More

    ಬಿಜೆಪಿ ಕೈಯಲ್ಲಿ ಫೇಸ್‌ಬುಕ್‌ ಇಂಡಿಯಾ: ತನಿಖೆ ಕೋರಿ ಜುಕರ್‌ಬರ್ಗ್‌ಗೆ ಕಾಂಗ್ರೆಸ್‌ ಪತ್ರ

    ನವದೆಹಲಿ: ಭಾರತದಲ್ಲಿ ಫೇಸ್‌ಬುಕ್‌ ಹಾಗೂ ವಾಟ್ಸ್‌ಆಪ್‌ಗಳನ್ನು ಭಾರತೀಯ ಜನತಾ ಪಕ್ಷ ಹಾಗೂ ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿರುವ ಬೆನ್ನಲ್ಲೇ ಇದೀಗ ಫೇಸ್‌ಬುಕ್ ಇಂಡಿಯಾ ನಾಯಕತ್ವ ತಂಡದ ನಡವಳಿಕೆ ಮತ್ತು ಕಾರ್ಯಾಚರಣೆಗಳ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಗ್ರಹಿಸಿದ್ದಾರೆ.

    ‘ಬಿಜೆಪಿ ನಾಯಕರ ದ್ವೇಷದ ಮಾತುಗಳಿಗೆ ಫೇಸ್‌ಬುಕ್‌ನ ನಿಯಮಗಳು ಅನ್ವಯವಾಗುವುದಿಲ್ಲ’ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

    ಇದನ್ನೇ ಆಧಾರವಾಗಿಟ್ಟುಕೊಂಡು ಇದೀಗ ವೇಣುಗೋಪಾಲ್‌ ಪತ್ರ ಬರೆದಿದ್ದಾರೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಪತ್ರ ಬರೆದಿರುವ ವೇಣುಗೋ‍ಪಾಲ್‌, ‘ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೇಶದ ಚುನಾವಣಾ ವಿಷಯದಲ್ಲಿ ಫೇಸ್‌ಬುಕ್ ಇಂಡಿಯಾ ಹಸ್ತಕ್ಷೇಪ ಮಾಡಿದೆ. ಫೇಸ್‌ಬುಕ್ ಇಂಡಿಯಾ ನಾಯಕತ್ವ ತಂಡದ ನಡವಳಿಕೆ ಮತ್ತು ಕಾರ್ಯಾಚರಣೆಗಳ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸಬೇಕಿದೆ’ ಎಂದಿದ್ದಾರೆ.

    ಬಿಜೆಪಿ ಕೈಯಲ್ಲಿ ಫೇಸ್‌ಬುಕ್‌ ಇಂಡಿಯಾ: ತನಿಖೆ ಕೋರಿ ಜುಕರ್‌ಬರ್ಗ್‌ಗೆ ಕಾಂಗ್ರೆಸ್‌ ಪತ್ರಈ ಕುರಿತು ತನಿಖೆಗೆ ಫೇಸ್‌ಬುಕ್‌ ಕೇಂದ್ರ ಕಚೇರಿ ಹಂತದಲ್ಲಿ ಉನ್ನತಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಬೇಕು. ಒಂದೆರಡು ತಿಂಗಳಲ್ಲಿ ವರದಿ ನೀಡಬೇಕು. ಆ ವರದಿಯನ್ನು ಸಾರ್ವಜನಿಕಗೊಳಿಸಬೇಕು. ತನಿಖೆಯ ಮೇಲೆ ಪ್ರಭಾವಬೀರದಂತೆ ತಡೆಯುವುದಕ್ಕಾಗಿ ಫೇಸ್‌ಬುಕ್ ಇಂಡಿಯಾ ಕಾರ್ಯಾಚರಣೆ ಮುನ್ನಡೆಸಲು ಹೊಸ ತಂಡವನ್ನು ಪರಿಗಣಿಸಬೇಕು ಎಂದು ವೇಣುಗೋಪಾಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

    ಕಂಪನಿ ಸಾಮಾಜಿಕ ಮಾಧ್ಯಮ ವೇದಿಕೆಯು ದ್ವೇಷದ ಮಾತು ಮತ್ತು ಹಿಂಸೆಯನ್ನು ಪ್ರಚೋದಿಸುವ ವಿಷಯವನ್ನು ನಿಷೇಧಿಸುತ್ತದೆ. ಈ ವಿಷಯದಲ್ಲಿ ರಾಜಕೀಯ ನೀತಿಗಳನ್ನು ಪರಿಗಣಿಸದೆ ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸಲಾಗಿದೆ’ ಎಂದು ಫೇಸ್‌ಬುಕ್‌ ಸಂಸ್ಥೆ ಪ್ರತಿಕ್ರಿಯೆ ನೀಡಿತ್ತು.

    ದಮ್ಮಯ್ಯ ಅಂತೀವಿ, ಕೈಬಿಡಬೇಡ್ರಪ್ಪೋ… ಗೋಳೋ ಎಂದು ಕಣ್ಣೀರು ಸುರಿಸ್ತಿದೆ ಪಾಕಿಸ್ತಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts