More

    ಕಾಲೇಜ್‌ ಆವರಣದಲ್ಲಿ ಹರಿಯಿತು ನೆತ್ತರು: ಪ್ರೀತಿಸಿಲ್ಲವೆಂದು ವಿದ್ಯಾರ್ಥಿನಿಯ ರುಂಡ ಕಡಿದ ವಿದ್ಯಾರ್ಥಿ!

    ಕೊಟ್ಟಾಯಂ (ಕೇರಳ): ತನ್ನನ್ನು ಪ್ರೀತಿಸಿಲ್ಲ ಎನ್ನುವ ಕಾರಣಕ್ಕೆ ಯುವತಿಯನ್ನು ಕಾಲೇಜಿನ ಆವರಣದಲ್ಲಿಯೇ ತಲೆ ಕಡಿದು ವಿದ್ಯಾರ್ಥಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ವೈಕಾಂನ ತಲಯೋಳಪ್ಪರಂಬು ನಿವಾಸಿಯಾದ 22 ವರ್ಷದ ವಿದ್ಯಾರ್ಥಿನಿ ನಿಥಿನಾ ಮೋಲ್‌ ಕೊಲೆಯಾಗಿದ್ದಾಳೆ. ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ನಿಥಿನಾ ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್​ನಲ್ಲಿ ಮೂರನೇ ವರ್ಷದ ‘ಬ್ಯಾಚುಲರ್‌ ಆಫ್‌ ವೋಕೇಷನ್‌’ ವ್ಯಾಸಂಗ ಮಾಡುತ್ತಿದ್ದಳು.

    ತನ್ನನ್ನು ಪ್ರೀತಿಸುವಂತೆ ಅಭಿಷೇಕ್‌ ಪದೇ ಪದೇ ಈಕೆಯನ್ನು ಕಾಡಿಸುತ್ತಿದ್ದ. ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ, ಕಾಲೇಜಿನ ಆವರಣದಲ್ಲಿಯೇ ಆಕೆಯ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ.

    ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಬಂದಿದ್ದಳು. ಪರೀಕ್ಷಾ ಕೊಠಡಿಗೆ ತೆರಳುವ ವೇಳೆ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಅಭಿಷೇಕ್ ಬೈಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ರಾಜೀವಗಾಂಧಿ ಹತ್ಯೆ- 30 ವರ್ಷಗಳ ಬಳಿಕ ಮರಳಿದ ರಕ್ತಸಿಕ್ತ ಕ್ಯಾಪ್‌… ಕಣ್ಣೀರಾದ ಐಪಿಎಸ್‌ ಅಧಿಕಾರಿ…

    ಐಸ್‌ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಿನ್ಬೋದಾ? ಬೆಂಗಳೂರಿನ ಹೋಟೆಲ್‌ನಲ್ಲಿ ಇನ್ಮುಂದೆ ಅದೂ ಸಾಧ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts