More

    ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ: ಸ್ನೇಹಮಯಿ, ಅಪರೂಪದ ವ್ಯಕ್ತಿ ಎಂದು ಕೊಂಡಾಡಿದ ದೇಶ

    ಭೂತಾನ್‌: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದವರು ಅದೆಷ್ಟೋ ವಿದೇಶಿಗರು. ಈಗ ಭೂತಾನ್‌ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಭಾರತದ ಪ್ರಧಾನಿಗೆ ನೀಡುವ ಮೂಲಕ ಭಾರತದ ಹಿರಿಮೆಯನ್ನು ಎತ್ತಿಹಿಡಿದಿದೆ.

    ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಾಗ್ ಪೆಲ್ ಗಿ ಖೋರ್ಲೋವನ್ನು (Ngadag Pel gi Khorlo) ಈ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅರ್ಹರು. ಅವರಂಥ ಸ್ನೇಹಮಯಿ, ಬೇಷರತ್‌ ಬೆಂಬಲ ನೀಡುವ ವ್ಯಕ್ತಿಯನ್ನು ನಾವು ನೋಡಿಲ್ಲ. ಇಂಥದ್ದೊಂದು ಅಪರೂಪದ ವ್ಯಕ್ತಿಗೆ ನಮ್ಮ ದೇಶದಿಂದ ಕೊಡುತ್ತಿರುವ ಚಿಕ್ಕ ಕಾಣಿಕೆ ಇದು ಎಂದಿದ್ದಾರೆ ದೇಶದ ಮುಖ್ಯಸ್ಥರಾದ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‌ಚುಕ್.

    ಕರೊನಾದ ಸಮಯದಲ್ಲಿ ಮೋದಯವರು ನೀಡಿರುವ ಬೆಂಬಲ, ಸ್ನೇಹಪರತೆಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಭೂತಾನ್‌ ಹೇಳಿದೆ.

    ಮೋದಿಯವರು ಅದ್ಭುತ ವ್ಯಕ್ತಿ. ಈ ಪ್ರಶಸ್ತಿಯ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಭಾರತವು ಎಲ್ಲಾ ಸಂದರ್ಭಗಳಲ್ಲಿಯೂ ಭೂತಾನ್​ಗೆ ಬೆಂಬಲವಾಗಿ ನಿಂತಿದೆ. ಕರೊನಾದಂಥ ಸಂಕಟ ಸಮಯದಲ್ಲಿ ಭಾರತ ಮಾಡಿರುವ ಸಹಾಯಕ್ಕೆ ಬೆಲೆ ಕಟ್ಟಲಾಗದು. ಆಪದ್ಭಾಂಧವನಾಗಿ ನಿಂತ ಭಾರತದ ಪ್ರಧಾನಿ ಮೋದಿಯವರಿಗೆ ಈ ಮೂಲಕ ನಾವು ಅಭಿನಂದನೆ ಸಲ್ಲಿಸುತ್ತಿದ್ದೇವೆ’ ಎಂದು ವಾಂಗ್‌ಚುಕ್ ಹೇಳಿದ್ದಾರೆ.

    ಭಾರತವು ಭೂತಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿದೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಆಡಳಿತವಿದೆ. ಮೋದಿಯವರ ಆಡಳಿತದ ಕೋವಿಡ್ -19 ಲಸಿಕೆಗಳ ಉಡುಗೊರೆಯನ್ನು ಸ್ವೀಕರಿಸಿದ ಮೊದಲ ದೇಶ ಭೂತಾನ್. ಆ ಲಸಿಕೆಗಳನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿತ್ತು. ಈ ವರ್ಷದ ಆರಂಭದಲ್ಲಿಯೇ ಭೂತಾನ್‌, ಭಾರತದಿಂದ 1.5 ಲಕ್ಷ ಡೋಸ್‌ಗಳ ಕೋವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಸ್ವೀಕರಿಸಿದೆ. ನಂತರ 4 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ಇದರಿಂದಾಗಿ ಪುಟ್ಟ ಭೂತಾನ್‌ ಕರೊನಾದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿದೆ.

    ಕಳೆದ ವರ್ಷ, ಮೋದಿ ಜಲವಿದ್ಯುತ್ ಕ್ಷೇತ್ರದ ಪಾಲುದಾರಿಕೆಯನ್ನು ವೈವಿಧ್ಯಗೊಳಿಸಲು ಮತ್ತು ಬಾಹ್ಯಾಕಾಶ, ಶಿಕ್ಷಣದಲ್ಲಿ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸಲು ಭೂತಾನ್‌ಗೆ ಭೇಟಿ ನೀಡಿದ್ದನ್ನು ಇಲ್ಲಿ ಉಲ್ಲೇಖಾರ್ಯ.

    ಅಂಗವಿಕಲೆಯ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ: ಭಾವುಕನಾದ ಸಹೋದರ- ಶ್ಲಾಘನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts