿ ಬೆರಳೆಣಿಕೆಯಷ್ಟು ಮಂದಿ ಕೆಲವು ಆಶ್ವಾಸನೆಗಳನ್ನು ಈಡೇರಿಸಿದರೂ ಉಳಿದ ಎಲ್ಲರಿಗೂ ಈ ಆಶ್ವಾಸನೆ ನೆನಪಾಗುವುದು ಮತ್ತೊಂದು ಚುನಾವಣೆ ಬಂದಾಗಲೇ.

    ಆದ್ದರಿಂದ ಆಶ್ವಾಸನೆಗಳನ್ನು ಹೊತ್ತು ಚುನಾವಣಾ ಪ್ರಣಾಳಿಕೆಯ ಕುರಿತು ಬುದ್ಧಿವಂತರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಅವರಿಗೆ ಗೊತ್ತು ಎಲ್ಲವೂ ಪೊಳ್ಳು ಎಂದು. ಆದರೆ ಕೆಲವರು ಮಾತ್ರ ಇಂದಿಗೂ ಇದನ್ನೇ ನಂಬಿಬಿಡುತ್ತಿದ್ದಾರೆ. ಅಂಥವರಿಗಾಗಿಯೇ ಆಶ್ವಾಸನೆಗಳ ಮಹಾಪೂರವೇ ಹರಿದುಬರುತ್ತದೆ.
    ಇದೀಗ ತಮಿಳುನಾಡಿದ ಅಭ್ಯರ್ಥಿಯೊಬ್ಬ ಹೊರಡಿಸಿರುವ ಚುನಾವಣಾ ಪ್ರಣಾಳಿಕೆ ಭಾರಿ ಸುದ್ದಿ ಮಾಡುತ್ತಿದೆ. ಇದಾಗಲೇ ಮನೆಮನೆಗೆ ವಾಷಿಂಗ್‌ ಮಿಷನ್‌ ಕೊಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿಯಾಗಿದೆ. ಆದರೆ 34 ವರ್ಷದ ಪಕ್ಷೇತರ ಅಭ್ಯರ್ಥಿ ಸರವಣನ್ ಮಾತ್ರ ಎಲ್ಲರಿಗಿಂತಲೂ ಭಿನ್ನವಾದ ಆಶ್ವಾಸನೆ ಕೊಟ್ಟು ಎಲ್ಲರನ್ನೂ ಚಕಿತರನ್ನಾಗಿ ಮಾಡಿದ್ದಾರೆ. ಇವರು ದಕ್ಷಿಣ ಮದುರೈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

    ಅಷ್ಟಕ್ಕೂ ಅವರು ಕೊಟ್ಟಿರುವ ಆಶ್ವಾಸನೆ ಎಂದರೆ ತಾನು ಗೆದ್ದುಬಂದರೆ ಪ್ರತಿ ಮನೆಗೂ ಹೆಲಿಕಾಪ್ಟರ್‌ ನೀಡುತ್ತೇನೆ, ಎಲ್ಲರಿಗೂ ಐಫೋನ್ ನೀಡುತ್ತೇನೆ. ಚಂದ್ರ ಗ್ರಹಕ್ಕೆ 100 ದಿನ ಟ್ರಿಪ್​ಗೆ ಅವಕಾಶ ನೀಡುತ್ತೇನೆ ಎಂದಿದ್ದಾರೆ. ಇಷ್ಟಕ್ಕೇ ಅವರ ಆಶ್ವಾಸನೆ ಮುಗಿದಿಲ್ಲ. ಭಯಂಕರ ಬೇಸಿಗೆ ಬಿಸಿಲನ್ನು ನಿಯಂತ್ರಿಸಲು ತಮ್ಮ ಕ್ಷೇತ್ರದಲ್ಲಿ 300 ಅಡಿ ಎತ್ತರದ ಕೃತಕ ಮಂಜುಗಡ್ಡೆಯನ್ನೇ ನಿರ್ಮಿಸುತ್ತೇನೆ. ಒಂದು ಬಾಹ್ಯಾಕಾಶ ಸಂಶೋಧನಾ ಕೇಂದ್ರ, ರಾಕೆಟ್ ಲಾಂಚರ್ ಕೇಂದ್ರಗಳನ್ನ ಸ್ಥಾಪಿಸುತ್ತೇನೆ, ಯುವಕರಿಗೆ 1 ಕೋಟಿ ರೂಪಾಯಿ ನೀಡುತ್ತೇನೆ, ಪ್ರತೀ ಕುಟುಂಬಕ್ಕೂ ಸ್ವಿಮ್ಮಿಂಗ್ ಪೂಲ್ ಇರುವ ಮೂರಂತಸ್ತಿನ ಬಂಗಲೆ, ಹೆಲಿಕಾಪ್ಟರ್, ದೋಣಿ, ಕಾರು, ರೋಬೋಗಳನ್ನ ಉಚಿತವಾಗಿ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಇಷ್ಟೆಲ್ಲಾ ಹೇಳಿದ ಮೇಲೆ ಇವನೊಬ್ಬ ಹುಚ್ಚ ಎಂದುಕೊಂಡವರೇ ಹಲವು ಮಂದಿಯಂತೆ. ಆದರೆ ಅಸಲಿಗೆ ಅವರು ಈ ರೀತಿಯ ಭರವಸೆ ಕೊಡುವುದಕ್ಕೂ ಕಾರಣವಿದೆ. ಸರವಣ ಅವರೇ ಹೇಳುವಂತೆ, ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಮನೆ ಮನೆಗೆ ಫ್ರಿಜ್, ಟಿವಿ ಇತ್ಯಾದಿ ಕೊಡುತ್ತಿದ್ದಾರೆ. ಇವೆಲ್ಲವೂ ಸಾಮಾನ್ಯ ಆಗಿಬಿಟ್ಟಿದೆ. ಆದರೆ ನಾನು ಇಡೀ ವಿಶ್ವದಲ್ಲಿ ಯಾರೂ ಈಡೇರಿಸಲಾಗದ ಆಶ್ವಾಸನೆ ನೀಡಿದ್ದೇನೆ. ಅದಕ್ಕೆ ಕಾರಣ ಇಷ್ಟೇ. ಕಳೆದ 50 ವರ್ಷಗಳಿಂದ ರಾಜಕೀಯ ಪಕ್ಷಗಳು ವಿವಿಧ ಕಲ್ಯಾಣ ಯೋಜನೆಗಳನ್ನ ಘೋಷಣೆ ಮಾಡಿಕೊಂಡು ಚುನಾವಣೆ ಗೆಲ್ಲುತ್ತಾ ಬಂದಿವೆ. ಅವರ ಸರ್ಕಾರಗಳು ಯಾವತ್ತೂ ಜನಸೇವೆ ಮಾಡಿಲ್ಲ. ಈ ಬಗ್ಗೆ ನಾನು ಜನರಲ್ಲಿ ಅರಿವು ಮೂಡಿಸಬೇಕಿತ್ತು. ಅದಕ್ಕಾಗಿ, ಇಡೀ ವಿಶ್ವದಲ್ಲಿ ಯಾರೂ ಕೂಡ ನೀಡದಂಥ ಹಾಗೂ ಯಾರೂ ಈಡೇರಿಸಲಾಗದಂಥ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ಧೇನೆ. ಜನರನ್ನು ಜಾಗೃತಿಗೊಳಿಸುವ ಉದ್ದೇಶ ಇದು. ಎಲ್ಲರೂ ನಿಮ್ಮನ್ನು ಫೂಲ್‌ ಮಾಡುತ್ತಿದ್ದಾರೆ, ನೀವು ಮೋಸ ಹೋಗುತ್ತಿದ್ದೀರಿ ಎಂದು ತಿಳಿಸುವ ಸಲುವಾಗಿ ಇಂಥ ಆಶ್ವಾಸನೆ ನೀಡಿದ್ದೇನೆ” ಎನ್ನುತ್ತಾರೆ.

    ನಾನು ಚುನಾವಣೆ ಬಗ್ಗೆ ಯುವಸಮುದಾಯದವರನ್ನು ಜಾಗೃತಿಗೊಳಿಸಲು ಕಣಕ್ಕಿಳಿದಿದ್ದೇನೆ. ನಮ್ಮಲ್ಲಿ ಬಹಳ ಜನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎಂದು ಗೊತ್ತಿಲ್ಲ. ಈ ಪ್ರಕ್ರಿಯೆಯನ್ನು ಕಲಿಯಲು ನಾನು ಸ್ಪರ್ಧಿಸುತ್ತಿದ್ದೇನೆ. ಜನರಿಗೆ ತಿಳಿವಳಿಕೆ ಬಂದರೆ ರಾಜಕಾರಣಿಗಳು ಭಯಭೀತರಾಗುತ್ತಾರೆ. ಆಗ ಉತ್ತಮ ಆಡಳಿತಕ್ಕೆ ದಾರಿಯಾಗಬಹುದು ಎಂದಿದ್ದಾರೆ ಸರವಣನ್‌.

    ನಾಮಪತ್ರ ಸಲ್ಲಿಕೆಗೆ ನಾನು 10 ಸಾವಿರ ರೂ ಖರ್ಚು ಮಾಡಿದ್ದೇನೆ. ಇದನ್ನು ಸಾಲ ಮಾಡಿ ತಂದಿದ್ದೇನೆ. ನಮ್ಮದು ಬಡ ಕುಟುಂಬ. ದಕ್ಷಿಣ ಮದುರೈ ಕ್ಷೇತ್ರದಲ್ಲಿ 2.3 ಲಕ್ಷ ಮತದಾರರಿದ್ದಾರೆ. ಇಲ್ಲಿ 5000 ಮಂದಿ ಯುವಕರು ಚುನಾವಣೆಗೆ ಸ್ಪರ್ಧಿಸಿ ಪ್ರತಿಯೊಬ್ಬರೂ 50 ಮತಗಳನ್ನ ಪಡೆದರೆ ಯಾವ ಪಕ್ಷವೂ ಸ್ಪರ್ಧೆಗಿಳಿಯಲು ಸಾಧ್ಯವೇ ಆಗುವುದಿಲ್ಲ. ಈ ರಾಜಕಾರಣಿಗಳು ಜನಸಾಮಾನ್ಯರನ್ನು ಕಂಡರೆ ಭಯಪಡುವಂತಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಲೆಂದೇ ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. ಅಂದಹಾಗೆ ಇವರ ಚುನಾವಣೆ ಚಿಹ್ನೆ ‘ಕಸದಬುಟ್ಟಿ’ ಅಂತೆ.

    ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡೋದು ನಮ್‌ ಕರ್ತವ್ಯ; ಸಿಡಿ ಲೇಡಿ ನೆರವಿಗೆ ನಿಂತ ಸಚಿವೆ ಜೊಲ್ಲೆ

    ಅತ್ತ ವರ.. ಇತ್ತ ವಧು… ಮಧ್ಯೆ ಪ್ರವಾಹ… ಹಾರಿಬಂದು ಮದುಮಗನಿಗೆ ಕಿಸ್‌ ಕೊಟ್ಟಳು ಮದುಮಗಳು…

    ನನ್ನ ಜೇಬಲ್ಲಿ ಬಾಂಬ್‌ ಇದೆ… ತಡ್ಕೊಳಿ… ಸದ್ಯ ಗಪ್‌ಚುಪ್‌ ಇದ್ದೇನೆ… ಹೊರಹಾಕಿದ್ರೆ ಅಷ್ಟೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts