More

    ನೇಪಾಳದ ಬೆನ್ನಿಗೂ ಚೂರಿ ಹಾಕಿದ ಚೀನಾ! ಗಡಿ ಗುಳುಂ ಮಾಡಿ ಕಟ್ಟಡ ನಿರ್ಮಾಣ

    ಹುಮ್ಲಾ (ನೇಪಾಳ): ಭಾರತದ ಜತೆ ಸ್ನೇಹದಿಂದ ಇದ್ದ ನೇಪಾಳದ ತಲೆತಿರುಗಿಸಿ, ಭಾರತದ ಮೇಲೆ ಛೂಬಿಟ್ಟ ಕುತಂತ್ರಿ ಚೀನಾ, ಇದೀಗ ನೇಪಾಳದ ಭೂಪ್ರದೇಶವನ್ನೇ ಗುಳುಂ ಮಾಡುತ್ತಿದೆ!

    ನಿನ್ನ ಬೆನ್ನಿಗೆ ನಾನಿದ್ದೇನೆ ಎಂದು ನೇಪಾಳವನ್ನು ನಂಬಿಸಿ, ತಲೆತಿರುಗಿಸಿದ್ದ ಚೀನಿ ಕಮ್ಯುನಿಸ್ಟರು ಹಂತ ಹಂತವಾಗಿ ನೇಪಾಳದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಶುರು ಮಾಡಿದ್ದಾರೆ.

    ನೇಪಾಳ-ಚೀನಾ ಗಡಿಯಲ್ಲಿರುವ, ಕರ್ನಾಲಿ ಪ್ರಾಂತ್ಯದ ಹುಮ್ಲಾ ಜಿಲ್ಲೆಯಲ್ಲಿ ಕನಿಷ್ಠ ಒಂಬತ್ತು ಕಟ್ಟಡಗಳನ್ನು ಚೀನಾ ರಹಸ್ಯವಾಗಿ ನಿರ್ಮಾಣ ಮಾಡಿದೆ. ನೇಪಾಳಿ ಜನಸಂಖ್ಯೆಯು ಈ ಪ್ರದೇಶದಲ್ಲಿ ಪ್ರವೇಶ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ!

    ಗಡಿಯಿಂದ ಸುಮಾರು 2 ಕಿಮೀ ದೂರದಲ್ಲಿರುವ ಹುಮ್ಲಾದ ನಾಮ್ಖಾ ಗೌಪಾಲಿಕಾ (ಗ್ರಾಮೀಣ ಪುರಸಭೆ)ಯ ಲ್ಯಾಪ್ಚಾ – ಲಿಮಿ ಪ್ರದೇಶದಲ್ಲಿ ಈ ಅತಿಕ್ರಮಣ ನಡೆದಿದ್ದು, ಸ್ಥಳೀಯ ಗ್ರಾಮ ಪರಿಷತ್ತಿನ ಅಧ್ಯಕ್ಷ ವಿಷ್ಣು ಬಹದ್ದೂರ್ ಲಾಮಾ ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿತ್ತು. ಲ್ಯಾಪ್ಚಾ ಗ್ರಾಮದ ಲಿಮಿ ಗ್ರಾಮದಲ್ಲಿ ಚೀನಾ ಸೈನಿಕರು ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಅವರು ಹೇಳಿದ್ದರು.

    ಇದನ್ನೂ ಓದಿ: ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

    ಈ ಪ್ರದೇಶಕ್ಕೆ ಟಿಬೆಟ್ ಗಡಿಯೂ ಸಂಪರ್ಕಿಸಿರುವುದರಿಂದ ಹಾಗೂ ಕೈಲಾಶ್ ಮಾನಸ ಸರೋವರದ ಸ್ಪಷ್ಟ ನೋಟ ನೀಡುವ ಸ್ಥಳವಾಗಿರುವುದರಿಂದ ಚೀನಾ ಈ ಪ್ರದೇಶದ ಮೇಲೆ ಕಣ್ಣು ಹಾಕಿದ್ದು, ಈ ಮೂಲಕ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಹುನ್ನಾರ ನಡೆಸಿದೆ ಎನ್ನಲಾಗಿದೆ.

    ಆಗಸ್ಟ್ 30 ಮತ್ತು ಸೆಪ್ಟೆಂಬರ್ 9ರ ನಡುವೆ ಜಿಲ್ಲಾ ಅಧಿಕಾರಿಗಳ ತಂಡ ಭೇಟಿ ನೀಡಿ, ತನ್ನ ವರದಿಯನ್ನು ನೇಪಾಳದ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದೆ.

    ಸುಮಾರು 10 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ರಸ್ತೆ ನಿರ್ಮಿಸುವಾಗ, ಚೀನಾವು ಲ್ಯಾಪ್ಚಾ – ಲಿಮಿಯಲ್ಲಿ ಕಟ್ಟಡ ನಿರ್ಮಿಸಿತ್ತು. ಕಟ್ಟಡ ನಿರ್ಮಾಣಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿತ್ತು. ಆಗ ಚೀನಾ, ಇಲ್ಲಿ ಪಶು ವೈದ್ಯಕೀಯ ಕೇಂದ್ರ ನಿರ್ಮಾಣ ಮಾಡುತ್ತೇವೆ ಅಷ್ಟೇ, ಸರಕುಗಳ ಸಾಗಿಸುವ ಪ್ರಾಣಿಗಳಿಗಾಗಿ ನಿರ್ಮಿಸಲಾಗುತ್ತಿದೆ. ಇದರಿಂದ ಗಡಿಯ ಎರಡೂ ಬದಿಗಳ ಜನರಿಗೆ ಅನುಕೂಲವಾಗಲಿದೆ ಎಂದು ಚೀನಾ ಹೇಳಿತ್ತು. ಆಗ ನೇಪಾಳ ಮೌನವಾಗಿತ್ತು. ಇದೀಗ ಚೀನಾ ಒಂದಾದ ಮೇಲೊಂದರಂತೆ ಒಂಬತ್ತು ಕಟ್ಟಡಕ್ಕೆ ತನ್ನ ಆಕ್ರಮಣವನ್ನು ವಿಸ್ತರಿಸಿರುವುದಾಗಿ ತಿಳಿದುಬಂದಿದೆ.

    ಚೀನಾ ನೇಪಾಳಿ ಪ್ರದೇಶವನ್ನು ಅದರ ಅರಿವಿಲ್ಲದೆ ಆಕ್ರಮಿಸಿಕೊಂಡಿರುವುದು ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಚೀನಾ ನೇಪಾಳದ ಗೂರ್ಖಾ ಜಿಲ್ಲೆಯ ರುಯಿ ಗ್ರಾಮವನ್ನು ತನ್ನ ಪ್ರಾಂತ್ಯಗಳೊಂದಿಗೆ ವಿಲೀನಗೊಳಿಸಿದೆ ಎಂದು ವರದಿಯಾಗಿದೆ.

    ಸದನದಲ್ಲಿ ಸಂಸದರ ಹುಚ್ಚಾಟ: ಉಪವಾಸ ಅಂತ್ಯಗೊಳಿಸಿದ ಉಪಸಭಾಪತಿ

    ತುಂಗಭದ್ರಾ ನದಿಯ ಸೇತುವೆ ದಿಢೀರ್​ ಕುಸಿತ: ನಸುಕಿನಲ್ಲಿ ತಪ್ಪಿದ ಭಾರಿ ಅನಾಹುತ- ಲಾರು, ಕಾರು ಜಖಂ

    ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts