More

    ತಪ್ಪನ್ನು ಮುಚ್ಚಿಹಾಕಲು ಬದುಕಿದ್ದ ಸೋಂಕಿತೆಯನ್ನು ಸಾಯಿಸಿದರು? ಬೆಂಗಳೂರು ಆಸ್ಪತ್ರೆ ವಿರುದ್ಧ ಭಾರಿ ಆರೋಪ!

    ಬೆಂಗಳೂರು: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಕರೊನಾದಿಂದಾಗಿ ಎಲ್ಲರ ಬದುಕು ಹೈರಾಣಾಗಿ ಹೋಗಿದೆ. ಮೊದಲನೆಯ ಅಲೆಗಿಂತಲೂ ಅತೀ ವೇಗದಲ್ಲಿ ಎರಡನೆಯ ಅಲೆ ಜೀವವನ್ನು ಬಲಿ ಪಡೆಯುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರು ತುಂಬಿ ತುಳುಕಾಡುತ್ತಿರುವ ಕಾರಣ, ಶವಗಳ ಅದಲುಬದಲು ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಆಗಿಹೋಗಿದೆ.

    ಅದೇ ರೀತಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿಯೂ ಅನಾಹುತ ನಡೆದಿದ್ದು, ಇದೀಗ ಇಡೀ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಶವಗಳನ್ನು ತಪ್ಪಾಗಿ ನೀಡಿದ್ದನ್ನು ಮುಚ್ಚಿ ಹಾಕಲು ಬದುಕಿರುವ ಸೋಂಕಿತೆಯೊಬ್ಬರನ್ನು ವೈದ್ಯರು ಸಾಯಿಸಿರುವ ಗಂಭೀರ ಆರೋಪ ಇದಾಗಿದೆ.

    ಆಸ್ಪತ್ರೆ ಸಿಬ್ಬಂದಿ ನಮ್ಮ ಅಕ್ಕನನ್ನು ಬಲವಂತವಾಗಿ ಸಾಹಿಸಿ ಮೃತದೇಹ ಕೊಟ್ಟಿದ್ದಾರೆ ಎಂದು ಯಲಹಂಕದ ಕುಟುಂಬವೊಂದು ಆಸ್ಪತ್ರೆ ಸಿಬ್ಬಂದಿ ಮೇಲೆ ಆರೋಪಿಸಿದೆ.
    ಆಗಿದ್ದೇನು? ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟ ದೇಹಗಳಲ್ಲಿ ಅದಲುಬದಲಾಗಿತ್ತು. ಲಕ್ಷಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ಅದನ್ನು ಜಯಲಕ್ಷಮ್ಮ ಎಂದು ಬೇರೆ ಕುಟುಂಬಕ್ಕೆ ನೀಡಿದ್ದಾರೆ. ಈ ದೇಹ ನಮ್ಮ ಅಕ್ಕನದ್ದಲ್ಲ, ಅವರನ್ನು ಈಗಲೇ ತೋರಿಸಿ ಎಂದು ಎಂದು ಮೃತಳ ಸಹೋದರ ರಾಜು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಬೆಳಗ್ಗೆಯಿಂದ ಸತಾಯಿಸಿದ ಆಸ್ಪತ್ರೆ ಸಿಬ್ಬಂದಿ ಮಧ್ಯಾಹ್ನ 3 ಗಂಟೆಗೆ ಜಯಲಕ್ಷಮ್ಮ ಮೃತದೇಹ ನೀಡಿದ್ದಾರೆ ಎನ್ನಲಾಗಿದೆ.

    ನಮ್ಮ ಚಿಕ್ಕಮ್ಮನನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ಸೇರಿಸಿದಾಗ ಪ್ರಾಣ ಹೋಗುವಷ್ಟು ಗಂಭೀರತೆ ಇರಲಿಲ್ಲ. ಆದರೆ, ಆಸ್ಪತ್ರೆ ಸಿಬ್ಬಂದಿ ತಿಲೊಸಿದ ಹಿನ್ನೆಲೆಯಲ್ಲಿ ಹೋಗಿ ನೋಡಿದರೆ ಬೇರೆ ದೇಹ ಕೊಟ್ಟಿದ್ದರು. ಆದರೆ, ಸಾಯುವ ಮೊದಲೇ ಮರಣ ಪ್ರಮಾಣ ಪತ್ರ ನೀಡಿದ್ದರಿಂದ ತಮ್ಮ ಆಸ್ಪತ್ರೆಯ ತಪ್ಪು ಹೊರಬರುತ್ತದೆ ಎನ್ನುವ ಉದ್ದೇಶದಿಂದ ಚಿಕ್ಕಮ್ಮನನ್ನು ಮಧ್ಯಾಹ್ನದ ವೇಳೆಗೆ ಬಲವಂತವಂತವಾಗಿ ಸಾಯಿಸಿ ಮೃತದೇಹ ಕೊಟ್ಟಿದ್ದಾರೆ. ಕೋವಿಡ್ ಮೃತದೇಹ ಪೋಸ್ಟ್ ಮಾರ್ಟಮ್ ಮಾಡಲು ಸಾಧ್ಯವಿಲ್ಲ ಎಂಬ ಉದ್ದೇಶದಿಂದ ಆಸ್ಪತ್ರೆ ಸಿಬ್ಬಂದಿ ಬಲವಂತವಾಗಿ ಸಾಯಿಸಿದ್ದಾರೆ ಎಂದು ಮೃತಳ ಸಂಬಂಧಿ ನಾಗಮ್ಮ ವಿಜಯವಾಣಿಗೆ ತಿಳಿಸಿದ್ದಾರೆ.

    ರಾಕ್ಷಸರಾದ ಗಂಡ- ಅತ್ತೆಯ ಚಿತ್ರಹಿಂಸೆ ಎಳೆಎಳೆಯಾಗಿ ಬಿಚ್ಚಿಟ್ಟು ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ…!

    ಅಯ್ಯೋ ಶಿವನೆ.. ಲಾಕ್‌ಡೌನ್‌ ಅಂತೆ… ಮುಗೀತು ನಮ್‌ ಕಥೆ ಎಂದು ಎದ್ದು ಬಿದ್ದು ಓಡೋಡಿ ಬಂದರು ಇಲ್ಲಿಗೆ…. !

    ಭಾವಿ ಅಮ್ಮನಿಗೆ ಕೋವಿಡ್ ಗುಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts