More

    ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ತನ್ನನ್ನು ಗೆಲ್ಲಿಸಿ

    ಚಿಕ್ಕಮಗಳೂರು: ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುತ್ತಿದ್ದು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ತಿಳಿದುಕೊಂಡು ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ತಿಳಿಸಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಪಕ್ಷದ ಹಿರಿಯರಿಗೆ ಧನ್ಯವಾದ ಅರ್ಪಿಸುತ್ತೇನೆ. ನೈಋತ್ಯ ಪದವೀಧರರ ಕ್ಷೇತ್ರ ಐದೂವರೆ ಜಿಲ್ಲೆಗಳನ್ನೊಳಗೊಂಡಿದೆ. ೩೦ ವಿಧಾನಸಭಾ ಕ್ಷೇತ್ರ, ೧೪ ಮೆಡಿಕಲ್ ಕಾಲೇಜು, ೩೦ ಎಂಜಿನಿಯರಿAಗ್ ಕಾಲೇಜು, ನೂರಾರು ಶೈಕ್ಷಣಿಕ ಸಂಸ್ಥೆಗಳಿರುವ ಕ್ಷೇತ್ರ. ಒಳ್ಳೆಯ ರಸ್ತೆ, ಬಂದರು ಸಂಪರ್ಕವಿರುವ ಕ್ಷೇತ್ರ. ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದ್ದು, ತಮ್ಮ ಗೆಲುವಿಗೆ ಪಕ್ಷದ ಕಾರ್ಯಕರ್ತರ ಸಹಕಾರ ಬೇಕು ಎಂದು ಹೇಳಿದರು.
    ಮಕ್ಕಳ ತಜ್ಞನಾದ ನಾನು ಸರ್ಜಿ ಗ್ರೂಪ್ ಆಪ್ ಇನ್ಸಿಟಿಟ್ಯೂಷನ್ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿz್ದೆÃನೆ. ೧೦ನೇ ವರ್ಷದಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕನಾಗಿ ಸೇರ್ಪಡೆಗೊಂಡಿದ್ದೆ. ಇದೀಗ ಆರ್ ಎಸ್‌ಎಸ್ ಸಂಘಟನೆ ಜವಾಬ್ದಾರಿ ಹೊಂದಿದ್ದು ಎರಡು ವರ್ಷದ ಹಿಂದೆ ಬಿಜೆಪಿ ಸೇರ್ಪಡೆಗೊಂಡಿz್ದÉÃನೆ. ಪಕ್ಷಕ್ಕಾಗಿ ತಾನು ನಿಷ್ಟೆಯಿಂದ ಕೆಲಸ ಮಾಡಿದ್ದು, ಇದೇ ಕಾರಣಕ್ಕೆ ನನಗೆ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದೆ ಎಂದು ತಿಳಿಸಿದರು.
    ಎಂಬಿಬಿಎಸ್, ಎಂಡಿ ಆದ ನಂತರ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಬಳಿಕ ಸಣ್ಣ ಕ್ಲಿನಿಕ್ ತೆರೆದಿದ್ದೆ. ಇಂದು ೧೦೦ ವೈದ್ಯರಿರುವ ೨೫೬ ಬೆಡ್ ಆಸ್ಪತ್ರೆಯಾಗಿ ಸಣ್ಣ ಕ್ಲಿನಿಕ್ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಒಂದು ಸಾವಿರ ಸಿಬ್ಬಂದಿ ನಮ್ಮ ಜತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪದವೀಧರರ ಕಷ್ಟಗಳೇನು, ತೊಂದರೆಗಳೇನು, ಅವರು ಎದುರಿಸುವ ಸವಾಲುಗಳೇನು ಎಂಬುದು ನನಗೆ ತಿಳಿದಿದೆ. ವೈದ್ಯನಾದ್ದರಿಂದ ನೂರಾರು ಜನರನ್ನು ನೋಡಿz್ದÉÃನೆ. ಸಾಮಾನ್ಯ ಜನರ ಕಷ್ಟಗಳು ನನಗೆ ಅರಿವಿದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ತಮಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
    ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ೮೨ ಸಾವಿರ ಮತದಾರರು ನೊಂದಣಿಯಾಗಿದ್ದಾರೆ. ಚಿಕ್ಕಮಗಳೂರಲ್ಲಿ ೧೧ ಸಾವಿರ , ಶಿವಮೊಗ್ಗ ೨೭, ದಾವಣಗೆರೆ ೭ ಸಾವಿರ, ಕೊಡಗು ಮೂರುವರೆ ಸಾವಿರ, ಉಡುಪಿ ಮತ್ತು ಮಂಗಳೂರಿನಲ್ಲಿ ಉಳಿದ ಮತದಾರರು ನೊಂದಣಿಯಾಗಿದ್ದಾರೆ ಎಂದರು.
    ಮೇ ೧೬ರಂದು ನಾನು ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿz್ದÉÃನೆ. ಈ ಚುನಾವಣೆ ಕಾರ್ಯಕರ್ತರ ಚುನಾವಣೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ತಿಳಿದು ಚುನಾವಣೆಯನ್ನು ನಡೆಸಿಕೊಡಬೇಕು. ಅತಿ ಹೆಚ್ಚು ಮತಗಳ ಅಂತರದಿAದ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕು. ದೇಶದ ಅಭಿವೃದ್ಧಿಗೆ, ದೇಶದ ಘನತೆ ಗೌರವ ಹೆಚ್ಚಿಸಲು, ಭಾರತ ಮತ್ತೆ ವಿಶ್ವಗುರು ಆಗುವ ನಿಟ್ಟಿನಲ್ಲಿ ಮತದಾರರು ಸಹಕರಿಸಬೇಕು ಎಂದು ವಿನಂತಿಸಿದರು.
    ಅದೇ ರೀತಿ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಎಸ್.ಎಲ್.ಬೋಜೇಗೌಡ ಅವರು ಸ್ಪರ್ಧಿಸಿದ್ದು, ಅವರನ್ನೂ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲಾ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
    ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಮುಖಂಡರಾಗ ಮಾಲತೇಶ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts