More

    ರಸ್ತೆ ಅತಿಕ್ರಮಣ ತೆರವುಗೊಳಿಸಲು ಕಾಕಿ ಓಣಿ ನಿವಾಸಿಗಳ ಆಗ್ರಹ

    ರಾಣೆಬೆನ್ನೂರ: ನಗರದ ಕುರುಬಗೇರಿ ಕಾಕಿ ಓಣಿಯ ಸಿಟಿಎಸ್ ನಂ. 3047ರಲ್ಲಿ ವ್ಯಕ್ತಿಯೊಬ್ಬರು ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದು, ಕೂಡಲೇ ಇದನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
    ಈ ಕುರಿತು ನಗರಸಭೆಗೆ ಎರಡು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿಯ ಸಂಗತಿಯಾಗಿದೆ. ನಗರಸಭೆಯಿಂದ ಯಾವುದೇ ಪರವಾನಗಿ ಪಡೆಯದೆ ಕಟ್ಟಡ ನಿರ್ಮಿಸಲಾಗುತ್ತಿದೆ. ಇಲ್ಲಿನ ರಸ್ತೆಯು ಅತ್ಯಂತ (10 ಅಡಿ) ಕಿರಿದಾಗಿದ್ದು ಅತಿಕ್ರಮಣ ಮಾಡಿ ನಿರ್ಮಿಸಲಾಗುತ್ತಿರುವ ಕಟ್ಟಡದಿಂದಾಗಿ ದ್ವಿಚಕ್ರ ವಾಹನಗಳು ಕೂಡ ಸಂಚರಿಸಲು ಪ್ರಯಾಸ ಪಡುವಂತಾಗಿದೆ.
    ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಆಯುಕ್ತರು ಸ್ಥ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಶ್ರೀನಿವಾಸ ಕಾಕಿ, ಪರುಶುರಾಮ ಸಾಲಗರ, ಎನ್.ಜಿ. ಕುಸನೂರ, ಶಂಕರ ಕೆ., ಶ್ರೀಕಾಂತ ಕಾಕಿ, ಲಲಿತ ಎಸ್, ಲಿಂಗರಾಜ ಬೂದನೂರ, ರಾಜು ಬೂದನೂರ, ಎಂ.ಎಂ. ಕೋಳೂರ, ರೂಪಾ ಕಾಕಿ, ಪ್ರಕಾಶ ಜಿ. ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts