More

    ಕಾಂಗ್ರೆಸ್‌ಗೆ ಶುರುವಾಗಿದೆ ಅಂತ್ಯ- ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

    ಗಂಗಾವತಿ: ಮರ್ಯಾದಾ ಪುರುಷ ಶ್ರೀರಾಮ ಅಸ್ತಿತ್ವ ಪ್ರಶ್ನಿಸಿದ್ದ ಕಾಂಗ್ರೆಸ್ ಹಿಂದು ವಿರೋಧಿಯಾಗಿದೆ. ಬಜರಂಗ ದಳ ನಿಷೇಧಿಸುವ ಪ್ರಣಾಳಿಕೆ ನೀಡಿರುವ ಕಾಂಗ್ರೆಸ್‌ಗೆ ಅಂತ್ಯ ಶುರುವಾಗಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ತಾಲೂಕಿನ ಹನುಮನಹಳ್ಳಿ ಬಳಿ ಅಂಜನಾದ್ರಿ ಬೆಟ್ಟದ ಪಾದಗಟ್ಟೆ ಬಳಿ ಹಿಂದು ಸಂಘಟನೆಗಳಿಂದ ಸೋಮವಾರ ಆಯೋಜಿಸಿದ್ದ ಸಹಸ್ರ ಕಂಠಗಳ ಹನುಮಾನ್ ಚಾಲೀಸಾ ಪಠಣ ಮತ್ತು ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಾಮನ ಜನ್ಮಸ್ಥಳ ಪ್ರಶ್ನಿಸಿ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿ ರಾಮನು ಸೇತುವೆ ನಿರ್ಮಿಸಿಲ್ಲ ಎಂದು ಅಪಪ್ರಚಾರ ಮಾಡಿರುವ ಕಾಂಗ್ರೆಸಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಿದೆ.

    ಇದನ್ನೂ ಓದಿ: ಮುಂದಿನ 6 ದಿನಗಳಲ್ಲಿ ಹಿಂದುಗಳು ಏನೆಂಬುದನ್ನು ತೋರಿಸುತ್ತೇವೆ; ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ

    ಕರ ಸೇವಕರ ಮೇಲೆ ಗುಂಡು ಹಾರಿಸಿದ್ದ ಕಾಂಗ್ರೆಸ್ ಸರ್ಕಾರ, ಆಂಜನೇಯನ ಹುಟ್ಟಿದ ದಿನಾಂಕ ಬಗ್ಗೆಯೂ ಲೇವಡಿ ಮಾಡಿದೆ. ಅಧಿಕಾರಕ್ಕಾಗಿ ಉಚಿತ ಯೋಜನೆಗಳ ಗ್ಯಾರಂಟಿ ನೀಡುವ ಆ ಪಕ್ಷಕ್ಕೆ ದೇಶದ ಆದಾಯದ ಬಗ್ಗೆ ಚಿಂತನೆಯಿಲ್ಲ. ವಾರ್ಷಿಕ ಮೂರು ಲಕ್ಷ ಕೋಟಿ ರೂ.ಗಳನ್ನು ಯಾವ ರೀತಿಯಲ್ಲಿ ಹೊಂದಿಸುವುದನ್ನು ಜನರೇ ತಿಳಿದುಕೊಳ್ಳಬೇಕಿದೆ.

    ಶ್ರೀರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370 ವಿಧೇಯಕ ತೆಗೆದು, ಶಾಂತಿ ನೆಲೆಸಲು ಬಿಜೆಪಿ ಕಾರಣವಾಗಿದೆ. ಡಿಟಿಟಲ್ ವಹಿವಾಟು ಮತ್ತು ಸರ್ಜಿಕಲ್ ಸ್ಟ್ರೈಕ್ ಮೈಲಿಗಲ್ಲಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಕಾಂಗ್ರೆಸ್ ನಿರ್ನಾಮಕ್ಕೆ ನಾಂದಿ ಹಾಡಬೇಕಿದೆ ಎಂದರು.

    ಆಂಜನೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮನಾಮ ಜಪದ ಜತೆಗೆ ಜೈಬಜರಂಗ ಬಲಿ ೋಷಣೆ ಮೊಳಗಿದವು.

    ದೆಹಲಿ ಸರ್ಕಾರದ ವಿಪಕ್ಷ ನಾಯಕ ಅಜಯ್ ಮಹಾವರ್, ಆನೆಗೊಂದಿ ರಾಜವಂಶಸ್ಥ ರಾಜಾ ಶ್ರೀಕೃಷ್ಣದೇವರಾಯ, ಬಿಜೆಪಿ ಉಸ್ತುವಾರಿ ಪ್ರಭು ಕಪಗಲ್, ಮಾಜಿ ಉಪಾಧ್ಯಕ್ಷ ಸಂತೋಷ ಕೆಲೋಜಿ, ಹಿಂದು ಪರ ಸಂಘಟನೆ ಪದಾಧಿಕಾರಿಗಳಾದ ಅಯ್ಯನಗೌಡ ಹೇರೂರು, ಜಗದೀಶ ಹೇರೂರು, ನೀಲಕಂಠಪ್ಪ ನಾಗಶೆಟ್ಟಿ, ಪ್ರಶಾಂತ ಚಿತ್ರಗಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts