More

    ಸದನದಲ್ಲಿ ಸಂಸದರ ಹುಚ್ಚಾಟ: ಉಪವಾಸ ಅಂತ್ಯಗೊಳಿಸಿದ ಉಪಸಭಾಪತಿ

    ನವದೆಹಲಿ: ರಾಜ್ಯಸಭೆಯಲ್ಲಿ ಭಾನುವಾರ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ವಿರೋಧಪಕ್ಷಗಳ ಸಂಸದರು ತಮ್ಮೊಂದಿಗೆ ಅಶಿಸ್ತಿನಿಂದ ವರ್ತಿಸಿದ್ದನ್ನು ಖಂಡಿಸಿ 24 ಗಂಟೆ ಉಪವಾಸ ನಿರಶನ ನಡೆಸಿದ್ದ ರಾಜ್ಯಸಭೆ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಇಂದು ಬೆಳಗ್ಗೆ ನಿರಶನ ಅಂತ್ಯಗೊಳಿಸಿದ್ದಾರೆ.

    ನಿನ್ನೆ ಬೆಳಗ್ಗೆಯಿಂದ 24 ತಾಸುಗಳ ಕಾಲ ಉಪವಾಸ ವ್ರತ ಮಾಡಿದ್ದ ಹರಿವಂಶ್ ಅವರು ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜನ್ಮದಿನವಾದ ಬೆಳಗ್ಗೆ ನಿರಶನ ಕೊನೆಗೊಳಿಸುವುದಾಗಿ ಹೇಳಿದ್ದಾರೆ.

    ನಮ್ಮ ನಿರಶನದಿಂದ ಅವರ (ಪ್ರತಿಪಕ್ಷಗಳ ನಾಯಕರ) ಸ್ವಯಂ ಆತ್ಮಶುದ್ಧಿಗೆ ಮತ್ತು ಪರಿವರ್ತನೆಗೆ ಸ್ಫೂರ್ತಿಯಾಗಿರಬಹುದು ಎಂದು ಅವರು ಹೇಳಿದ್ದಾರೆ.
    ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಮಂಗಳವಾರ ಬರೆದಿರುವ ಸುದೀರ್ಘ ಪತ್ರದಲ್ಲಿ ಅವರು, ಭಾನುವಾರ ರಾಜ್ಯಸಭೆಯಲ್ಲಿ ನಡೆದ ಗದ್ದಲದಿಂದಾಗಿ ಎರಡು ರಾತ್ರಿ ತಮ್ಮಿಂದ ನಿದ್ದೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು.

    ಭಾನುವಾರ ಸದನದಲ್ಲಿ ನಡೆದ ಗದ್ದಲ, ಕೋಲಾಹಲ, ಸಭಾಪತಿ ಪೀಠಕ್ಕೆ ವಿರೋಧಪಕ್ಷಗಳ ಸದಸ್ಯರ ಮುತ್ತಿಗೆ ಮತ್ತು ತಮ್ಮೊಂದಿಗೆ ಅಮಾನವೀಯ ರೀತಿಯಲ್ಲಿ ನಡೆದುಕೊಂಡ ವರ್ತನೆಗಳ ಬಗ್ಗೆ ಉಲ್ಲೇಖಿಸಿದ್ದರು. ‘ಪ್ರಜಾಪ್ರಭುತ್ವದ ಹೆಸರಿನಲ್ಲಿ ಸದನದ ಗೌರವಾನ್ವಿತ ಸದಸ್ಯರು ದೈಹಿಕ ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ್ದರು.

    ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ; ಪೀಠದ ಎದುರು ಪ್ರತಿಭಟನೆ

    ವಿಪಕ್ಷ ಸದಸ್ಯರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾ ಮಾರ್ಗ ಅನುಸರಿಸಿದ್ದಾರೆ. ಸಭಾಪತಿ ಸ್ಥಾನಕ್ಕೆ ಲಗ್ಗೆ ಹಾಕಿ ಪೀಠಾಸೀನ ವ್ಯಕ್ತಿಗೆ ಬೆದರಿಕೆ ಹಾಕಿ ಸದನದ ಘನತೆ ಮತ್ತು ಗೌರವವನ್ನು ಗಾಳಿಗೆ ತೂರಿದ್ದಾರೆ ಎಂದು ಹರಿವಂಶ ನಾರಾಯಣ ಸಿಂಗ್ ತೀವ್ರ ಅಸಮಾಧಾನ ಹೊರಹಾಕಿದ್ದರು.

    ಬುದ್ಧನಿಂದ ಸ್ಫೂರ್ತಿ ಪಡೆದಿರುವ ತಾವು, ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರಲ್ಲಿ ಸ್ವಯಂ ಶುದ್ಧೀಕರಣದ ಪ್ರೇರಣಿ ಮೂಡುವ ಆಶಯದೊಂದಿಗೆ ಒಂದು ದಿನದ ಉಪವಾಸ ಆಚರಿಸುವುದಾಗಿ ತಿಳಿಸಿದ್ದರು ನಿರಶನ ಕೈಗೊಂಡಿದ್ದರು.

    ತುಂಗಭದ್ರಾ ನದಿಯ ಸೇತುವೆ ದಿಢೀರ್​ ಕುಸಿತ: ನಸುಕಿನಲ್ಲಿ ತಪ್ಪಿದ ಭಾರಿ ಅನಾಹುತ- ಲಾರು, ಕಾರು ಜಖಂ

    ನಾಲ್ಕನೆಯ ಗಂಡನದ್ದೂ ರಕ್ತಸಿಕ್ತ ದೇಹ ನೋಡಲಾರೆ: ಶಾಂತಿ ಸ್ಥಾಪಿಸಿ… ತುಂಬು ಗರ್ಭಿಣಿಯ ಗೋಳಾಟ

    ಆನ್​ಲೈನ್​ ಕ್ಲಾಸ್​ಗೆಂದು ಮೊಬೈಲ್​ ಕದ್ದ ಬಾಲಕ: ಇನ್ಸ್​ಪೆಕ್ಟರ್​ ನೀಡಿದ ‘ಶಿಕ್ಷೆ’ಗೆ ಶ್ಲಾಘನೆಗಳ ಮಹಾಪೂರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts