More

    20 ಟು 40- ಕರೊನಾ ಹರಡಿಸುವಲ್ಲಿ ಇವರ ಪಾತ್ರವೇ ಅಧಿಕ ಎಂದ ವಿಶ್ವ ಆರೋಗ್ಯ ಸಂಸ್ಥೆ

    ನವದೆಹಲಿ: ಕ್ಷಣ ಕ್ಷಣಕ್ಕೂ ಕರೊನಾ ಸೋಂಕು ಹರಡುತ್ತಲೇ ಇದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೇಲಿಂದ ಮೇಲೆ ಸಂಶೋಧನಾ ವರದಿಗಳನ್ನು ನೀಡುತ್ತಲೇ ಬಂದಿದೆ.

    ಈ ತಿಂಗಳ ವರದಿಯನ್ನು ಆಧರಿಸಿ ಮಾಹಿತಿ ನೀಡಿರುವ ಆರೋಗ್ಯ ಸಂಸ್ಥೆ 20 ರಿಂದ 40 ವರ್ಷ ವಯಸ್ಸಿನವರು ಹೆಚ್ಚಿನ ರೀತಿಯಲ್ಲಿ ಕರೊನಾ ಹರಡಲು ಕಾರಣೀಕರ್ತರಾಗುತ್ತಿದ್ದಾರೆ ಎಂದು ಹೇಳಿದೆ. ಏಕೆಂದರೆ ಈ ವಯಸ್ಸಿನವರಿಗೆ ಸೋಂಕು ತಗುಲಿದರೂ ಅದು ತಿಳಿಯುವುದೇ ಇಲ್ಲ. ಯಾವುದೇ ಲಕ್ಷಣಗಳೂ ಇರುವುದಿಲ್ಲ. ಆದರೆ ಇವರ ಸೋಂಕು ಇನ್ನೊಬ್ಬರಿಗೆ ಹರಡುತ್ತಿದೆ. ಅವರು ಸೋಂಕು ಪೀಡಿತರಾಗುತ್ತಿದ್ದಾರೆ ಎಂದಿದ್ದಾರೆ ಸಂಶೋಧಕರು.

    ಸೋಂಕಿಗೊಳಗಾಗುತ್ತಿರುವ ಈ ವಯಸ್ಸಿನ ಜನರ ಪ್ರಮಾಣವು ಜಾಗತಿಕವಾಗಿ ಈ ತಿಂಗಳು ಏರಿಕೆಯಾಗಿದೆ. ಇದು ಜನನಿಬಿಡ ಪ್ರದೇಶಗಳಲ್ಲಿರುವ ದೈಹಿಕವಾಗಿ ದುರ್ಬಲರಾಗಿರುವವರಲ್ಲಿ ಅಪಾಯವನ್ನುಂಟು ಮಾಡುತ್ತವೆ.

    ಇದನ್ನೂ ಓದಿ: ಔಷಧಿ ಕಂಡುಹಿಡಿದ ಬಯೋಕಾನ್‌ ವ್ಯವಸ್ಥಾಪಕಿಗೂ ಬಿಡದ ಕರೊನಾ: ಟ್ವೀಟ್‌

    ಆರೋಗ್ಯ ಸೇವೆಗಳು ಸರಿಯಾಗಿಲ್ಲದ ಪ್ರದೇಶಗಳಲ್ಲಿ ವಾಸಿಸುವ ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಹೆಚ್ಚಿನ ಸಮಸ್ಯೆಯುಂಟಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ತಕೇಶಿ ಕಾಸೈ ಹೇಳಿದ್ದಾರೆ.

    ಕರೊನಾವೈರಸ್ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದ ವಿಯೆಟ್ನಾಂನಲ್ಲಿಯೂ ಮತ್ತೆ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಮತ್ತೊಮ್ಮೆ ಸೋಂಕು ಏರಿಕೆಯಾಗುತ್ತಿರುವುದು ಏಷ್ಯಾ ಪೆಸಿಫಿಕ್‌ನಲ್ಲಿ ಈ ಸಾಂಕ್ರಾಮಿಕ ರೋಗ ಹೊಸ ಹಂತಕ್ಕೆ ತಲುಪಿರುವುದರ ಸೂಚನೆಯಾಗಿದೆ ಎಂದಿದ್ದಾರೆ ಕಾಸೈ.

    ಬಿಜೆಪಿ ಕೈಯಲ್ಲಿ ಫೇಸ್‌ಬುಕ್‌ ಇಂಡಿಯಾ: ತನಿಖೆ ಕೋರಿ ಜುಕರ್‌ಬರ್ಗ್‌ಗೆ ಕಾಂಗ್ರೆಸ್‌ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts